ಶಿವಮೊಗ್ಗ : ಆನಂದಪುರ ವಲಯ ಅರಣ್ಯದ ಚೋರಡಿ ತುಪ್ಪೂರು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಅದೇ ರೀತಿ ವನ್ಯ ಪ್ರಾಣಿಗಳ ಭೇಟೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಜಮೀನಿಗೆ ಲಗ್ಗೆ ಇಡುವ ಕಾಡುಹಂದಿಗಳ ಬೇಟೆಗೆ ಉರುಳು ಹಾಕುವುದು, ಎಲೆಕ್ಟ್ರಿಕ್ ಕರೆಂಟ್ ಕೊಡುವುದು ಸಾಮಾನ್ಯ ಎಂಬಂತಾಗಿದೆ.
ಇದಕ್ಕೆ ಪೂರಕ ಎಂಬಂತೆ, ಆನಂದಪುರ ರೇಂಜ್ ನ ಚೋರಡಿ ಸಮೀಪದ ಕೋಣೆಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಹಾಕಿದ ಉರುಳಿಗೆ ಸಿಲುಕಿ ಚಿರತೆಯೊಂದು ಒದ್ದಾಡಿ ಪ್ರಾಣಬಿಟ್ಟಿದೆ.
ಕಾರಿನ ವ್ಹೀಲ್ನೊಳಗೆ ಸಿಕ್ಕಿಬಿದ್ದ ಹಾವು
ಒದ್ದಾಡಿ ಒದ್ದಾಡಿ ಪ್ರಾಣಬಿಟ್ಟ ಚಿರತೆ
ಇನ್ನೂ ಉರುಳಿಗೆ ಸಿಲುಕಿ ಚಿರತೆ ಒದ್ದಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಅನಂದಪುರ ಅರಣ್ಯಾಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಗಿನ್ನು ಚಿರತೆ ಜೀವಂತವಾಗಿತ್ತು. ಸುಮಾರು 5 ರಿಂದ 6 ವರ್ಷದ ಗಂಡು ಚಿರತೆ ಸದೃಢವಾಗಿದ್ದು, ಬದುಕಿಸಬಹುದಾದ ಸಾಧ್ಯತೆಗಳು ಹೆಚ್ಚಿತ್ತು ಎಂದು ಮೂಲಗಳು ತಿಳಿಸಿವೆ. ಅರಣ್ಯಾಧಿಕಾರಿಗಳು ಚಿರತೆಯನ್ನು ಬದುಕಿಸಲು ಸ್ಥಳೀಯ ಪಶುವೈದ್ಯ ರವಿಯವರನ್ನು ಸಂಪರ್ಕಿಸಿದಾಗ, ಅವರು ವನ್ಯಜೀವಿ ವೈದ್ಯರನ್ನು ಕರೆಸುವಂತೆ ಸಲಹೆ ನೀಡಿದ್ದಾರೆ.ಚಿರತೆಯನ್ನು ಬದುಕಿಸಲು ಅರವಳಿಕೆ ಬಂದೂಕು (ಡಾರ್ಟ್ ಗನ್ ) ಪ್ರಯೋಗಿಸಬೇಕು. ಆ ವ್ಯವಸ್ಥೆ ನನ್ನ ಬಳಿ ಇಲ್ಲ ಎಂದು ಹೇಳಿದ್ದಾರೆ.
ನಂತರ ಅರಣ್ಯಾಧಿಕಾರಿಗಳು ತ್ಯಾವರೆಕೊಪ್ಪ ಹುಲಿಸಿಂಹಧಾಮದ ವೈದ್ಯರನ್ನು ಸಂಪರ್ಕಿಸಿದ್ದಾರೆ. ಸಫಾರಿಯ ವೈದ್ಯರು ಡಾರ್ಟ್ ಗನ್ ತೆಗೆದುಕೊಂಡು ತಕ್ಷಣ ಸ್ಥಳಕ್ಕೆ ಧಾವಿಸಿದ ಹೊತ್ತಲ್ಲೇ ಚಿರತೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಚಿರತೆ ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತಾದರೂ. ಇಂತಹ ಹಲವು ಸಂದರ್ಭಗಳಲ್ಲಿ ಡಾರ್ಟ್ ಎಕ್ಸ್ ಪರ್ಟ್ ಗಳನ್ನು ಕರೆಸಿ, ಉಳಿಸಿದ ಉದಾಹರಣೆಗಳು ಕಣ್ಣ ಮುಂದಿದೆ.
ಇದನ್ನು ಸಹ ಓದಿ : BREAKING NEWS : ಶಿವಮೊಗ್ಗ KSRTC ಬಸ್ಸ್ಟಾಂಡ್ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ
ಜೀವ ಉಳಿಸಬಹುದಿತ್ತೇನೋ?
