ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 8 ಕೋಟಿ ರೂಪಾಯಿ ಜಪ್ತಿ! ಎಲ್ಲಿದು? ಎಲ್ಲಿಗೆ ಹೋಗ್ತಿತ್ತು ಹಣ! ವಿವರ ಓದಿ

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ/     ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ  ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ದಾಖಲೆ ಇಲ್ಲದ ಹಣದ ಸಾಗಾಟದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. 

ಎಷ್ಟರಮಟ್ಟಿಗೆ ಎಂದರೆ ಎಟಿಎಂಗೆ ಹಾಕುವ ಹಣದ ವಾಹವನ್ನು ತಪಾಸಣೆಗೆ ಒಳಪಡಿಸ್ತಿದ್ದು, ಹಣದ ದಾಖಲೆಗಳು ಸಮರ್ಪಕವಾಗಿ ಇರದಿದ್ದೇ ಹಣವನ್ನು ಸೀಜ್ ಮಾಡುತ್ತಿದ್ಧಾರೆ. 

ಆನವಟ್ಟಿ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ನಲ್ಲಿ 5 ಕೋಟಿ ಸೀಜ್​

ಸೊರಬ ಪೊಲೀಸ್ ಸರ್ಕಲ್​ ಇನ್​ಸ್ಪೆಕ್ಟರ್​ ಭಾಗ್ಯವತಿ ನೇತ್ವದಲ್ಲಿ ಆನವಟ್ಟಿ ಪೊಲೀಸ್ ಸ್ಟೇಷನ್​ನ ಪೊಲೀಸರು ದಾಖಲೆ ಇಲ್ಲದೇ ಸಾಗಿಸ್ತಿದ್ದ 5,00,00,000/- ಹಣವನ್ನು ಸೀಜ್​ ಮಾಡಿದ್ದಾರೆ. 

ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ನಲ್ಲಿ 45 ಲಕ್ಷ ಜಪ್ತಿ

ಇನ್ನೂ ಶಿರಾಳಕೊಪ್ಪ ಪೊಲೀಸ್ ಠಾಣೆಯ ತಂಡವು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ  ರೂ 45,00,000/- ನಗದು ಹಣವನ್ನು ಜಪ್ತಿ ಮಾಡಿದ್ದಾರೆ. 

ಸಾಗರ  ಟೌನ್​  ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ಮೂರು ಕೋಟಿ ವಶ

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ  ರೂ 3,07,50,000/-ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

 


Malenadutoday.com Social media

Leave a Comment