ದೆಹಲಿಗೆ ಹೋಗಿದ್ದಕ್ಕೆ ಕಾರಣ ತಿಳಿಸಿದ ಕೆ.ಎಸ್​.ಈಶ್ವರಪ್ಪ! ಕೆ.ಇ.ಕಾಂತೇಶ್​ಗೆ ಹಾವೇರಿ ಟಿಕೆಟ್?

Malenadu Today

SHIVAMOGGA  |  Jan 15, 2024  |   ಇತ್ತೀಚೆಗೆಷ್ಟೆ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ KS Eshwarappa ,ದೆಹಲಿಗೆ ಹೋಗಿದ್ದರು. ಅಲ್ಲಿ ಅವರು ಬಿಜೆಪಿ ಸೀನಿಯರ್ ಲೀಡರ್ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆಪಿ ನಡ್ಡಾರವರನ್ನ ಭೇಟಿ ಮಾಡಿದ್ದರು. ಪುತ್ರ ಕೆ.ಇ. ಕಾಂತೇಶ್   K E Kanthesh ರವರಿಗೆ ಟಿಕೆಟ್ ಕೇಳುವ ಸಲುವಾಗಿ ಈಶ್ವರಪ್ಪರವರು ದೆಹಲಿಗೆ ಹೋಗಿದ್ದರು ಎಂದು ಹೇಳಲಾಗಿತ್ತು. 

ಕೆ.ಇ.ಕಾಂತೇಶ್​ಗೆ ಟಿಕೆಟ್​ 

ಈ ಸಂಬಂಧ  ಶಿವಮೊಗ್ಗದಲ್ಲಿ ಮಾನತಾಡಿದ ಕೆ.ಎಸ್​.ಈಶ್ವರಪ್ಪರವರು  ನಾನು ದೆಹಲಿಗೆ ಹೋಗಿದ್ದೆ. ಅಮಿತ್ ಶಾ, ಅರುಣ್ ಸಿಂಗ್ ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ. 

ಅಲ್ಲದೆ ಬಸನಗೌಡ ಪಾಟೀಲ್​ ಯತ್ನಾಳ್ ,  ಹಾಗೂ ವಿ ಸೋಮಣ್ಣ ಅವರನ್ನು ಕರೆದು ಮಾತನಾಡಿ ಅಂತಾ ಹೇಳಿದ್ದೇನೆ. ನನಗೆ ನೀವು ಚುನಾವಣೆಗೆ ನಿಲ್ಲಬೇಡಿ ಅಂದಿದ್ದರು. ಚುನಾವಣೆಗೆ ಸ್ಪರ್ಧೆ ಮಾಡಲಿಲ್ಲ. ಆಗ ಪಕ್ಷ ಸಂಘಟನೆ ಮಾಡ್ತೀನಿ ಜವಾಬ್ದಾರಿ ಕೊಡಿ ಅಂದಿದ್ದೆ. ಆದರೆ, ನನಗೆ ಇದುವರೆಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ ಎಂದಿದ್ದರು. 

ನನ್ನ ಮಗನಿಗೆ ಹಾವೇರಿ  Haveri ticket ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿ ಅಂತಾ ಕೇಳಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸ ಇದೆ. ಜೊತೆಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲ್ಲಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಇದೇ ವೇಳೆ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ  ಅಲ್ಲಮಪ್ರಭುರವರ ಹೆಸರನ್ನು ಇಡುವ ಸಂಬಂಧ ಸಿಎಂ  ಸಿದ್ದರಾಮಯ್ಯ  ರವರ ನಿರ್ಧಾರವನ್ನು ಸ್ವಾಗತ ಮಾಡ್ತನೆ ಎಂದು ಈಶ್ವರಪ್ಪರವರು ತಿಳಿಸಿದ್ದಾರೆ . 


Share This Article