ಇನೋವಾ ಕಾರಿನಲ್ಲಿ ಸಿಕ್ಕ ದಾಖಲೆಯಿಲ್ಲದ 8 ಕೋಟಿ ಯಾರದ್ದು ಗೊತ್ತಾ!? ಎಸ್​ಪಿ ಹೇಳಿದ್ದೇನು?

unaccounted cash of Rs 8 crore found in an Innova car near Holalkere Malladihalli in Chitradurga district belongs to Malnad Traders in Shivamogga

ಇನೋವಾ ಕಾರಿನಲ್ಲಿ  ಸಿಕ್ಕ ದಾಖಲೆಯಿಲ್ಲದ 8 ಕೋಟಿ ಯಾರದ್ದು ಗೊತ್ತಾ!? ಎಸ್​ಪಿ ಹೇಳಿದ್ದೇನು?

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS 

CHITRADURGA |  ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ತಂಬಾಕು ಚೀಲದಲ್ಲಿ ಸಿಕ್ಕ 8 ಕೋಟಿ ರೂಪಾಯಿ ಹಣದ ಮೂಲ ಶಿವಮೊಗ್ಗದ ಕಡೆಗೆ ಬೊಟ್ಟು ಮಾಡಿದೆ.. 

ಇನೋವಾ ಕಾರಿನಲ್ಲಿ 8 ಕೋಟಿ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪೊಲೀಸರು ತಪಾಸಣೆ ನಡೆಸ್ತಿದ್ದ ವೇಳೆ ಮಲ್ಲಾಡಿ ಹಳ್ಳಿ   ಬಳಿ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಇನೋವಾ ಕಾರನ್ನ ತಡೆದು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ತಂಬಾಕು ಚೀಲಗಳಲ್ಲಿ ದಾಖಲೆ ಇಲ್ಲದ 8 ಕೋಟಿ ರೂಪಾಯಿ ಪತ್ತೆಯಾಗಿದೆ. 



READ : ಕಣ್ಣು ಹಾಕಂಗಿಲ್ಲ ! ಬಾಳೆ ತೋಟಕ್ಕಿದೆ ಬೆಡಗಿಯರ ಫೋಟೋ ಕಾವಲು!

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ 

ಸದ್ಯ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಸಿಕ್ಕ ಈ ಹಣದ ಮೂಲದ ಬಗ್ಗೆ ಚಿತ್ರದುರ್ಗ ಎಸ್​ಪಿ ಮಾತನಾಡಿದ್ದಾರೆ. ಅಲ್ಲಿನ ಸ್ಥಳೀಯ ಮಾದ್ಯಮಗಳ ಜೊತೆಗೆ ಮಾತನಾಡಿರುವ ಅವರು ಹೊಳಲ್ಕೆರೆ ಬಳಿ ದಾಖಲೆ ಇಲ್ಲದ ಕಾರಣ ವಶಕ್ಕೆ ಪಡೆದುಕೊಂಡ 8 ಕೋಟಿ ರುಪಾಯಿ ನಗದು ಶಿವಮೊಗ್ಗದ ಮೂಲದವರಿಗೆ ಸೇರಿದ್ದು ಎಂದಿದ್ದಾರೆ

ತಂಬಾಕು ಚೀಲಗಳಲ್ಲಿ ಸಿಕ್ಕ ಹಣವು,  ಮಲೆನಾಡ್ ಟ್ರೇಡರ್ಸ್ ಅಡಕೆ ವ್ಯಾಪಾರಿ ಸುರೇಶ್ ಅವರಿಗೆ ಸೇರಿದ್ದೆಂದು ಎಸ್ಪಿ ಧರ್ಮೇಂದ್ರಕುಮಾರ್‌ಮೀನಾ ಹೇಳಿದ್ದಾರೆ. ಹೊಳಲ್ಕೆರೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇನ್ನೋವಾವನ್ನು ಜಪ್ತಿ ಮಾಡಿ ಹಣ ವಶಪಡಿಸಿಕೊಳ್ಳಲಾಗಿತ್ತು. 

READ : ಭದ್ರಾವತಿ ಲಕ್ಕಿನಕೊಪ್ಪ ಕ್ರಾಸ್, ಹೆಚ್​.ಕೆ ಜಂಕ್ಷನ್​ ದರೋಡೆ ಕೇಸ್​ ! ಆರೋಪಿಗಳಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?

ಈ ಸಂಬಂಧಹೊಳಲ್ಕೆರೆ ತಾಲೂಕಿನ ತೇಕಲವಟ್ಟಿಯ ಸಚಿನ್, ಚಾಲಕ ಹರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಿವಮೊಗ್ಗದ ಮಲೆನಾಡ್ ಟ್ರೇಡರ್ಸ್ ನ ಸುರೇಶ್ ಗೆ ಸೇರಿದ ಹಣವೆಂದು ಮಾಹಿತಿ ನೀಡಿದ್ದಾರೆ. ಅಡಕೆ ಖರೀದಿಗಾಗಿ ಹಣ ನೀಡಿದ್ದರು. ಅಡಕೆ ಖರೀದಿ ಆಗದ ಹಿನ್ನೆಲೆಯಲ್ಲಿ ಹಣ ವಾಪಸ್‌ ಕೊಡಲು ಹೊರಟಿದ್ದೆವು ಎಂದು ಸಚಿನ್‌ ವಿಚಾರಣೆ ವೇಳೆ ತಿಳಿಸಿದ್ದಾರೆ. 

ಸದ್ಯ ದಾಖಲೆ ಇಲ್ಲದ ಹಣ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದೇವೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಎಸ್​ಪಿ ಸ್ಪಷ್ಟ ಪಡಿಸಿದ್ದಾರೆ