3 ದಿನಗಳಲ್ಲಿ 100 ಕೇಸ್! ಶಿವಮೊಗ್ಗ ಪೊಲೀಸ ಸೆಂಚುರಿ! ರಾಗಿಗುಡ್ಡ, ಮಾರಿಗುಡ್ಡ , ಜಂಬರಗಟ್ಟದಲ್ಲಿ foot petrol

ಹಂಚಿಕೊಳ್ಳಿ
WhatsApp Facebook X Telegram

Shivamogga | Feb 6, 2024 |  ಶಿವಮೊಗ್ಗದಲ್ಲಿ ಪೊಲೀಸರ ಫೂಟ್ ಪೆಟ್ರೋಲಿಂಗ್ ನಿನ್ನೆಯು ಮುಂದುವರದಿದೆ. ಒಟ್ಟು ಮೂರುದಿನಗಳಲ್ಲಿ ಪೊಲೀಸರು ಬರೋಬ್ಬರಿ 100 ಕ್ಕೂ ಹೆಚ್ಚು ಪಿಟ್ಟಿಕೇಸ್​​​ಗಳನ್ನ ಬುಕ್ ಮಾಡಿದ್ದಾರೆ. 

ಕಳೆದ ಶನಿವಾರ ರಾತ್ರಿ  52 ಕೇಸ್​ಗಳು ಫಿಟ್ ಆಗಿದ್ದವು ಇನ್ನೂ ಭಾನುವಾರ ರಾತ್ರಿ 33 ಕೇಸ್​ಗಳನ್ನ ಹಾಕಿದ್ದ ಶಿವಮೊಗ್ಗ ಪೊಲೀಸರು ನಿನ್ನೆ ಸೋಮವಾರ ರಾತ್ರಿ ಬರೋಬ್ಬರಿ 52 ಪಿಟ್ಟಿ ಕೇಸ್​ಗಳನ್ನು ಪಬ್ಲಿಕ್ ನ್ಯೂಸೆನ್ಸ್​ ಕ್ರಿಯೆಟ್ ಮಾಡಿದವರ ವಿರುದ್ಧ ದಾಖಲಿಸಿದ್ದಾರೆ. 

Foot Patrolling

ದಿನಾಂಕಃ 05-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಶೇಷಾದ್ರಿಪುರಂ, ಸಂಗೊಳ್ಳಿ ರಾಯಣ್ಣ ವೃತ್ತ, ಕೆಇಬಿ ವೃತ್ತ, ಹೊಳೆಬಸ್ ನಿಲ್ದಾಣ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ರೈಲ್ವೆ ನಿಲ್ದಾಣ, ಬಸವನಗುಡಿ, ಎ.ಎನ್.ಕೆ ರಸ್ತೆ, ಜಯನಗರ, ಉಷಾ ವೃತ್ತ, ರವೀಂದ್ರ ನಗರ, ವೆಂಕಟೇಶ್ ನಗರ, ರಾಜೇಂದ್ರ ನಗರ  ರಾಗಿಗುಡ್ಡ ಗಳಲ್ಲಿ ಪೂಟ್​ ಪೆಟ್ರೋಲಿಂಗ್  Foot Patrolling ನಡೆಸಲಾಗಿದೆ. 

ಅತ್ತ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಜಿಂಕ್ ಲೈನ್, ವೇಲೂರ್ ಶೆಡ್, ಮೋಮೀನ್ ಮೊಹಲ್ಲಾ, ರಂಗಪ್ಪ ವೃತ್ತ, ಹನುಮಂತ ನಗರ, ಉಜನಿಪುರ ವೃತ್ತ, ಅರಳಿಹಳ್ಳಿ, ನಂಜಾಪುರ, ಜಂಬರಘಟ್ಟ, 

ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಶಿರಾಳಕೊಪ್ಪದ ಜಾಕಿರ್ ಹುಸೇನ್ ರಸ್ತೆ, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ಇಂಡಸ್ಟ್ರಿಯಲ್ ಏರಿಯಾ, ಆನಂದಪುರದ ಎಡೆಹಳ್ಳಿ ವೃತ್ತ, ಕಾರ್ಗಲ್ ನ ಬಳಿಗಾರು ಮತ್ತು ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ತೀರ್ಥಹಳ್ಳಿ ಟೌನ್ ನ ಸೀಬಿನ ಕೆರೆ ವೃತ್ತ, ಹೊಸನಗರದ ಮಾರಿಗುಡ್ಡ, ನಗರದ ಚಿಕ್ಕಪೇಟೆ, ಬೆಜ್ಜುವಳ್ಳಿ, ಕೆಂಚನಾಳದಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿದ್ದಾರೆ. 

ಈ ವೇಳೆ  Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 52 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor