| Today Investigation Report | ನಿಮ್ಮನೆ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳರು ಹೇಗೆ ಕದಿಯುತ್ತಾರೆ ಗೊತ್ತಾ?..

malenadutoday.com 02-12-2021 /cow theft in Shivamogga district / JP Story

ನಮ್ಮ ದೇಶದ ವ್ಯವಸ್ಥೆಯಲ್ಲಿ ಮಾಂಸಹಾರಕ್ಕೆ ಸರಿಯಾದ ಮಾರುಕಟ್ಟೆ ಸ್ವರೂಪ ಎಂಬುದು ಇಲ್ಲದಿರುವುದು ದನದ ಮಾಂಸಕ್ಕೆ ಮಾತ್ರ. ಹಂದಿ,ಕುರಿ, ಕೋಳಿ, ಮೊಲದಂತ ಪ್ರಾಣಿ ಪಕ್ಷಿಗಳ ಮಾಂಸಕ್ಕೆ ಸರ್ಕಾರ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಅವುಗಳ ಸಾಗಾಣಿಕೆಯಿಂದ ಹಿಡಿದು ಮಾಂಸ ಮಾರಾಟದವರೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಗೋಭಕ್ಷಣೆಗೆ ದೇಶದ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದ್ರೆ ಗೋ ಹತ್ಯೆ ನಿಷೇಧವಿದೆ. ಗೋವಿನ ಮಾಂಸಕ್ಕೆ ಮಾರುಕಟ್ಟೆವ್ಯವಸ್ಥೆ ಇಲ್ಲದಿದ್ದರೂ, ಇಂದು ಗೋಮಾಂಸ ರಫ್ತಿನಲ್ಲಿ ಭಾರತ ಮಂಚೂಣಿಯಲ್ಲಿದೆ ಎಂಬುದೇ ವಿಪರ್ಯಾಸ. ಗೋಸಂರಕ್ಷಣೆ ಕಾಯ್ದೆ ಕಾನೂನುಗಳು ಇಷ್ಟೊಂದು ಕಠಿಣವಾಗಿ ಜಾರಿಯಾಗುತ್ತಿದ್ರೂ..,ಗೋವಿನ ಕಳ್ಳತನ ನಿರಂತರವಾಗಿ ಎಗ್ಗಿಲ್ಲದೆ ಸಾಗುತ್ತಿದೆ. ಕಸಾಯಿಖಾನೆಗಳನ್ನು ಸೇರುತ್ತಿವೆ.

ರೈತರ ಜೀವನಾಡಿಯಾಗಿರುವ ಗೋವು ಇಂದಿನ ಮಾರುಕಟ್ಟೆ ಬೆಲೆಯಲ್ಲಿ ತೂಗಿದರೆ 40 ರಿಂದ ಒಂದು ಲಕ್ಷದವರೆಗೂ ಬೆಲೆಬಾಳುತ್ತದೆ. ಬ್ಯಾಂಕ್ ನಲ್ಲಿ ಸಾಲ ಮಾಡಿ, ಗೋವಿನ ಹಾಲಿನಿಂದಲೇ ಬದುಕು ಕಟ್ಟಿಕೊಳ್ಳೂಬೇಕೆಂದು ಹಂಬಲಿಸಿದ ಅದೆಷ್ಟೋ ಕುಟುಂಬಗಳನ್ನು,ಇಂದು ಗೋವಿನ ಕಳ್ಳರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದಾರೆ. ಕೊಟ್ಟಿಗೆಯಲ್ಲಿದ್ದ ಹಾಲುಕೊಡುವ ಹಸುಗಳನ್ನು, ಅವು ಸದ್ದೇ ಮಾಡದಂತೆ ಕದ್ದು ಹೋಗಿದ್ದಾರೆ ಈ ಗೋಕಳ್ಳರು. ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಕದಿಯುವುದು ಸುಲಭವೇನಿಲ್ಲ ಆದ್ರೂ ಕಳ್ಳರು ತಮ್ಮ ಕೈಚಳಕ ತೋರಿಸಿ ಕದಿಯುತ್ತಾರೆಂದರೆ..ಅದಕ್ಕೆ ಉತ್ತರ ಇಲ್ಲಿದೆ. ಹಸುಗಳನ್ನು ಕದಿಯುವ ಪರಿ ನೋಡಿದ್ರೆ ನೀವು ಕೂಡ ಹೌಹಾರ್ತಿರಾ?

ವಿಧಾನ 01 ಕ್ಲೋರೋಫಾರಂ ಯುಕ್ತ ಬಟ್ಟೆಯನ್ನು ಮೂಗಿಗೆ ಹಿಡಿಯುತ್ತಾರೆ. ಹಸುಗೆ ಬಾಯೊಡ್ಲು ಹಾಕುತ್ತಾರೆ

ಹೌದು ನಿಜಕ್ಕೂ ಇದು ವಿಪರ್ಯಾಸದ ಸಂಗತಿ. ಒಂದು ಹಳ್ಳಿಯ ಮನೆಯಲ್ಲಿ ಯಾರ್ಯಾರು ಹಸುಗಳನ್ನು ಸಾಕಿದಾರೆ. ಅವುಗಳನ್ನು ಅನಾಯಾಸವಾಗಿ ಕದಿಯಲು ಇರುವ ಮಾರ್ಗವನ್ನು ಹಾಡಹಗಲೇ ಕಳ್ಳರು ಸ್ಕೆಚ್ ಹಾಕಿರ್ತಾರೆ. ರಾತ್ರಿಯಾದ ನಂತರ ವಾಹನದಲ್ಲಿ ಬರುವ ಇವರು ಸದ್ದಿಲ್ಲದೆ ಕೊಟ್ಟಿಗೆ ಬಳಿ ಹೋಗ್ತಾರೆ. ಅಲ್ಲಿ ಹಸುಗಳಿಗೆ ಕ್ಲೋರೋ ಪಾರಂ ಯುಕ್ತ ಟವಲ್ ನ್ನು ಮೂಗಿಗೆ ಹಿಡಿದು, ಬಾಯಿಗೆ ಬಾಯೊಡ್ಲು ಹಾಕುತ್ತಾರೆ. ಹಸು ಅರಚಲು ಸಾಧ್ಯವಾಗುವುದಿಲ್ಲ. ಕ್ಷಣಾರ್ದದಲ್ಲಿ ಒಂದಿಬ್ಬರು ಹಸುವಿನ ಮೂಗುದಾರ ಗಟ್ಟಿಹಿಡಿದು ಎಳೆದು ತಂದು ವಾಹನಕ್ಕೆ ತುಂಬುತ್ತಾರೆ. ಈ ಬೆಳವಣಿಗೆ ಮಾಲೀಕನಿಗೆ ಬೆಳಗಾದ್ರೆನೇ ಗೊತ್ತಾಗೋದು.

ವಿಧಾನ-02 ದನಗಳಿಗೆ ಬ್ರೆಡ್ ಮತ್ತು ಬಿಸ್ಕೇಟ್ ನೀಡಿ ಪುಸಲಾಯಿಸುವ ಕಳ್ಳರು

ಇನ್ನು ಬಿಡಾಡಿ ದನಗಳಾದ್ರೆ…ಅಂತಹ ದನಗಳಿಗೆ ಬ್ರೆಡ್ ಇಲ್ಲವೇ ಬಿಸ್ಕೇಟ್ ನೀಡಿ ಪುಸಲಾಯಿಸುತ್ತಾರೆ. ಅವು ಆಹಾರದ ಆಸೆಗೆ ಹತ್ತಿರ ಬರುತ್ತಿದ್ದಂತೆ ಮೂಗುದಾರ ಬಿಗಿಹಿಡಿದು ಅವುಗಳನ್ನು ಅಲ್ಲಾದಂತೆ ಮಾಡುತ್ತಾರೆ. ಕ್ಷಣಾರ್ಧದಲ್ಲಿ ವಾಹನಕ್ಕೆ ತುಂಬಿ ಪರಾರಿಯಾಗ್ತಾರೆ.

