ಶಿವಮೊಗ್ಗ ಏರ್​​ಪೋರ್ಟ್​ನಲ್ಲಿ ಮತ್ತೆ ಲ್ಯಾಂಡ್ ಆಗಲಿದೆ ಎರೆರಡು ವಿಶೇಷ ವಿಮಾನ! ಯಾರು ಆಗಮಿಸ್ತಿದ್ದಾರೆ ಈ ಸಲ?

KARNATAKA NEWS/ ONLINE / Malenadu today/ Apr 26, 2023 GOOGLE NEWS


ಶಿವಮೊಗ್ಗಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಜನರು ಯಾವಾಗ ಫ್ಲೈಟ್​ನಲ್ಲಿ ಓಡಾಡ್ತಾರೋ ಗೊತ್ತಿಲ್ಲ. ಆದರೆ ರಾಜಕಾರಣಿಗಳಂತೂ ಭರ್ಜರಿಯಾಗಿ ಓಡಾಡುತ್ತಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 2 ಸಲ ಶಿವಮೊಗ್ಗಕ್ಕೆ ಬಂದು ಹೋದರೆ, ಸಿಎಂ ಬಸವರಾಜ ಬೊಮ್ಮಾಯಿ ಕೂಡ ವಿಶೇಷ ವಿಮಾನದಲ್ಲಿ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗಿದ್ದರು. 

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಇವತ್ತು ಲ್ಯಾಂಡ್ ಆಗಲಿದೆ ವಿಶೇಷ ವಿಮಾನ

ಬಿಜೆಪಿ ನಾಯಕರ ಬೆನ್ನಲ್ಲೆ ಇದೀಗ ಶಿವಮೊಗ್ಗ ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಈ ಪೈಕಿ ರಾಹುಲ್ ಗಾಂಧಿ  ವಿಶೇಷ ವಿಮಾನದ (Special Flight) ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಹೆಲಿಕಾಪ್ಟರ್​ನಲ್ಲಿ ಬಂದಿಳಿಯಲಿದ್ದಾರೆ ಪ್ರಿಯಾಂಕಾ 

ಸಹೋದರ ವಿಶೇಷ ವಿಮಾನದಲ್ಲಿ, ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆದರೆ, ಪ್ರಿಯಾಂಕಾ ಗಾಂಧಿ ವಿಶೇಷ ಹೆಲಿಕಾಪ್ಟರ್​ನಲ್ಲ ಶಿವಮೊಗ್ಗ ಏರ್​ಪೋರ್ಟ್​ಗೆ ಬಂದಿಳಿಯಲಿದ್ದಾರೆ. ಮಧ್ಯಾಹ್ನ 12.40ರ ಹೊತ್ತಿಗೆ ಇವರಿಬ್ಬರು ಶಿವಮೊಗ್ಗಕ್ಕೆ ಆಗಮಿಸಬಹುದು 

ನಾಳೆ ಜೆಪಿ ನಡ್ಡಾ ಆಗಮನ

ಇನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದೇ ಏಪ್ರಿಲ್​ 28ರಂದು ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport) ಆಗಮಿಸುತ್ತಿದ್ದಾರೆ.  ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ  ಪ್ರಚಾರ  ಸಭೆಗಳಲ್ಲಿ  ಅವರು ಭಾಗವಹಿಸಲಿದ್ದಾರೆ.

ನಾಳೆ ಬೆಳಗ್ಗೆ 11.30ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport) ಬರಲಿರುವ ಜೆಪಿ ನಡ್ಡಾ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪ್ರಚಾರ ಸ್ಥಳಗಳಿಗೆ ತೆರಳಲಿದ್ದಾರೆ.  

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

ಒಂದೂ ಹಾರಲಿಲ್ಲ ಪ್ರಯಾಣಿಕರ ವಿಮಾನ

ಶಿವವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾದಾಗಿನಿಂದ ಒಂದ್ಸಾರಿಯಾದ್ರೂ ಪ್ಲೈಟ್ ಹತ್ತಬೇಕು ಎಂದು ಜನರು ಸಹ ಕಾಯುತ್ತಿದ್ದಾರೆ. ಆದರೆ ಏರ್​ಪೋರ್ಟ್ ಮೇಲೆ ರಾಜಕಾರಣಿಗಳ ವಿಮಾನ ಹಾರೋದನ್ನ ನೋಡುವುದಷ್ಟೆ ಭಾಗ್ಯ ಇಲ್ಲಿನ ಜನರಿಗೆ ದಕ್ಕಿದೆ. ಏಕೆಂದರೆ ಇದುವರೆಗೂ ಪ್ರಯಾಣಿಕರನ್ನು ಕರೆದೊಯ್ಯುವ ವಿಮಾನದ ಹಾರಾಟ ಆರಂಭವೆ ಆಗಿಲ್ಲ. ಯಾವಾಗಿನಿಂದ ಎಂಬ ಪ್ರಶ್ನೆಗೂ ಸಹ ಉತ್ತರ ಸಿಗುತ್ತಿಲ್ಲ. 

Malenadutoday.com Social media

 

Leave a Comment