ಧರ್ಮಸ್ಥಳದಲ್ಲಿ 54ನೇ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ, 

This Article Written by / Prathapa thirthahalli / ಡಿಸೆಂಬರ್ 30, 2025

Dharmasthala 54th Year Free Mass Marriage

ಉಜಿರೆ: ವರದಕ್ಷಿಣೆ ಮತ್ತು ಮದುವೆಯ ದುಂದುವೆಚ್ಚವನ್ನು ತಡೆಯುವ ಉದಾತ್ತ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಇದೀಗ 54ನೇ ವರ್ಷಕ್ಕೆ ಕಾಲಿಟ್ಟಿದೆ. 2026ರ ಏಪ್ರಿಲ್ 29ರಂದು ಸಂಜೆ 6:40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಈ ವಿವಾಹ ಮಹೋತ್ಸವವು ಶ್ರೀ ಕ್ಷೇತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ.

ಜಿಲ್ಲೆಯಲ್ಲಿ ಗಾಂಜಾ ವ್ಯಸನಿಗಳ ವಿರುದ್ಧ ಪೊಲೀಸ್ ಬೇಟೆ, 2 ತಿಂಗಳಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ…

dharmasthala ಈ ಯೋಜನೆಯಡಿ ಮದುವೆಯಾಗುವ ವಧುವಿಗೆ ಸೀರೆ, ರವಿಕೆಕಣ ಮತ್ತು ಮಂಗಳಸೂತ್ರ ಹಾಗೂ ವರನಿಗೆ ಧೋತಿ ಮತ್ತು ಶಾಲನ್ನು ನೀಡಲಾಗುತ್ತದೆ. ವಿವಾಹದ ಸಂಪೂರ್ಣ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು. ಈ ಸಾಮೂಹಿಕ ವಿವಾಹದಲ್ಲಿ ಕೇವಲ ಮೊದಲ ವಿವಾಹಕ್ಕೆ ಮಾತ್ರ ಅವಕಾಶವಿದ್ದು, ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಈವರೆಗೆ ಸುಮಾರು 13,000ಕ್ಕೂ ಹೆಚ್ಚು ಜೋಡಿಗಳು ಈ ಯೋಜನೆಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ-ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ.

ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು 2026ರ ಏಪ್ರಿಲ್ 25ರೊಳಗೆ ಸವಿವರ ಮಾಹಿತಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ದೂರವಾಣಿ ಸಂಖ್ಯೆ 08256-266644 ಅಥವಾ ವಾಟ್ಸಪ್ ಸಂಖ್ಯೆಗಳಾದ 9663464648 ಮತ್ತು 8147263422 ಅನ್ನು ಸಂಪರ್ಕಿಸಬಹುದಾಗಿದೆ,

Dharmasthala 54th Year Free Mass Marriage 

Dharmasthala 54th Year Free Mass Marriage
Dharmasthala 54th Year Free Mass Marriage

 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