ಗೋವಿನ ಮೂಗುದಾರವೇ ಕಳ್ಳರಿಗೆ ಗ್ರಿಪ್ 


ಯಾವುದೇ ಹಸು ಎತ್ತುಗಳಾಗಲಿ ಅವುಗಳನ್ನು ಮೂಗುದಾರದಿಂದಲೇ ನಿಯಂತ್ರಿಸುವುದು. ಹೀಗಾಗಿ ಕಳ್ಳರು ಮೊದಲು ಎತ್ತು ಹೋರಿ ಹಸು ಕರು, ಎಮ್ಮೆಯನ್ನು ಕದಿಯುವಾಗ ಮೊದಲು ಅವು ಅರಚದಂತೆ ಮಾಡಲು ಮುನ್ನೆಚ್ಚರಿಕೆ ವಹಿಸುತ್ತಾರೆ. ನಂತರ ಕಳ್ಳರು ಕೈ ಹಾಕೋದೇ ಮೂಗುದಾರಕ್ಕೆ. ಮೂಗುದಾರ ಬಿಗಿದಿಡಿದಾಗ ಹಸುವಿಗೆ ಅತೀವ ವೇದನೆ ಹಿಂಸೆಯಾಗುತ್ತದೆ.

ಗೋವಿನ ಸಾಕಾಣಿಕೆಗೆ ಸ್ಕಾರ್ಪಿಯೋ ಬಳಕೆ
ಇನ್ನು ಗೋವುಗಳನ್ನು ಕದ್ದ ನಂತರ ಸಾಗಿಸಲು, ಕಳ್ಳರು ಹೆಚ್ಚಾಗಿ ಸ್ಕಾರ್ಪಿಯೋ ವಾಹನವನ್ನೇ ಬಳಸುತ್ತಾರೆ. ಸ್ಕಾರ್ಪಿಯೋದ ಹಿಂಬಾಗದ ಎಲ್ಲಾ ಸೀಟುಗಳನ್ನು ಖುಲಾಸೆಗೊಳಿಸಿ, ಹಸುಗಳನ್ನು ತುಂಬಲು ಮಾತ್ರ ಬಿಟ್ಟುಕೊಂಡಿರುತ್ತಾರೆ. ಈ ವಾಹನದಲ್ಲಿ ಕದ್ದ ಗೋವುಗಳನ್ನು ತುಂಬುವುದು ಕಳ್ಳರಿಗೆ ಸುಲಭ. ಅಲ್ಲದೆ ವಾಹನವನ್ನು ಅತೀ ವೇಗವಾಗಿ ಓಡಿಸಬಹುದು. ಜನರು ಹಾಗು ಪೊಲೀಸರಿಂದ ತಪ್ಪಿಸಿಕೊಳ್ಳಬಹುದು. ಈ ವಾಹನ ರಸ್ತೆಯಲ್ಲಿ ಸಾಗುತ್ತಿದ್ದರೆ ಸಾಮಾನ್ಯವಾಗಿ ಯಾರಿಗೂ ಅನುಮಾನ ಬರುವುದಿಲ್ಲ. ಜೆಟ್ ಬ್ಲಾಕ್ ಕೂಲಿಂಗ್ ಪೇಪರ್ ಗಳನ್ನು ಕಾರಿಗೆ ಅಳವಡಿಸುವುದರಿಂದ ವಾಹನದೊಳಗೆ ಏನಿದೆ ಎಂದು ಕಂಡು ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ಹಲವು ಬಾರಿ ಪೊಲೀಸರಿಂದಲೂ ಸ್ಕಾರ್ಪಿಯೋ ವಾಹನಗಳನ್ನು ಎಸ್ಕೇಪ್ ಆಗಿರುವುದುಂಟು. ಸ್ಕಾರ್ಪಿಯೋ ಹೊರತು ಪಡಿಸಿದರೆ ಟಾಟಾ ಏಸ್, ನಂತ ವಾಹನಗಳನ್ನು ಕಳ್ಳರು ಬಳಸುತ್ತಾರೆ.

