ಶಿವಮೊಗ್ಗ-ಬೆಂಗಳೂರು ನಡುವೆ ರೆಸ್ಟೊರೆಂಟ್​ನಲ್ಲಿ ಪಿಸ್ತೂಲ್ ಕಳೆದುಕೊಂಡ ಪಿಎಸ್​ಐ

Malenadu Today

CHITRADURGA | SHIVAMOGGA  |  Dec 2, 2023 | ಶಿವಮೊಗ್ಗದಿಂದ ಬೆಂಗಳೂರುಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪಿಎಸ್​ಐ  ಒಬ್ಬರು ತಮ್ಮ ಸರ್ವಿಸ್ ರಿವಾಲ್ವರ್ ನ್ನ ಕಳೆದುಕೊಂಡ ಘಟನೆ  ಬಗ್ಗೆ ವರದಿಯಾಗಿದೆ 

READ : ಬಿಜೆಪಿ ಮುಖಂಡ ಸಿ.ಟಿ.ರವಿ ಆಪ್ತನ ಮೇಲೆ ಮುಸುಕುದಾರಿಗಳಿಂದ ಹಲ್ಲೆ!

ರೆಸ್ಟೋರೆಂಟ್​ನಲ್ಲಿ ಪಿಸ್ತೂಲ್​ ಕಳೆದುಕೊಂಡ ಪಿಎಸ್​ಐ

ಚಿತ್ರದುರ್ಗ ಜಿಲ್ಲೆ  ಜಾನುಗೊಂಡ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಕೆ.ಆರ್​.ಪುರಂ ಪೊಲೀಸ್ ಸ್ಟೇಷನ್​ ನ ಪಿಎಸ್​ಐ ಕಲ್ಲಪ್ಪ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಜಾನುಗೊಡದಲ್ಲಿ ಊಟಕ್ಕೆ  ರೆಸ್ಟೊರೆಂಟ್​ಗೆ ತೆರಳಿದ್ದಾರೆ. 

READ : ಸಿಡಿಲು ಬಡಿದು ಇಬ್ಬರು ಸಹೋದರರ ಸಾವು!

ಊಟ ಮುಗಿಸಿದ ನಂತರ ಕೈ ತೊಳೆಯಲು ಹೋದಾಗ ಪಿಸ್ತೂಲ್ ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ತಕ್ಷಣ ಪಿಸ್ತೂಲ್ ಗಾಗಿ ತೀವ್ರ ಹುಡುಕಾಟ ನಡೆಸಿದರು. ಜತೆಗೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರಾದರೂ ಪಿಸ್ತೂಲ್ ಸಿಗಲಿಲ್ಲ.

 

Share This Article