ಜಿಲ್ಲೆಯಲ್ಲಿ ಗಾಂಜಾ ವ್ಯಸನಿಗಳ ವಿರುದ್ಧ ಪೊಲೀಸ್ ಬೇಟೆ, 2 ತಿಂಗಳಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ…

ಹಂಚಿಕೊಳ್ಳಿ
WhatsApp Facebook X Telegram
Shivamogga police Filed 177 special Cases
Shivamogga police Filed 177 special Cases

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕಳೆದ ಎರಡು ತಿಂಗಳಿಂದ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಚರಣೆಯು ಯಶಸ್ವಿಯಾಗಿದ್ದು, ನೂರಾರು ಜನರನ್ನು ಬಂಧಿಸಲಾಗಿದೆ.  ನವೆಂಬರ್ ಮತ್ತು ಡಿಸೆಂಬರ್ ಮಾಹೆಯಲ್ಲಿ ನಡೆದ ಈ ಬಿಗಿ ಕಾರ್ಯಾಚರಣೆಯ ಮೂಲಕ ಗಾಂಜಾ ಮಾರಾಟಗಾರರು ಹಾಗೂ ಸೇವನೆ ಮಾಡುತ್ತಿದ್ದವರ ವಿರುದ್ಧ ಜಿಲ್ಲಾ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

 Shivamogga police Filed 177 special Cases
Shivamogga police Filed 177 special Cases

ಶಿವಮೊಗ್ಗಕ್ಕೆ ಹೊಸ ವರ್ಷ ಸಿಗಲಿದೆ ಬಂಪರ್​, ಬಂಗಾರ ಪುಣ್ಯಸ್ಮರಣೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ನವೆಂಬರ್ ತಿಂಗಳಿನಲ್ಲಿ ಪೊಲೀಸರು ಬಿಗಿಯಾದ ಬಲೆ ಬೀಸಿದ್ದು, ಒಟ್ಟು 82 ಪ್ರಕರಣಗಳು ದಾಖಲಾಗಿವೆ. ಗಾಂಜಾ ಸೇವನೆ ಮಾಡಿದ 76 ವ್ಯಕ್ತಿಗಳ ಮೇಲೆ 74 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಅಷ್ಟೇ ಅಲ್ಲದೆ, ಗಾಂಜಾ ಮಾರಾಟ, ಸಾಗಾಟ ಮತ್ತು ಗಿಡ ಬೆಳೆದಿದ್ದ 12 ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 4,91,500 ರೂ. ಮೌಲ್ಯದ ಒಣ ಗಾಂಜಾ, ಹಸಿ ಗಾಂಜಾ ಹಾಗೂ ಎಂಡಿಎಂಎ (MDMA) ಎಂಬ ನಿಷೇಧಿತ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. 

ಇನ್ನು ಡಿಸೆಂಬರ್ ಮಾಹೆಯಲ್ಲೂ ಈ ಕಾರ್ಯಾಚರಣೆಯ ಕಾವು ಕಡಿಮೆಯಾಗಿಲ್ಲ. ಈ ತಿಂಗಳು ಒಟ್ಟು 95 ಪ್ರಕರಣಗಳು ದಾಖಲಾಗಿದ್ದು, ಗಾಂಜಾ ಸೇವನೆಯಲ್ಲಿ ತೊಡಗಿದ್ದ 90 ವ್ಯಕ್ತಿಗಳ ಮೇಲೆ 86 ಪ್ರಕರಣಗಳನ್ನು ದಾಖಲಿಸಿ ಬಿಸಿ ಮುಟ್ಟಿಸಲಾಗಿದೆ. ಇನ್ನುಳಿದಂತೆ ಗಾಂಜಾ ಮಾರಾಟಗಾರರ ಮೇಲೆ 9 ಪ್ರಕರಣಗಳನ್ನು ದಾಖಲಿಸಿ, 15 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಇವರಿಂದ 4,51,500 ರೂ. ಬೆಲೆಬಾಳುವ ಸುಮಾರು 9 ಕೆಜಿಗೆ ಹತ್ತಿರವಿರುವ ಒಣ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

Shivamogga police Filed 177 special Cases

 Shivamogga police Filed 177 special Cases
Shivamogga police Filed 177 special Cases

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor