SHIVAMOGGA NEWS / ONLINE / Malenadu today/ Nov 23, 2023 NEWS KANNADA
Shivamogga | Malnenadutoday.com | ಯುವಕ ಕಾಣೆ
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ದಾದಾಪೀರ್ ರಾಣೆಬೆನ್ನೂರು ಬಿನ್ ಅಬ್ದುಲ್ ಘನಿ ರಾಣೆಬೆನ್ನೂರು ಎಂಬ 24 ವರ್ಷದ ಯುವಕ, ಕಳೆದ 3 ತಿಂಗಳ ಹಿಂದೆ ಮನೆಯಿಂದ ಹೋದವರು ವಾಪಸ್ ಮನೆಗೆ ಹೋಗಿರುವುದಿಲ್ಲ.
ಕಾಣೆಯಾದ ವ್ಯಕ್ತಿ 5.5 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಹಿಂದಿ, ಉರ್ದು ಭಾಷೆ ಮಾತನಾಡುತ್ತಾನೆ. ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
——————-
READ : ಮೂರು ದಿನ ನಾಲ್ಕು ಜಿಲ್ಲೆಗಳ ನಗರಗಳಲ್ಲಿ ಮೆಸ್ಕಾಂನ ಈ ಸೇವೆಗಳು ಸಿಗುವುದಿಲ್ಲ! ಕಾರಣ ಇಲ್ಲಿದೆ
ಮೃತ ವ್ಯಕ್ತಿಯ ವಾರಸ್ಸುದಾರರ ಪತ್ತೆಗೆ ಮನವಿ
ನವೆಂಬರ್ 20 ರಂದು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪುಟ್‍ಪಾತ್‍ನಲ್ಲಿ ಸುಸ್ತಾಗಿ ಬಿದ್ದಿದ್ದ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.
ಮೃತನು ಸುಮಾರು 5 ಅಡಿ 10 ಇಂಚು ಎತ್ತರ, ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು, 01 ಇಂಚು ಉದ್ದದ ಗಡ್ಡ ಬಿಟ್ಟಿರುತ್ತಾನೆ, ಮೃತನು ಬಿಳಿ ಮಾಸಲು ಬಣ್ಣದ ಶರ್ಟ್, ಕಂದುಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 ಅಥವಾ 9611761255 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
.