ಮಲೆನಾಡಿನ ಗಿಡ್ಡ ತಳಿ, ಸಿಂಧಿ ಕಾಡುಕೋಣ ಮಾಂಸಕ್ಕೆ ಹೆಚ್ಚಿನ ಬೇಡಿಕೆ


ದನದ ಮಾಂಸ ತಿನ್ನುವವರು ಹೆಚ್ಚಾಗಿ ಮಲೆನಾಡು ಗಿಡ್ಡ ತಳಿಗಳನ್ನೇ ಬಯಸುತ್ತಾರಂತೆ.ಸಿಂಧಿ ಜರ್ಸಿಯಂತ ಹಸುಗಳಿಗೆ ಡಿಮ್ಯಾಂಡ್ ಕಡಿಮೆ. ಇನ್ನು ಕಾಡುಕೋಣದ ಮಾಂಸವಾದ್ರೆ..ಕೇರಳದಲ್ಲಿ ಹೆಚ್ಚು ಡಿಮ್ಯಾಂಡ್. ಕೇಜಿಗೆ ಒಂದು ಸಾವಿರದ ವರೆಗೂ ಮಾಂಸ ಮಾರಾಟವಾಗುತ್ತದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಹೀಗಾಗಿ ಮಲೆನಾಡು ಗಿಡ್ಡ ತಳಿಗಳನ್ನು ಕಳ್ಳರು ಹುಡುಕಿ ಕಳ್ಳತನ ಮಾಡ್ತಾರೆ. ಇನ್ನು ಕಾಡಿನಲ್ಲಿ ಇತ್ತಿಚ್ಚಿನ ವರ್ಷಗಳಲ್ಲಿ ಕಾಡುಕೋಣದ ಬೇಟೆ ಎಗ್ಗಿಲ್ಲದೆ ಸಾಗಿದೆ. ಈ ದಂಧೆಗೆ ಕಳ್ಳರು ಮತ್ತೆ ಅದೇ ಸ್ಕಾರ್ಪಿಯೋ ವಾಹನವನ್ನೇ ಬಳಸುತ್ತಾರೆ.

