ಎಂಗೇಜ್ಮೆಂಟ್​ಗೆಂದು ಹೋಗಿದ್ದ ತಾಯಿ ಮಗಳು ನಾಪತ್ತೆ

ಶಿವಮೊಗ್ಗ :  ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್​ 03 ರಂದು ಎಂಗೇಜ್​ಮೆಂಟ್​​ಗೆಂದು ಹೋಗಿದ್ದ ತಾಯಿ ಮಗಳು ಇಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆ  ನಾಪತ್ತೆಯಾದವರು ಎಲ್ಲಾದರು ಕಂಡರೆ ಮಾಹಿತಿ ನೀಡುವಂತೆ ಪೊಲೀಸ್​ ಇಲಾಖೆ ಪ್ರಕಟಣೆ  ನೀಡಿದೆ.

Missing Alert Mother and Daughter Gone Missing
Missing Alert Mother and Daughter Gone Missing

ಅತ್ತಿಗೆ ಜೊತೆ ಮೈದುನನ ಸಲುಗೆ ಸಹಿಸದ ಅಣ್ಣ! ತಮ್ಮನನ್ನೆ ಕೊಂದು ಪೊಲೀಸರ ಬಳಿಯೇ ನಾಪತ್ತೆ ಕಥೆ ಕಟ್ಟಿದ! ತೋಟದ ಸಮಾದಿ ರಹಸ್ಯ ಹೊರಬಂದಿದ್ದೇಗೆ? ಎಸ್​ಪಿ ಏನಂದ್ರು ಓದಿ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ, ಚಿಲಕಾದ್ರಿ ವಾಸಿ ಅವಿನಾಶ್ ಎಂಬುವವರ ಪತ್ನಿ 32 ವರ್ಷದ ವೀಣಾ ಎಂಬುವವರು ತನ್ನ 7 ವರ್ಷದ ಮಗಳು ಚೈತನ್ಯಳನ್ನು ಕರೆದುಕೊಂಡು ಡಿ. 03 ರಂದು ಮನೆಯಿಂದ ಎಂಗೆಜ್‌ಮೆಂಟ್‌ಗೆ ಹೋದವರು ಈವರೆಗೆ ಮನೆಗೆ ವಾಪಾಸ್ಸಾಗಿರುವುದಿಲ್ಲ. 

 ವೀಣಾರ ಚಹರೆ; 5 ಅಡಿ ಎತ್ತರ, ದುಂಡುಮುಖ, ಬಿಳಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದು, ಎಡಕಣ್ಣಿನ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಆಕಾಶ್ ನೀಲಿ ಬಣ್ಣದ ಡ್ರೆಸ್ ಧರಿಸಿರುತ್ತರೆ. ಕನ್ನಡ ಭಾಷೆ ಮಾತನಾಡುತ್ತಾರೆ.

ಚೈತನ್ಯಾಳ ಚಹರೆ: 3.5 ಅಡಿ ಎತ್ತರ, ಕೋಲುಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಫ್ರಾಕ್ ಧರಿಸಿರುತ್ತಾರೆ.ಈ ತಾಯಿ-ಮಗಳ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸುವುದು.

Missing Alert Mother and Daughter Gone Missing

Missing Alert Mother and Daughter Gone Missing
Missing Alert Mother and Daughter Gone Missing