Shivamogga | Feb 6, 2024 | ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಲಾಯಿಸಿದ ಸಿಟಿ ಬಸ್ ಚಾಲಕನಿಗೆ 5 ಸಾವಿರ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ಸೋಮವಾರ ನಡೆದಿದೆ.
ಬಸ್ ಚಾಲಕನಿಗೆ ದಂಡ
ಈ ಹಿಂದೆಯು ಸಿಟಿ ಬಸ್ ಚಾಲಕ ಫೋನ್ ನಲ್ಲಿ ಮಾತನಾಡ್ತಾ ಬಸ್ ಚಲಾಯಿಸುತ್ತಿದ್ದ ಬಗ್ಗೆ ಪ್ರಯಾಣಿಕರು ಫೋಟೋ ಕ್ಲಿಕ್ಕಿಸಿ ಪೊಲೀಸರಿಗೆ ಕಳುಸಿದ್ದರು. ಆ ಬಳಿಕ ಚಾಲಕನಿಗೆ ದಂಡ ವಿಧಿಸಲಾಗಿತ್ತು. ಇದೀಗ ಇದೇ ರೀತಿಯ ಎರಡನೇ ಪ್ರಕರಣ ದಾಖಲಾಗಿದೆ.
ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಲಾಯಿಸುತ್ತಿದ್ದ ಚಾಲಕನ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸಂಚಾರ ಠಾಣೆ ಪೊಲೀಸರಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಚಾಲಕನಿಗೆ ದಂಡ ವಿಧಿಸಿದ್ದಾರೆ. ಗೋಪಾಳ ರಾಗಿಗುಡ್ಡ ಮಾರ್ಗದ ಸಿಟಿ ಬಸ್ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಗೋಪಾಳದಿಂದ ಅಣ್ಣಾನಗರ ಚಾನಲ್‌ವರೆಗೂ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಲಾಯಿಸಿದ್ದ.
ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಇದರ ವಿಡಿಯೋ ಚಿತ್ರೀಕರಣ ಮಾಡಿ, ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ಅವರಿಗೆ ಕಳುಹಿಸಿದ್ದರು. ಸಂಚಾರ ಠಾಣೆ ಸಿಬ್ಬಂದಿ ಸಂದೀಪ್, ವಿಡಿಯೋ ಆಧರಿಸಿ ಚಾಲಕನನ್ನು ಪತ್ತೆ ಹಚ್ಚಿದರು. ಮೊಬೈಲ್ ಮಾತನಾಡುತ್ತ ಬಸ್ ಚಲಾಯಿಸಿದ್ದಕ್ಕೆ ಈ ಸಾವಿರ ದಂಡ ಕಟ್ಟಿಸಿಕೊಳ್ಳಲಾಗಿದೆ
