ಕಾಂಗ್ರೆಸ್ ಕೊಟ್ಟಿದ್ದು​ ₹85 ಸಾವಿರ ಕೋಟಿ, ಬಿಜೆಪಿ ಕೊಡ್ತಿರೋದು ₹4 ಕೋಟಿ ಪರಿಹಾರ. ಅಡಿಕೆ ಕಾವಲು ಸಮಿತಿಯ ರಕ್ಷಣೆಯಲ್ಲಿಯೇ ಅಡಿಕೆ ದರ ಕುಸಿತ

Malenadu Today

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖಂಡ ಆರ್​ಎಂ ಮಂಜುನಾಥ್​ಗೌಡರು, ಅಡಿಕೆ ದರ ಕುಸಿತದ ಸಂಬಂಧ ಬಿಜೆಪಿ ಪಕ್ಷವನ್ನು ದೂರಿದ್ದಾರೆ.  ಕಾಂಗ್ರೆಸ್‌ ಅವಧಿಯಲ್ಲಿ ಅಡಿಕೆಗೆ ಕೊಳೆರೋಗ ಬಂದಾಗ ₹85 ಸಾವಿರ ಕೋಟಿ ಪರಿಹಾರ ಒದಗಿಸಿದೆ.ಎಲೆಚುಕ್ಕಿ ರೋಗಕ್ಕೆ ಕೇವಲ ₹ 4 ಕೋಟಿ ಪರಿಹಾರ ಭರವಸೆ ನೀಡಿದ್ದರು ಇನ್ನೂ ಈಡೇರಿಲ್ಲ. ಗೃಹಸಚಿವ ಆರಗ ಜ್ಞಾನೇಂದ್ರರ ನೇತೃತ್ವದ ಅಡಿಕೆ ಕಾವಲು ಸಮಿತಿ ರಕ್ಷಣೆಯಲ್ಲೆ ಅಡಿಕೆ ಧಾರಣೆ ₹58 ಸಾವಿರದಿಂದ ₹38 ಸಾವಿರಕ್ಕೆ ಕುಸಿತ ಕಂಡಿದೆ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಆಕ್ರೋಶ ಹೊರ ಹಾಕಿದರು.

ಇದನ್ನು ಸಹ ಓದಿ : ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಪಟ್ಟಣದಲ್ಲಿರುವ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಸಹಕಾರ ವಿಭಾಗ ಹಾಗೂ ಅಭಿನಂದನಾ ಸಮಿತಿಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,  ಓರ್ವ ಪ್ರಧಾನ ಮಂತ್ರಿ ತಾಲ್ಲೂಕು ಮಟ್ಟದಲ್ಲಿ ಚುನಾವಣೆ ಪ್ರಚಾರ ನಡೆಸಿದ ಉದಾಹರಣೆಗಳಿಲ್ಲ.  ಗುಜರಾತ್‌ ಚುನಾವಣೆಯಲ್ಲಿ ಮೋದಿ 28 ದಿನಗಳ ಪ್ರವಾಸ ಕೈಗೊಂಡು ಮತಯಾಚನೆ ಮಾಡಿದ್ದಾರೆ. ಚುನಾವಣೆ ನೀತಿ ಸಂಹಿತಿ ಉಲ್ಲಂಘಿಸಿ 10 ಕಿಮೀ ರ್ಯಾಲಿ ಮಾಡಿದ್ದು ಚುನಾವಣಾ ಆಯೋಗ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಪದವೀದರರು ಲೋಟ, ತಟ್ಟೆ ತೊಳೆಯುವ ಸ್ಥಿತಿಗೆ ದೇಶ ತಲುಪಿದೆ. ರೈಲ್ವೆ, ಬಸ್‌, ಆಸ್ಪತ್ರೆ, ಶಿಕ್ಷಣ ಎಲ್ಲವೂ ಮಾರಾಟವಾಗುತ್ತಿದೆ. ಬಿಜೆಪಿಗೆ ಸೇರುವವರ ಸಂಖ್ಯೆ ಕಡಿಮೆಯಾಗಿದ್ದು ಪಕ್ಷದವರನ್ನೇ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವುದು ಶಿವಮೊಗ್ಗದಲ್ಲಿ ನಡೆದಿದೆ ಎಂದು ಟೀಕಿಸಿದರು.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link

Share This Article