ಗ್ರಾಮದಲ್ಲಿರುವ ದಲ್ಲಾಳಿಯೇ ಹಾಕಿ ಕೊಟ್ಟಿರ್ತಾನೆ ಸ್ಕೆಚ್


ದನಗಳ್ಳರು ಸೀದಾ ಯಾವುದೇ ಹಳ್ಳಿಯನ್ನು ಏಕಕಾಲಕ್ಕೆ ನುಗ್ಗೋದಿಲ್ಲ. ಅಲ್ಲಿ ಯಾರಾದ್ರೂ ತೆಕ್ಕೆಗೆ ಬೀಳೋ ವ್ಯಕ್ತಿಯನ್ನು ದಲ್ಲಾಳಿಯಾಗಿ ಮಾಡಿಕೊಂಡಿರ್ತಾರೆ. ಆತ ಗ್ರಾಮದಲ್ಲಿ ಬೀಡಾಡಿಯಾಗಿರುವ ಹಸು ಯಾವುದು..ಗೊಡ್ಡೆಮ್ಮೆ. ಗೊಡ್ಡಸು,ಹೀಗೆ ಎಲ್ಲಾ ಮಾಹಿತಿ ಆತನಿಗಿರುತ್ತದೆ. ಒಮ್ಮೆ ದನಗಳ್ಳರು ನೀಡೋ ಹಣಕ್ಕೆ ಆತ ಫಿದಾ ಆಗಿ ಪಕ್ಕಾ ದನಗಳ್ಳರೊಂದಿಗೆ ಶಾಮೀಲಾಗಿರ್ತಾನೆ. ಇತ್ತಿಚ್ಚೆಗೆ ದನಗಳ್ಳರು ಹಳ್ಳಿಯ ಮೇಲೆ ಹೋದ್ರೂ..ಆ ಹಳ್ಳಿಯ ದಲ್ಲಾಳಿಯೇ ಕದ್ದ ಹಸುಗಳನ್ನು ಕಸಾಯಿಖಾನೆ ವರೆಗೂ ಮುಚ್ಚಿಸಬೇಕಾದ ಜವಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ರಿಸ್ಕ್ ತಗೊಂಡು ಕೇವಲ ಕಳ್ಳರಷ್ಟೆ ವಾಹನದಲ್ಲಿ ಬರೋದಿಲ್ಲ. ಅವರೊಂದಿಗೆ ಸ್ಥಳೀಯ ವ್ಯಕ್ತಿ ಕೂಡ ಇರ್ತಾನೆ. ಯಾಕೇಂದ್ರೆ ಹಿಂದುಪರ ಸಂಘಟನೆಗಳೇನಾದ್ರೂ..ಕೇಳಿದ್ರೆ.ಪೊಲೀಸ್ರು ಸ್ಥಳೀಯರು ಯಾರಾದ್ರೂ ವಿಚಾರಿಸಿದ್ರೆ..ಈ ವ್ಯಕ್ತಿಯೇ ಅದಕ್ಕೆ ಉತ್ತರ ನೀಡಬೇಕು. ಕಳ್ಳರು ಮಾತಾಡೋದಕ್ಕೂ ಹೋಗೋದಿಲ್ಲ. ಈ ದಲ್ಲಾಳಿಗಳು ಇರೋ ವಿಚಾರ ಇತ್ತಿಚ್ಚೆಗೆ ರಿಪ್ಪನ್ ಪೇಟೆ ಹಾಗು ಮಾಳೂರು ಠಾಣಾ ವ್ಯಪ್ತಿಯಲ್ಲಿ ನಡೆದಿರುವ ಘಟನೆಗಳಿಂದ ಸಾಭೀತಾಗಿದೆ.

ವಾಹನದಲ್ಲಿ ಉಸಿರುಗಟ್ಟಿದ್ರೆ..ಅಲ್ಲೇ ಕತ್ತುಕೊಯ್ತು ಸಾಯಿಸ್ತಾರೆ.


ಗೋವಿನ ಕಳ್ಳರು ಒಂದು ವಾಹನದಲ್ಲಿ ಏನಿಲ್ಲವೆಂದರೂ ಎಂಟರಿಂದ 12 ಹಸುಗಳನ್ನು ಕದ್ದು ಸಾಗಿಸುತ್ತಾರೆ. ಇನ್ನು ಕೆಲವೆಡೆ ಹಸುಗಳ ಕೈಕಾಲು ಮುರಿದು ಒಂದರ ಮೇಲೊಂದರಂತೆ ಭಾರ ಹಾಕ್ತಾರೆ. ಇಕ್ಕಟ್ಟಿನಲ್ಲಿ ಹಸುಗಳೇನಾದ್ರೂ. ಉಸಿರುಗಟ್ಟಿ ಸಾಯುವ ಸಂದರ್ಭ ಎದುರಾದರೆ..ಅವು ಸಾಯುವ ಮುನ್ನವೇ ಕತ್ತು ಕೊಯ್ತಾರೆ.

