KARNATAKA NEWS/ ONLINE / Malenadu today/ Oct 12, 2023 SHIVAMOGGA NEWS
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ ಹಾಗೂ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಇಂದು ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಪ್ರತಿಭಟನಾ ಸಭೆಯನ್ನ ನಡೆಸಿದೆ. ಈ ಸಭೆಯಲ್ಲಿ ರಾಗಿಗುಡ್ಡದಲ್ಲಿ ನಡೆದ ಘಟನೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಸರ್ಕಾರಕ್ಕೆ ಕಿವಿ ಮತ್ತು ಕಣ್ಣು ವಿರಡೂ ಇಲ್ಲ ಎಂದು ಆರೋಪಿಸಿದ್ರು.
ಇನ್ನೂ ಇದೇ ವೇಳೆ ಮಾತನಾಡಿದ ಮಾಜಿ ಡಿಸಿಎಂ ಅಕ್ಷರಶಃ ಕಾಂಗ್ರೆಸ್ ವಿರುದ್ದ ಮಾತಿನ ದಾಳಿಯನ್ನೇ ನಡೆಸಿದರು. ರಾಜ್ಯದ ಕುತಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯೆ ಅಥವಾ ಹಿಂದೂ ರಕ್ತ ಹರಿಯುತ್ತಿದೆಯೆ?
ಅಖಂಡ ಭಾರತದ ಭೂಪಟಕ್ಕೆ ಹಸಿರು ಬಣ್ಣ ಬಳಿದಿದ್ದಾರೆ, ಸಿದ್ದರಾಮಯ್ಯರವರೆ ನಿಮ್ಮ ದೇಹದಲ್ಲಿ ಹಸಿರು ರಕ್ತ ಇದೆಯೋ ಅಥವಾ ಹಿಂದೂ ರಕ್ತ ಹರಿಯುತ್ತಿದೆಯೋ ಎಂಬುದನ್ನು ತೀರ್ಮಾನ ಮಾಡಬೇಕಾಗಿದೆ. ಯಾಕೆಂದರೆ ಅಖಂಡ ಭಾರತಕ್ಕಾಗಿ ಪ್ರಾಣ ತೆತ್ತ ಸಾವಿರಾರು ಸ್ಥಾತಂತ್ರ್ಯ ಹೋರಾಟಗಾರರು ಸ್ವರ್ಗದಲ್ಲಿದ್ದಾರೆ. ನಿಮ್ಮ ವರ್ತನೆ ಅವರಿಗೆ ಶಾಂತಿ ತರುವುದಿಲ್ಲ, ಹಸಿರು ಬಣ್ಣ ಬಿಸಾಕಿ ಕೇಸರಿ ಬಣ್ಣ ಬರುತ್ತದೆಯೋ ಅಲ್ಲಿವರೆಗೆ ಈ ಹೋರಾಟ ನಡೆಯುತ್ತದೆ ಎಂದರು

ಸಿದ್ದರಾಮಯ್ಯರವರಿಂದ ರಾಷ್ಟ್ರ ಭಕ್ತ ಹಿಂದೂಗಳ ರಕ್ಷಣೆ ಆಗುವುದಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿ ತರಲು ಹೊರಟರೆ ಕಾಂಗ್ರೆಸ್ ಒಪ್ಪುವುದಿಲ್ಲವಂತೆ. ಈ ಕಾನೂನು ಒಪ್ಪುವುದಾದರೇ ಇಲ್ಲಿ ಇರಿ, ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದರು
ಲಾಂಗು, ಮಚ್ಚು ತೋರಿಸಿದ ಎಷ್ಟು ಜನರ ಮೇಲೆ ಕೇಸ್ ಹಾಕಿದ್ದಿರಿ? ಮುಸ್ಲಿಮರಿಗೆ ಸಿದ್ದರಾಮಯ್ಯನವರ ರಕ್ಷಣೆಯಿದೆ. ಡಿಸಿ, ಎಸ್ಪಿ ಅವರೇ ಎಷ್ಟು ದಿನ ಕಾಂಗ್ರೆಸ್ ನ ಗುಲಾಮರಾಗುತ್ತಿರಿ? ಹರ್ಷನ ಕೊಲೆಯಾದಾಗ ನಾವು ಸಹ ಲಾಂಗು ಮಚ್ಚು ಹಿಡಿದಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕಡಿದು ಹಾಕುವಂತೆ ಹಾಕುತ್ತಿದ್ದೆವು, ಆದರೆ ನಾವು ಅದನ್ನು ಮಾಡಲಿಲ್ಲ. ಓಂ ಚಿತ್ರವನ್ನು ಸಿದ್ದರಾಮಯ್ಯನವರಿಗೆ ತೋರಿಸಬೇಕು. ಶಾಂತಿಯಿಂದ ಸಭೆ ಮಾಡುತ್ತಿದ್ದೇವೆ ಎಂದರು.

ಕೆಂಪುಕೋಟೆ ಮೇಲೆ ಮುಂದೊಂದು ದಿನ ಭಗಧ್ವಜ ಹಾರಿಸುತ್ತೇವೆ ಎಂದಿದ್ದೆ. ಆಗ ಡಿ.ಕೆ ಶಿವಕುಮಾರ್ ಗೆ ಸಿಟ್ಟು ಬಂದಿತ್ತು. ಡಿ.ಕೆ ಶಿವಕುಮಾರ್ ನೀನು ಈಗ ಡಿಸಿಎಂ ಆಗಿರುವುದು. ನಾನು ಆವಾಗಲೇ ಡಿಸಿಎಂ ಆಗಿದ್ದೆ ಎಂದು ಈಶ್ವರಪ್ಪ ಹೇಳಿದರು.

ನಮ್ಮ ಸಮಾಜದವರನ್ನು ಮುಟ್ಟಿದರೆ ಅದೇ ಆಯುಧದಿಂದ ಉತ್ತರ ಕೊಡೋಣ. ಮುಸ್ಲಿಂ ಗೂಂಡಾಗಳು ಹರ್ಷನ ಕೊಲೆ ಮಾಡಿದ್ದಾರೆ. ನಿಮ್ಮ ಮಗ ಯತೀಂದ್ರನಿಗೆ ಕೊಲೆ ಮಾಡಿದ್ದರೆ ನಿಮಗೆ ಏನು ಅನಿಸುತ್ತಿತ್ತು? ಡಿಕೆ ಶಿವಕುಮಾರ್ ನಿಮ್ಮ ತಮ್ಮನನ್ನು ಮುಸ್ಲಿಮರು ಕೊಲೆ ಮಾಡಿದ್ದರೆ ಏನು ಅನಿಸುತ್ತಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.

ಮತ್ತೊಮ್ಮೆ ರಾಘಣ್ಣ ಸಂಸದರಾಗುತ್ತಾರೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ. ರಾಘವೇಂದ್ರ ಎಂಪಿ ಆಗುವ ಮುಂಚೆ ಶಿವಮೊಗ್ಗ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ನೋಡಿ. ನಮ್ಮ ಜಿಲ್ಲೆ ಅಭಿವೃದ್ಧಿ ಹೇಗಾಗಿದೆ ಎಂದು ಅವರ ಪಕ್ಷದವರೇ ಹೇಳುತ್ತಾರೆ. ಅಖಂಡ ಭಾರತ ಜೊತೆಗೆ ಕೇಸರಿ ಭಾರತ ಮಾಡೋಣ ಎಂದರು
ಇನ್ನಷ್ಟು ಸುದ್ದಿಗಳು
