SHIVAMOGGA| Dec 18, 2023 | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಲ್ಲಿ ಲಾರಿಯೊಂದು ಹಳ್ಳಕ್ಕೆ ಉರುಳಿದ ಘಟನೆ ಸಂಭವಿಸಿದೆ. ಹೊಸನಗರ ತಾಲ್ಲೂಕು ನ ಮುಂಬಾರು ಗ್ರಾಮದ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಕಳೆದ ಭಾನುವಾರ ರಾತ್ರಿ ನಡೆದ ಇನ್ಸಿಡೆಂಟ್ನಲ್ಲಿ ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
READ : ಜಿಂಕೆ ಶಿಕಾರಿ! ಮೂವರು ಎಸ್ಕೇಪ್ ! ಮಂಡಗದ್ದೆ ರೇಂಜ್ನಲ್ಲಿ ತಮಿಳುನಾಡು ಮೂಲದವನ ಬಂಧನ!
ಹೊಸನಗರ ತಾಲ್ಲೂಕು
ಇಲ್ಲಿನ ರಿಪ್ಪನ್ಪೇಟೆ ಕಡೆಯಿಂದ ಹೊಸನಗರದತ್ತ ಹೊರಟಿದ್ದ ಲಾರಿ ಅಪ್ಸೆಟ್ ಆಗಿದೆ. ರಾತ್ರಿ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಅಲ್ಲದೆ ರಸ್ತೆ ಬದಿಗೆ ಜಾರಿದ ಲಾರಿ ನೇರವಾಗಿ ಹಳ್ಳಕ್ಕೆ ಉರುಳಿದೆ. ಬೋರ್ವೆಲ್ ಕೊರೆಯುವ ಲಾರಿ ಇದಾಗಿದ್ದು, ಲಾರಿಯಲ್ಲಿ ಬೋರ್ಗೆ ಸಂಬಂಧಿಸಿದ ಸಾಮಗ್ರಿಗಳು ಸಹ ಇದ್ದವು .