ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಬ್ಯಾಗ್​ನಲ್ಲಿತ್ತು 9 ಲಕ್ಷ ರೂಪಾಯಿ ಮೌಲ್ಯದ ಚಿನ್ನ!?

Malenadu Today

SHIVAMOGGA  |  Dec 4, 2023ಶಿವಮೊಗ್ಗ ರೈಲ್ವೆ ನಿಲ್ದಾಣ ಆಗಾಗ ತನ್ನದೇ ವಿಶಿಷ್ಟ ಕಾರಣಕ್ಕೆ ಸುದ್ದಿಯಾಗುತ್ತಿರುತ್ತದೆ. ಅದರಲ್ಲಿ ರೈಲ್ವೆ ಸ್ಟೇಷನ್​ನಲ್ಲಿ  ಅವಾಗವಾಗ ಸಿಗುವ ವಸ್ತುಗಳು ಕುತೂಹಲ ಮೂಡಿಸುತ್ತಿರುತ್ತದೆ. ಸದ್ಯ ಇದೇ ರೀತಿಯಲ್ಲಿ ಭದ್ರಾವತಿ ರೈಲ್ವೆ ನಿಲ್ದಾಣ ಸುದ್ದಿಯಾಗಿದೆ 

READ : ಗೃಹರಕ್ಷಕದಳದಲ್ಲಿ ಖಾಲಿ ಇರುವ ಸ್ಥಾನ ಭರ್ತಿಗೆ ಅರ್ಜಿ ಆಹ್ವಾನ! ಶಿವಮೊಗ್ಗದ ವಿವಿಧ ಊರುಗಳಲ್ಲಿ ಅವಕಾಶ

ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿತು ವಾರಸುದಾರರಿಲ್ಲದ ಬ್ಯಾಗ್!

ಭದ್ರಾವತಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ವಾರಸುದಾರರಿಲ್ಲದ ಬ್ಯಾಗ್​ ಒಂದು ಪತ್ತೆಯಾಗಿತ್ತು. ಈ ಬ್ಯಾಗ್​​ನ ಬಗ್ಗೆ ಗಮನ ಹರಿಸಿದ ರೈಲ್ವೆ ಪೊಲೀಸರು ಬ್ಯಾಗ್​ನ್ನ ತಮ್ಮ ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದರು. ಈ ವೇಳೆ ಬ್ಯಾಗ್​ನಲ್ಲಿ 9 ಲಕ್ಷ ರೂ. ಮೌಲ್ಯದ ಬಂಗಾರದ ಚೈನ್, ನೆಕ್ಲೇಸ್, ಬಳೆಗಳು ಇರುವುದು ಗೊತ್ತಾಗಿದೆ 

READ : BREAKING NEWS | ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಸಾಯಿಸಿದ ಅಣ್ಣನ ಕುಟುಂಬ

ಬ್ಯಾಗ್​ ಸಿಕ್ಕಿದ್ದ ರೋಚಕ

ಹೌದು,  ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣದ ಬ್ಯಾಗ್​ ಪುನಃ ಅದರ ಮಾಲೀಕರಿಗೆ ಸಿಕ್ಕಿದ್ದೆ ರೋಚಕ.. ಇಷ್ಟಕ್ಕೂ ನಡೆದಿದ್ದು ಏನು ಎಂಬುದನ್ನ ನೋಡುವುದಾದರೆ,  ಭದ್ರಾವತಿಯ ಸ್ಫೂರ್ತಿ ಎಂಬುವರು ಸಾಗರದ ತವರುಮನೆಗೆ ತೆರಳುತ್ತಿದ್ದರು. 

ತಾಳಗುಪ್ಪ ಇಂಟರ್​ಸಿಟಿ ರೈಲು

ಇದಕ್ಕಾಗಿ ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ತಾಳಗುಪ್ಪ ಇಂಟರ್‌ಸಿಟಿ ರೈಲು ಹತ್ತಿದ್ದರು. ಶಿವಮೊಗ್ಗ ತಲುಪುವ ಹೊತ್ತಿಗೆ ಬ್ಯಾಗ್ ಕಾಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಶಿವಮೊಗ್ಗ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದರು.  ತಕ್ಷಣವೇ ಭದ್ರಾವತಿ ರೈಲ್ವೆ ಪೊಲೀಸರಿಗೂ ಮಾಹಿತಿ ರವಾನಿಸಲಾಯಿತು. ನಿಲ್ದಾಣದಲ್ಲಿ ಬ್ಯಾಗ್ ಪತ್ತೆ ಹಚ್ಚಿದ ಭದ್ರಾವತಿ ರೈಲ್ವೆ ಪೊಲೀಸರು ಅದನ್ನು ಶಿವಮೊಗ್ಗಕ್ಕೆ ತಲುಪಿಸಿದರು. ಸ್ಪೂರ್ತಿ ಅವರ ಬ್ಯಾಗ್‌ನಲ್ಲಿ  ಚಿನ್ನಾಭರಣಗಳು ಸೇಫ್ ಆಗಿದ್ದವು. 

 

Share This Article