ಆಯನೂರು ಮಂಜುನಾಥ್ ವಿರುದ್ಧ ಕೆರಳಿತೆ ಜಿಲ್ಲಾ ಕಾಂಗ್ರೆಸ್! Who is he…!

Malenadu Today

SHIVAMOGGA  |  Jan 27, 2024  |  ಒಂದು ಕಡೆ ಶಿವಮೊಗ್ಗದಲ್ಲಿ ಮತ್ತೆ ಬಿವೈ ರಾಘವೇಂದ್ರವರನ್ನ ಗೆಲ್ಲಿಸಿ ಅಂತಾ ಕಾಂಗ್ರೆಸ್​ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪರವರೇ ಹೇಳಿದ್ದಾರೆ. ಅವರ ಹೇಳಿಕೆ ಪಕ್ಷವನ್ನೇ ಇರಿಸು ಮುರಿಸು ಮಾಡುತ್ತಿದೆಯಾದರೂ, ಅವರನ್ನ ವಿರೋಧಿಸುವ ಮಾತುಗಳು ಕಾಂಗ್ರೆಸ್​ನಲ್ಲಿ ಬರುತ್ತಿಲ್ಲ. ಬಹುಶಃ ಅದಕ್ಕೆ ಕಾರಣ ಕೂಡ ನಿಮಗೆ ತಿಳಿದಿರಬಹುದು. 

ಆಯನೂರು ಮಂಜುನಾಥ್

ಇದರ ನಡುವೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಲ್ಲಿ ಆಯನೂರು ಮಂಜುನಾಥ್ ವಿರುದ್ಧ ಆಕ್ರೋಶ, ಆಕ್ಷೇಪ ಮತ್ತು ವಿರೋಧಗಳು ತೀವ್ರಗೊಳ್ಳುತ್ತಿದೆ. ಬಿಜೆಪಿ ಬಿಟ್ಟು ಜೆಡಿಎಸ್​ಗೆ ಹೋಗಿ ಅಲ್ಲಿಂದ ಕಾಂಗ್ರೆಸ್​ ಗೆ ಬಂದ ಆಯನೂರು ಮಂಜುನಾಥ್ ರವರು ಇದು ತಮ್ಮ ಕೊನೆ ನಿಲ್ದಾಣ ಅಂತಾ ಈಗಾಗಲೇ ಘೋಷಿಸಿದ್ದಾರೆ. ಆದಾಗ್ಯು, ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಈಗಾಗಲೇ ಅದಕ್ಕಾಗಿ ಕಚೇರಿಯನ್ನು ಸಹ ಓಪನ್ ಮಾಡಿಕೊಂಡು ಓಡಾಡುತ್ತಿದ್ದಾರೆ. 

ಎಸ್​ಪಿ ದಿನೇಶ್​ ಮತ್ತು ಆಯನೂರು ಮಂಜುನಾಥ್ 

ಈ ಮಧ್ಯೆ ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ಎಸ್​ಪಿ ದಿನೇಶ್ ರವರು ಆಯನೂರು ಮಂಜುನಾಥ್​ರವರ ನಡೆಯನ್ನು ವಿರೋಧಿಸಿದ್ದಾರೆ. ಬಹಿರಂಗವಾಗಿಯೇ ಸುದ್ದಿಗೋಷ್ಟಿಯೊಂದರಲ್ಲಿ ಆಯನೂರು ಮಂಜುನಾಥ್​ರಿಗೆ ಗುರುಬಲ ಈಗಿಲ್ಲ ಎಂದಿದ್ದರು. ಸದಸ್ಯತ್ವ ಹೆಚ್ಚಿಸುತ್ತಿರುವ ಪ್ರಯತ್ನದಲ್ಲಿರುವ ಎಸ್​ಪಿ ದಿನೇಶ್​ ರವರು ಟಿಕೆಟ್ ತಮಗೆ ಸಿಗುತ್ತದೆ ಎಂದಿದ್ದರು. 

ಇದರ ಬೆನ್ನಲ್ಲೆ ಮತ್ತೆ ಸುದ್ದಿಗೋಷ್ಟಿ ನಡೆಸಿದ ಆಯನೂರು ಮಂಜುನಾಥ್​ರವರು ಗುರುಬಲಕ್ಕೆ ಕುರುಬಲ ಎಂತೇನೋ ವ್ಯಂಗ್ಯವಾಡಿದ್ದರು. ಈ ಮಧ್ಯೆ ಒಂದೆ ಪಾರ್ಟಿಯಲ್ಲಿ ಎಸ್​ಪಿ ದಿನೇಶ್ ಹಾಗೂ ಆಯನೂರು ಮಂಜುನಾಥ್​ ನಡುವೆ ಇದ್ದ ಟಿಕೆಟ್ ಸಮರ ಇತ್ತೀಚಿನ ಪ್ರೆಸ್ ಮೀಟ್​ನಲ್ಲಿಯೇ ಬೇರೆಯದ್ದೆ ಆಯಾಮ ಪಡೆದುಕೊಂಡಿತ್ತು. 

ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿದಾಗಿನಿಂದಲೂ ಅವರಿಗಲ್ಲಿ ತೀವ್ರ ವಿರೋಧವೇ ಇತ್ತು. ಪಕ್ಷದ ಕಚೇರಿಗೆ ಮೊದಲು ಭೇಟಿಕೊಟ್ಟ ಸಂದರ್ಭದಲ್ಲಿಯೇ ಇದು ಸಾಪ್ ಸಪಾಟಾಗಿ ಗೊತ್ತಾಗಿತ್ತು. ಅದಕ್ಕೂ ಮೊದಲು ಸುದ್ದಿಗೋಷ್ಟಿ ಮೂಲಕ ಸೀಜನ್​ಗೊಂದು ಪಕ್ಷ ಎಂಬಂತಹ ಸ್ವಾಗತಗಳು ಆಯನೂರು ಮಂಜುನಾಥ್​ರಿಗೆ ಸಿಕ್ಕಿತ್ತು. ವಿರೋಧಗಳ ನಡುವೆಯು ಪಕ್ಷದೊಳಕ್ಕೆ ಬಂದ ಹಿರಿಯ ಮುಖಂಡ  ಆಯನೂರು ಮಂಜುನಾಥ್ ಸಹ ತಮ್ಮನ್ನ ವಿರೋಧಿಸಿದವರ ವಿರುದ್ಧ ಮಾತಿನ ಬಾಣ ಬಿಡುತ್ತಲೇ ಇದ್ದಾರೆ. ಆಗಲೇ ಹೇಳಿದಾಗೆ, ಮೊನ್ನೆ ಮೊನ್ನೆಯ ಸುದ್ದಿಗೋಷ್ಟಿಯಲ್ಲಿ ಆಯನೂರು ಮಂಜುನಾಥ್​ರಿಂದ ಪ್ರಬಲ ವ್ಯಂಗ್ಯ ಮಾತಿನ ಬಾಣ ತೂರಿಬಂದಿತ್ತು. ಸದ್ಯ ಈ ಮಾತು ಕಾಂಗ್ರೆಸ್​ನಲ್ಲಿ ಕೆರಳುವಿಕೆಗೆ ಪ್ರಚೋದನೆ ನೀಡಿದೆ. 

ಹೆಚ್​.ಸಿ.ಯೋಗೇಶ್ 

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಆಯನೂರು ಮಂಜುನಾಥ್​ರವರಿಗೆ ಪತ್ರಕರ್ತರೊಬ್ಬರು ಪ್ಲೆಕ್ಸ್​ವೊಂದರಲ್ಲಿ ಹೆಚ್​.ಸಿ ಯೋಗೇಶ್​ರವರ ಹೆಸರು ಇಲ್ಲವಲ್ಲ ಎಂದು ಪ್ರಶ್ನಿಸುತ್ತಾರೆ. ಆಗವರು ಹೂ ಇಸ್ ಹೀ ಅಂತಾ ಶುರು ಮಾಡಿ ಓ ಅವರಾ ಎನ್ನುತ್ತಾರೆ. ಇದೇ ಮಾತಿಗೆ ಕಾಂಗ್ರೆಸ್​ನಲ್ಲೀಗ ದೂರು ದುಮ್ಮಾನಗಳು ಜಿಲ್ಲಾ ಅಧ್ಯಕ್ಷರಿಗೆ ಸಲ್ಲಿಕೆಯಾಗುತ್ತಿದೆ. ನಿಗಮ ಮಂಡಳಿಯ ನಿರೀಕ್ಷೆಯಲ್ಲಿರುವ ಅಧ್ಯಕ್ಷರು ಬಿಡುವಿಲ್ಲದ ಚಟುವಟಿಕೆಯಲ್ಲಿದ್ದಾರೆ. ಅದರ ನಡುವೆಯು ಅವರಿಗೆ ದೂರು ಸಲ್ಲಿಸಿರುವ ಕೆಪಿಸಿಸಿ ಕಾರ್ಯಾದರ್ಶಿ ಕೆ.ದೇವೇಂದ್ರಪ್ಪ ಹೆಚ್​.ಸಿ ಯೋಗೇಶ್​ ಬಗ್ಗೆ ಆಡಿದ ಮಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಜಿಲ್ಲಾಧ್ಯಕ್ಷರಿಗೆ ದೂರು

ಆಯನೂರು ಮಂಜುನಾಥ್ ಇನ್ನೂ ಬಿಜೆಪಿಯಲ್ಲಿದ್ದಾರೆ. ಬಿಎಸ್​ವೈ ಕುಟುಂಬಸ್ಥರನ್ನ ಟೀಕಿಸದ ಅವರು ಮೂಲ ಕಾಂಗ್ರೆಸ್​ನವರನ್ನ ಅವಮಾನಿಸ್ತಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ಏಳು ಸಾವಿರ ಮತ ತೆಗೆದುಕೊಂಡಿದ್ದರು, ಹೆಚ್​.ಸಿ.ಯೋಗೇಶ್ 70 ಸಾವಿರ ಮತ ತೆಗೆದುಕೊಂಡಿದ್ದರು. ಅವರನ್ನೇ ಇವರು ಹೂ ಇಸ್ ಹೀ ಅಂತಾ ಪ್ರಶ್ನಿಸುತ್ತಾರೆ. ಪದೇಪದೇ ಸುದ್ದಿಗೋಷ್ಟಿ ಮಾಡುವುದು ಅವರಿಗೆ ಅಭ್ಯಾಸ ಆಗಿಬಿಟ್ಟಿದೆ ಎಂದು ದೂರಲಾಗಿದೆ. ವಿಷಯ ಸೀರಿಯಸ್ ಆಗತ್ತಿದೆಯಾದರೂ ಈ ಬಗ್ಗೆ ದೊಡ್ಡ ದೊಡ್ಡ ನಾಯಕರು ತಲೆಕೆಡಿಸಿಕೊಂಡಂತಿಲ್ಲ. ಶಿವಮೊಗ್ಗಕ್ಕೆ ಸೀಮಿತವಾಗಿ ನಡೆಯುತ್ತಿರುವ ಭಿನ್ನ ಬೆಂಕಿ ಮುಂದಿನ ಚುನಾವಣೆಗಳ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. 


Share This Article