KARNATAKA NEWS/ ONLINE / Malenadu today/ Oct 17, 2023 SHIVAMOGGA NEWS
ಈ ಹಿಂದೇ ಪಟಾಕಿ ಇಟ್ಟು ಆನೆಯೊಂದರ ಬಾಯಿ ಸುಟ್ಟ ಘಟನೆ ದೊಡ್ಡಮಟ್ಟಕ್ಕೆ ಸುದ್ದಿಯಾಗಿತ್ತು. ಇದೀಗ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಲ್ಲಿ ನಡೆದ ಘಟನೆ ಕೂಡ ಈ ಹಿಂದೆ ನಡೆದಿದ್ದ ಸನ್ನಿವೇಶವನ್ನು ನೆನಪಿಸುತ್ತಿದೆ.
ಸಕ್ರೆಬೈಲ್ ಆನೆ ಬಿಡಾರದಿಂದ ಕ್ಯಾಂಪ್ ಕಾಡಿಗೆ ಬಿಟ್ಟಿದ್ದ ಆನೆಯನ್ನು ವಾಪಸ್ ಕ್ಯಾಂಪ್ಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ರಕ್ತ ಬಿದಿದ್ದನ್ನ ಗಮನಿಸಿದ ಕಾವಾಡಿ ಹಾಗೂ ಮಾವುತರು ಬಾನುಮತಿ ಮರಿ ಹಾಕಿರಬಹುದು ಎಂದು ಕೊಂಡಿದ್ದರು. ಆದರೆ ಆದರೆ ಬಾನುಮತಿಯ ಬಾಲ ಕಟ್ಟಾಗಿ ಅಲ್ಲಿ ರಕ್ತ ಚೆಲ್ಲಿತ್ತು. ಈ ಬಗ್ಗೆ ಮಲೆನಾಡು ಟುಡೆ ಎಕ್ಸ್ಕ್ಲ್ಯೂಸಿವ್ ಆಗಿ ವರದಿ ಮಾಡಿದೆ. ಈ ವರದಿ ಹೊರಬೀಳದಿದ್ದಲ್ಲಿ ಪ್ರಕರಣ ಮುಚ್ಚಿ ಹೋಗುವ ಸಾಧ್ಯತೆ ಇತ್ತಾ ಎನ್ನುವ ಅನುಮಾನವೂ ಇದೆ.
ಈ ಮಧ್ಯೆ ಡಿಸಿಎಫ್ ವನ್ಯಜೀವಿ ವಿಭಾಗ ಪ್ರಸನ್ನ ಕೃಷ್ಣ ಪಟಗಾರ್ ಮಲೆನಾಡು ಟುಡೆಯೊಂದಿಗೆ ಮಾತನಾಡಿದ್ದು, ನಿನ್ನೆ ಈ ಘಟನೆ ನಡೆದಿದ್ದು, ಸಂಪೂರ್ಣ ವಿಚಾರದ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ತನಿಖೆಗೆ ಸೂಚಿಸಿದ್ದೇನೆ ಎಂದಿದ್ದಾರೆ. ಹರಿತವಾದ ವಸ್ತುವಿನಿಂದ ಉದ್ದೇಶಪೂರ್ವಕವಾಗಿ ಬಾಲ ಕಟ್ ಮಾಡಿರುವ ಸಾಧ್ಯತೆ ಬಗ್ಗೆ ಅನುಮಾನವಿದೆ. ಸದ್ಯ ಆನೆಗೆ ಪೂರಕವಾದ ಚಿಕಿತ್ಸೆ ನೀಡಲಾಗುತ್ತಿದ್ದು, ಆನೆಯ ಬಾಲವನ್ನು ಅಲ್ಲಾಡಿಸುತ್ತಿದ್ದು, ಆರೋಗ್ಯಕರವಾಗಿದೆ ಎಂದಿದ್ದಾರೆ.
ಘಟನೆ ಸಂಬಂಧ ಕ್ಯಾಂಪ್ಗೆ ಭೇಟಿಕೊಟ್ಟು ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದೇನೆ , ಅರಣ್ಯ ಸಂರಕ್ಷಣಾ ಕಾಯಿದೆಯಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಅಲ್ಲದೆ ಪೊಲೀಸ್ ಇಲಾಖೆಯಿಂದಲೂ ವಿಚಾರಣೆಗೂ ತಿಳಿಸಿದ್ದೇನೆ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ
