ಬಾಲಕನ ಜೊತೆ ಬೆಡಗಿಯ ಅಶ್ಲೀಲ ಕುಣಿತ! ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಏನಾಯ್ತು ಗೊತ್ತಾ?

Malenadu Today

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS 

SHIVAMOGGA  |   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗ್ರಾಮವೊಂದರಲ್ಲಿ ನಡೆದಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಅಪ್ರಾಪ್ತನ ಜೊತೆಗೆ ಯುವತಿಯೊಬ್ಬಳು ಅಸಭ್ಯವಾಗಿ ಕುಣಿದ ದೃಶ್ಯ ವೈರಲ್ ಆಗಿತ್ತು. ಈ ಬಗ್ಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಸಭ್ಯತೆ​ ! ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಲ್ಲಿ ಅಪ್ತಾಪ್ತನ ಜೊತೆ ಯುವತಿ ಅಶ್ಲೀಲ ಕುಣಿತ!? ಎಂಬ ಸುದ್ದಿಯನ್ನ ಮಲೆನಾಡು ಟುಡೆ ವರದಿ ಮಾಡಿತ್ತು. 

ಪ್ರಕರಣ ಸಂಬಂಧ ದಾಖಲಾಯ್ತು ಫೋಕ್ಸೋ ಕೇಸ್ 

ಸದ್ಯ ಘಟನೆ ಸಂಬಂಧ ಪೊಲೀಸ್ ಇಲಾಖೆಯು ಸಹ ಎಚ್ಚೆತ್ತುಕೊಂಡಿದ್ದು, ವೈರಲ್ ವಿಡಿಯೋವನ್ನು ಆಧರಿಸಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. 

ಆನಂದಪುರ ಪೊಲೀಸ್ ಸ್ಟೇಷನ್​ 

ಶಿವಮೊಗ್ಗ ಜಿಲ್ಲೆಯ ಆನಂದಪುರ ಪೊಲೀಸ್ ಠಾಣೆಯಲ್ಲಿ  ಘಟನೆ ಸಂಬಂದ ಕೇಸ್ ದಾಖಲಾಗಿದೆ. 

26/11/23 ರಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಅಸಭ್ಯವಾಗಿ ನೃತ್ಯ ಮಾಡಿದ ಆರೋಪ ಸಂಬಂಧ ಯುವತಿ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಕೇಸ್ ದರ್ಜ್ ಮಾಡಲಾಗಿದೆ

READ : ಇನೋವಾ ಕಾರಿನಲ್ಲಿ ಸಿಕ್ಕ ದಾಖಲೆಯಿಲ್ಲದ 8 ಕೋಟಿ ಯಾರದ್ದು ಗೊತ್ತಾ!? ಎಸ್​ಪಿ ಹೇಳಿದ್ದೇನು?

ಬಾಲ ಸಂರಕ್ಷಣ ನ್ಯಾಯ ಸೆಕ್ಷನ್ 75,POSCO ಸೆಕ್ಷನ್ 14,IPC ಸೆಕ್ಷನ್ 293 ರ ಅಡಿಯಲ್ಲಿ ಆನಂದಪುರ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ 

 

Share This Article