ಮೊಬೈಲ್​ಗೆ ಬಂತು ಟ್ರಾಫಿಕ್​ ಚಲನ್​ ಎಪಿಕೆ ಆ್ಯಪ್,  ಡೌನ್ಲೋಡ್​ ಮಾಡಿದ್ದಷ್ಟೇ, ಎರಡೇ ದಿನದಲ್ಲಿ ಹೋಯ್ತು 11 ಲಕ್ಷ 

ಶಿವಮೊಗ್ಗ:  ಇತ್ತೀಚಿನ ದಿನಗಳಲ್ಲಿ ನಗರದಾದ್ಯಂತ ಸೈಬರ್ ವಂಚನೆ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಟ್ರಾಫಿಕ್ ಚಲನ್ ಹೆಸರಿನಲ್ಲಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 11,25,000 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

Cyber Fraud Businessman Loses 11 Lakhs
Cyber Fraud Businessman Loses 11 Lakhs

ಇನ್ಮುಂದೆ ಸೂಪರ್​ ಫಾಸ್ಟ್ ಆಗಿ ಓಡಲಿವೆ ಶಿವಮೊಗ್ಗ ಟ್ರೈನ್ಸ್! ಬೆಂಗಳೂರು, ಯಶವಂತಪುರ , ಎಂಜಿಆರ್​ ಚೆನ್ನೈ ಇನ್ನೂ ಹತ್ತಿರ 

ಸಾರ್ವಜನಿಕರನ್ನು ಯಾಮಾರಿಸಲು ವಂಚಕರು ಟ್ರಾಫಿಕ್ ಚಲನ್ ಕಳುಹಿಸಿ, ನಿಮ್ಮ ಟ್ರಾಫಿಕ್ ದಂಡವನ್ನು ನೀವೇ ಮೊಬೈಲ್ ಮೂಲಕ ಪಾವತಿಸಬಹುದು ಎಂದು ನಂಬಿಸಿ ಹಣ ಲಪಟಾಯಿಸುವ ಹೊಸ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಹೀಗೆ ಸಂತ್ರಸ್ತ ಉದ್ಯಮಿ ತಮ್ಮ ಮೊಬೈಲ್ ವೀಕ್ಷಿಸುತ್ತಿದ್ದಾಗ ಅಪರಿಚಿತ ಸಂಖ್ಯೆಯಿಂದ ಟ್ರಾಫಿಕ್ ಚಲನ್ ಎಪಿಕೆ ಫೈಲ್ ಒಂದು ಬಂದಿದ್ದು, ಅದರಲ್ಲಿ ಮಾಹಿತಿಯನ್ನು ತಿಳಿದುಕೊಳ್ಳಲು ಕ್ಲಿಕ್ ಮಾಡಿದಾಗ ಅವರ ಮೊಬೈಲ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಆಗಿದೆ.

ನಂತರ ಉದ್ಯಮಿಯವರು ತಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ ದಂಡ ಇದೆಯೇ ಎಂದು ಪರಿಶೀಲಿಸಿದಾಗ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಆ್ಯಪ್‌ನಿಂದ ಹೊರಬಂದಿದ್ದಾರೆ. ಆದರೆ ಮರುದಿನ ಅಂದರೆ ದಿನಾಂಕ 29-12-2025 ರಿಂದ 30-12-2025 ರ ಅವಧಿಯಲ್ಲಿ ಉದ್ಯಮಿಯವರ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 11,25,000 ರೂಪಾಯಿ ಹಣ ಕಡಿತಗೊಂಡಿದೆ. ಯಾರೋ ಅಪರಿಚಿತರು ಈ ಎಪಿಕೆ ಫೈಲ್ ಕಳುಹಿಸಿ ಉದ್ಯಮಿಯವರ ವೈಯಕ್ತಿಕ ಮಾಹಿತಿಯನ್ನು ಕದ್ದು ಪಡೆದುಕೊಂಡು, ಆನ್ಲೈನ್ ಮೂಲಕ ವಂಚನೆಯಿಂದ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Cyber Fraud Businessman Loses 11 Lakhs

Cyber Fraud Businessman Loses 11 Lakhs
Cyber Fraud Businessman Loses 11 Lakhs