ಹೆಂಡ್ತಿಗೆ ಹುಷಾರಿಲ್ಲ ಪ್ರಕರಣ | ಒಂದು ಕಾರಿನ ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿದ್ದು 8 ಕಾರು! ಹೇಗೆ ಗೊತ್ತಾ?

Malenadu Today

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS

Shivamogga |   ಮಲೆನಾಡು ಟುಡೆ ಇತ್ತೀಚೆಗೆ ಕಾರು ಪಡೆದು ವಾಪಸ್ ಕೊಡದ ಸುದ್ದಿ ಬಗ್ಗೆ ವರದಿ ಮಾಡಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು. ಇದೀಗ ಪ್ರಕರಣವನ್ನು ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ 

READ : ಪತ್ನಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಪಡೆದವ ಮಾಡಿದ್ದು ಹೀಗೆ! ವಿವರ ಇಲ್ಲಿದೆ

ದಿನಾಂಕಃ 18-10-2023  ರಂದು ಶಿವಮೊಗ್ಗ ಟೌನ್ ಆರ್.ಎಂ.ಎಲ್ ನಗರದ ವಾಸಿ ಸೈಯದ್ ಸಾದಿಕ್ ರವರ ಟಾಟಾ ಇನ್ನೋವಾ ಕಾರನ್ನು ಆತನ ಪರಿಚಯಸ್ಥನಾದ ಕಿರಣ್ ಕುಮಾರ್ @ ಗುಂಡ ಎಂಬಾತ ತೆಗೆದುಕೊಂಡು ಹೋಗಿದ್ದ. ಆನಂತರ ಕಾರನ್ನ ವಾಪಸ್​ ಕೊಡದೇ ಪೋನ್ ಸ್ವಿಚ್​ ಆಫ್​ ಮಾಡಿಕೊಂಡಿದ್ದ. 

ಈ ಬಗ್ಗೆ ಅನುಮಾನಗೊಂಡ ಸಂತ್ರಸ್ತರು ದೂರು ನೀಡಿದ್ದರು.  ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ಸಂಖ್ಯೆ 0380/2023 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖಾ ತಂಡ ರಚನೆಯಾಗಿತ್ತು.  ಅಂಜನ್ ಕುಮಾರ್, ಪಿಐ ದೊಡ್ಡಪೇಟೆ, ಪೊಲೀಸ್‌ ಠಾಣೆ ರವರ ನೇತೃತ್ವದದಲ್ಲಿ  ಮಂಜಮ್ಮ ಪಿಎಸ್ಐ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ – ಲಚ್ಚಾನಾಯ್ಕ, ಪಾಲಾಕ್ಷನಾಯ್ಕ, ಪಿಸಿ – ರಮೇಶ್,  ನಿತಿನ್ ಮತ್ತು ಚಂದ್ರನಾಯ್ಕ ರವರುಗಳನ್ನೊಳಗೊಂಡ ತನಿಖಾ ತಂಡ ಇದೀಗ ಆರೋಪಿಯನ್ನ  ಬಂಧಿಸಿದೆ. 

ಅಲ್ಲದೆ ಆರೋಪಿ ಬಂಧನದ ವೇಳೆ ಒಟ್ಟು 8 ಕಾರುಗಳು ಪತ್ತೆಯಾಗಿವೆ. ದಿನಾಂಕಃ 06-11-2023  ರಂದು  ಪ್ರಕರಣದ ಆರೋಪಿ ಕಿರಣ್ ಎ @ ಗುಂಡಾ, 35 ವರ್ಷ, ಕಾರು ಚಾಲಕ ವೃತ್ತಿ ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಟೌನ್ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 10,00,000/- ರೂಗಳ  2 ಟೊಯೋಟಾ ಇನ್ನೋವಾ ಕಾರು, 3 ಸ್ವಿಫ್ಟ್  ಡಿಸೈರ್ ಕಾರು ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರು ಸೇರಿದಂತೆ ಒಟ್ಟು 08 ಕಾರುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಆರೋಪಿ ಕಳ್ಳತನ ಮಾಡುತ್ತಿದ್ದನಾ? ಅಥವಾ ಕಾರುಗಳನ್ನ ಪಡೆದು ಮೋಸ ಮಾಡುತ್ತಿದ್ದನಾ? ಆತನ ವಿರುದ್ಧದ ಆರೋಪವೇನು ಎಂಬುದು ಸ್ಪಷ್ಟವಾಗಿಲ್ಲ


Share This Article