ಇಲ್ಲಿ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ತಾಳಿದರು ಎಂದು ಆರೋಪಿಸುತ್ತಿಲ್ಲ. ಬದಲಾಗಿ ತ್ವರಿತಗತಿಯನ್ನು ಪ್ಲಾನ್ ಮಾಡಿದ್ರೂ, ಚಿರತೆಯನ್ನು ಸಾವಿನಿಂದ ಪಾರು ಮಾಡಬಹುದಿತ್ತೇನೋ ಎಂಬ ಅಭಿಪ್ರಾಯ ಪ್ರಾಣಿಪ್ರೀಯರಲ್ಲಿ ಕೇಳಿಬರುತ್ತಿದೆ. ಇನ್ನು ಚಿರತೆ ಉರುಳಿಟ್ಟವರು ಯಾರು ಎಂಬುದನ್ನು ಅರಣ್ಯಾಧಿಕಾರಿಗಳು ತನಿಖೆ ಮಾಡಬೇಕಿದೆ. ಚಿರತೆಯ ಪ್ರಾಣವಂತೂ ಹೋಯ್ತು..ಆದ್ರೆ ಕಾಡುಪ್ರಾಣಿ ಬೇಟೆಗೆ ಉರುಳಿಟ್ಟವರನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಮೀನಾಮೇಷ ಎಣಿಸಿದರೆ ಅದಕ್ಕೆ ಕ್ಷಮೆ ಎಂಬುದಿಲ್ಲ.
ಹೆಚ್ಚಾಗಿದೆ ಚಿರತೆಗಳ ಸಂಖ್ಯೆ
ಈ ಭಾಗದಲ್ಲಿ ಚಿರತೆಗಳ ಸಂಖ್ಯೆ ಸಾಕಷ್ಟು ಹೆಚ್ಚಳವಾಗಿದೆ. ಅರಣ್ಯಾಧಿಕಾರಿಗಳು ಈ ಭಾಗದ ಜನರಿಗೆ ಉರುಳು ಹಾಕದಂತೆ ವಿದ್ಯುತ್ ಬೇಲಿ ಅಳವಡಿಸದಂತೆ ಅರಿವು ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ. ಇತ್ತಿಚ್ಚಿಗೆ ಇದೇ ಭಾಗದ ಚನ್ನೆನಹಳ್ಳಿಯಲ್ಲಿ ವಿದ್ಯುತ್ ಬೇಲಿಗೆ ಎರಡು ಕಾಡಾನೆಗಳು ಸಾವನ್ನಪ್ಪಿದ ಘಟನೆ ಇನ್ನು ಹಸಿರಾಗಿಯೇ ಇದೆ. ರೈತರು ತಮ್ಮ ಹೊಲ ಗದ್ದೆ ತೋಟಗಳ ರಕ್ಷಣೆ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಅದೇ ರೀತಿ ವನ್ಯಪ್ರಾಣಿಗಳ ರಕ್ಷಣೆ ಮಾಡಬೇಕಾಗಿರುವುದು ಕೂಡ ಅರಣ್ಯ ಇಲಾಖೆಯ ದೊಡ್ಡ ಜವಬ್ದಾರಿಯಾಗಿದೆ.
ಇದನ್ನು ಸಹ ಓದಿ: ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್
ಇಂದು ಚಿರತೆ ಸಾವನ್ನಪ್ಪಿದ ಕಾಡಿನ ಪರಿಸರದಲ್ಲಿಯೇ ಸರ್ಕಾರಿ ನಿಯಮದಂತೆ ಪಂಚೆನಾಮೆ ನಡೆಸಿ ಅಂತ್ಯಕ್ರೀಯೆ ನೆರವೇರಿಸಲಾಯಿತು. ಈ ವೇಳೆ ಸಾಗರ ಎಸಿಎ್ ಶ್ರೀಧರ್, ವಲಯ ಅರಣ್ಯಾಕಾರಿ ಅರವಿಂದ್, ಡಿಆರ್ ಎಫ್ ಓ, ದೀಪಕ್ಸಿಂಗ್, ಸೋಮಶೇಖರ್, ಅಶೋಕ್, ಮುಬಾರಕ್ ಬಾಷಾ, ಗಾರ್ಡ್ಗಳಾದ ಬಸವರಾಜ, ಮಂಜುನಾಥ ಮಲ್ಲಾದೊರೆ, ಗ್ರಾಪಂ ಸದಸ್ಯ ಸುದರ್ಶನ ಹಾಜರಿದ್ದರು. ಚಿರತೆ ಸಾವು ಸಂಬಂಧ ಅರಣ್ಯ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ
ನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link