ಒಂದು ಪಾಲು ಕೇರಳ ಸಾಗಿದ್ರೆ..ಮತ್ತೊಂದು ಪಾಲು ಹುಬ್ಬಳಿ ಮೂಲಕ ಬಾಂಬೆ


ಹೌದು ದನದ ಮಾಂಸದ ಸಾಕಾಣಿಕೆ ಎಂಬುದು ರಾಕೇಟ್ ಜಾಲವಾಗಿ ಬೆಳೆದಿದೆ. ಯಾವುದೇ ಬಂಡವಾಳ ಹೂಡದೇ, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ದಂಧೆ ಇದಾಗಿದೆ. ಕೇವಲ ಕದ್ದ ,ದನ ಎಮ್ಮೆ, ಹಸು ಕೋಣ ಎತ್ತುಗಳನ್ನು ಕದಿಯುವುದೇ ಕಳ್ಳರಿಗೆ ಮೂಲ ಬಂಡವಾಳವಾಗಿದೆ. ಕದ್ದ ಮಾಲು ಬೇಡಿಕೆಗನುಗುಣವಾಗಿ ಸ್ಥಳೀಯ ಕಸಾಯಿಖಾನೆ ಮತ್ತು ಕೇರಳ ರಾಜ್ಯಕ್ಕೆ ರವಾನೆಯಾಗುತ್ತದೆ. ಇನ್ನು ಹೊರದೇಶಕ್ಕೆ ರಪ್ತಾಗುವ ಗೋವಿನ ಮಾಂಸದ ಹಿಂದೆ ಇದೇ ಕಳ್ಳರ ರಾಕೇಟ್ ಜಾಲ ಇರುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದಲ್ಲಿ ಎಲ್ಲೇ ಗೋವಿನ ಕಳ್ಳತನವಾದ್ರೂ, ಅದನ್ನು ಆರರಿಂದ ಎಂಟು ಪೀಸ್ ಗಳಾಗಿ ಮಾಡಿ, ಐಸ್ ಬಾಕ್ಸ್ ನಲ್ಲಿ ಪ್ಯಾಕ್ ಮಾಡಿ ಹುಬ್ಬಳ್ಳಿಗೆ ಕಳುಹಿಸಲಾಗುತ್ತದೆ. ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಗೋವಿನ ಮಾಂಸ ಸಂಸ್ಕರಿಸಿ, ನಂತರ ಹೈಜೆನಿಕ್ ಆಗಿ ಮಾಂಸವನ್ನು ಬಾಂಬೆಗೆ ಕಳುಹಿಸಲಾಗುತ್ತದೆ.

ಬಾಂಬೆ ಸೇರಿದ ಗೋವಿನ ಮಾಂಸ ನೇರ ವಿದೇಶಕ್ಕೆ ರಫ್ತಾಗುತ್ತದೆ ಎಂಬ ಆಘಾತಕಾರಿ ವಿಷಯವನ್ನು ” ಟುಡೆ ” ತನಿಖಾ ವರದಿಗಾರಿಕೆ ಮೂಲಕ ಹೊರಹಾಕಿದೆ. ನಮ್ಮ ಮಲೆನಾಡಿನಲ್ಲಿ ಕಳುವಾದ ಅದೆಷ್ಟೋ ಗೋವಿನ ಮಾಂಸ ವಿದೇಶಕ್ಕೆ ರಫ್ತಾಗಿ ಹೋಗಿದೆ. ಗೊಡ್ಡುಹಸು, ಕಾಯಿಲೆ ಬಂದ ಎತ್ತು, ಕರ, ಎಮ್ಮೆ, ಕೋಣಗಳ ಮಾಂಸವಷ್ಟೆ ಕಸಾಯಿಖಾನೆ ಸೇರುತ್ತವೆ. ಒಳ್ಳೆಯ ಉತ್ಕೃಷ್ಟ ತಳಿಯ ದನದ ಮಾಂಸ ವಿದೇಶಕ್ಕೆ ಸಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಮಾಂಸಕ್ಕಾಗಿ ಸಾಕಾಣಿಕೆ ಮಾಡಲು ಅವಕಾಶ ಇರದ, ಈ ನೆಲದಲ್ಲಿ ಗೋವಿನ ಕಳ್ಳತನ ಅದರ ರಫ್ತು ಹೇಗಾಗುತ್ತಿದೆ..ಎಷ್ಟೆಲ್ಲಾ ಕೋಟಿ ವಹಿವಾಟು ನಡೆಯುತ್ತಿದೆ ಎಂದರೆ ಇದು ನಿಜಕ್ಕೂ ವಿಪರ್ಯಾಸವೇ ಸರಿ.

Leave a Comment