Shivamogga jail/ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಭದ್ರಾವತಿಯ ಯುವಕ ನೇಣಿಗೆ ಶರಣು!

Malenadu Today

KARNATAKA NEWS/ ONLINE / Malenadu today/ Apr 27, 2023 GOOGLE NEWS


 ಶಿವಮೊಗ್ಗ/  ಕೇಂದ್ರ ಕಾರಾಗೃಹದಲ್ಲಿ ಭದ್ರಾವತಿ ಮೂಲದ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಇವತ್ತು ಬೆಳಗೆ ಎಳು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. 

ಹೇಗಾಯ್ತು ಘಟನೆ

ವಿಚಾರಣಾಧೀನ ಕೈದಿ ಸೆಲ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಭದ್ರಾವತಿಯ ಕರುಣಾಕರ ದೇವಾಡಿಗ(24) ನೇಣುಬಿಗಿದುಕೊಂಡು ಸಾವನ್ನಪ್ಪಿದ ಯುವಕ.  

ಇಂದು ಮುಂಜಾನೆ ಜೈಲಿನಲ್ಲಿ ತಿಂಡಿ ಕೊಡುವ ಹೊತ್ತಿನಲ್ಲಿಯೇ  ಕರುಣಾಕರ ಸೆಲ್ ನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈ ಉಜ್ಜುವ  ನಾರನ್ನೇ ಹಗ್ಗವನ್ನಾಗಿ ಮಾಡಿಕೊಂಡು ಕರುಣಾಕರ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.

 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

 

ಕೊಲೆ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿ ಕರುಣಾಕರ ಜೈಲು ಸೇರಿದ್ದ. ಮಾನಸಿಕವಾಗಿ ಖಿನ್ನನಾಗಿದ್ದ ಆತನಿಗೆ ವೈದ್ಯರು ಕೌನ್ಸೆಲಿಂಗ್ ಮಾಡಿದ್ದರು. 

ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ಇಷ್ಟಾಗಿಯೂ ಇಂದು ಮುಂಜಾನೆ ಸೆಲ್ ಅನ್ ಲಾಕ್ ಮಾಡಿ, ಕೈದಿಗಳನ್ನು ತಿಂಡಿ ತರಲು ಕಳುಹಿಸಿದಾಗ, ಕರುಣಾಕರ ಈ ಸಮಯದಲ್ಲಿಯೇ ನೇಣು ಹಾಕಿಕೊಳ್ಳುವ ಪ್ಲಾನ್ ಮಾಡಿದ್ದಾನೆ. 

ನೇಣು ಬಿಗಿದುಕೊಂಡದ್ದನ್ನು ತಕ್ಷಣ ಸಹ ಕೈದಿಗಳು ನೋಡಿ, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೆ, ಕರುಣಾಕರ ದೇವಾಡಿಗ ಸಾವನ್ನಪ್ಪಿದ್ದಾನೆ. ತುಂಗಾ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Malenadutoday.com Social media

Share This Article