SHIVAMOGGA | Dec 27, 2023 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಟೌನ್ನಲ್ಲಿನ ಗಾಂಧಿ ಚೌಕ್ ಸಮೀಪ ಜ್ಯೂಸ್ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು ಸಾಮಾಗ್ರಿಗಳು ಸುಟ್ಟುಹೋದ ಘಟನೆಯು ಸಂಭವಿಸಿದೆ.
ಗಾಂಧಿ ಚೌಕ್ ಬಳಿ ಘಟನೆ /Gandhi Chowk
ಪಟ್ಟಣದ ಗಾಂಧಿ ಚೌಕ್ ಕಲ್ಲಾರೆ ಗಣಪತಿ ದೇವಸ್ಥಾನದ ಸಮೀಪದ ಹರೇ ರಾಮ ಹರೇ ಕೃಷ್ಣ ಗಿಫ್ಟ್ & ಜ್ಯೂಸ್ ಸೆಂಟರ್ ನಲ್ಲಿ ನಿನ್ನೆ ರಾತ್ರಿ ಶಾರ್ಟ್ ಸರ್ಕಿಟ್ನಿಂದ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 3 ರಿಂದ 4 ಲಕ್ಷಕ್ಕೂ ಅಧಿಕ ಮೊತ್ತದ ಐಟಂಗಳು ಸುಟ್ಟುಹೋಗಿವೆ.
READ : ಸಂಸದ ರಾಘವೇಂದ್ರ V/s ಸಚಿವ ಮಧು ಬಂಗಾರಪ್ಪ! ಏನಿದು POLITCAL ವಾಗ್ವಾದ!?
ರಾತ್ರಿ ಅಂಗಡಿ ಬಾಗಿಲು ಹಾಕಿ ಹೋದ ನಂತರದಲ್ಲಿ ಹೀಗಾಗಿದ್ದು, ಶಾರ್ಟ್ ಸರ್ಕಿಟ್ ಆಗಿ ಬೆಂಕಿಹೊತ್ತಿಕೊಂಡು ಅಂಗಡಿ ತುಂಬಾ ಹೊಗೆ ಆವರಿಸಿದೆ. ಇನ್ನೂ ಅಂಗಡಿಯಲ್ಲಿ ಹೊಗೆ ಬರ್ತಿರುವುದನ್ನ ಗಮನಿಸಿ ಸ್ಥಳೀಯರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದು ನೋಡುವಾಗ ಅಂಗಡಿಯಲ್ಲಿ ಬೆಂಕಿ ಉರಿಯುತ್ತಿರುವುದು ಕಾಣಿಸಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಬೆಂಕಿ ನಂದಿಸಿದ್ದಾರೆ.