KARNATAKA NEWS/ ONLINE / Malenadu today/ Oct 11, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಕೂಡೂರು ಸಮೀಪದ ಶಾಂತಪುರದಲ್ಲಿ ನಿನ್ನೆ ಬಸ್ನಿಂದ ಮಗುವಿನ ಜೊತೆ ವ್ಯಕ್ತಿಯೊಬ್ಬ ಕೆಳಕ್ಕೆ ಬಿದ್ದ ಘಟನೆಯೊಂದು ಸಂಭವಿಸಿದೆ.
ಗಂಭೀರ ಗಾಯ | ಈ ಭಾಗರ ರೂಟ್ ಬಸ್ ಗುರುಶಕ್ತಿ ಬಸ್ ಎಂದಿನಂತೆ ಹೊಸನಗರದಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿತ್ತು. ಮಾರ್ಗ ಮಧ್ಯೆ ಕೀಳಂಬಿ ಸ್ಟಾಪ್ನಿಂದ ಮಗುವೊಂದರ ಜೊತೆ ವ್ಯಕ್ತಿಯೊಬ್ಬರು ಬಸ್ ಹತ್ತಿದ್ದಾರೆ. ಆದರೆ ಬಸ್ ವಿಪರೀತ ರಶ್ ಇದ್ದಿದ್ದರಿಂದ ಸೀಟು ಸಿಗದೆ ನಿಂತಿದ್ದರು. ಈ ನಡುವೆ ಬಸ್ 200-300 ಮೀಟರ್ ಮುಂದಕ್ಕೆ ದಾಟಿ ಟರ್ನ್ ತೆಗೆದುಕೊಂಡಿದೆ. ಈ ವೇಳೆ ಬ್ಯಾಲೆನ್ಸ್ ಸಿಗದೆ, ಮಗುವಿನ ಸಮೇತ ವ್ಯಕ್ತಿಯು ಕೆಳಕ್ಕೆ ಬಿದ್ದಿದ್ದಾರೆ.
ತಕ್ಷಣ ಬಸ್ ನಿಲ್ಲಿಸಲು ಸೂಚಿಸಿದ ಪ್ರಯಾಣಿಕರು, ಕೆಳಕ್ಕೆ ಇಳಿದು ವ್ಯಕ್ತಿಯ ಆರೈಕೆ ಮಾಡಿದ್ದಾರೆ. ಅಲ್ಲದೆ ಮಗುವನ್ನ ರಕ್ಷಣೆ ಮಾಡಿದ್ದಾರೆ. ಬಸ್ನಿಂದ ಬಿದ್ದರು, ಮಗುವಿಗೆ ಏನಾಗದಂತೆ ವ್ಯಕ್ತಿಯು ರಕ್ಷಿಸಿದ್ದರು. ಬಳಿಕ ಆ್ಯಂಬುಲೆನ್ಸ್ ಮೂಲಕ ಅವರನ್ನು ಕೋಡೂರು ಪ್ರಾಥಮಿಕ ಕೇಂದ್ರ ಹಾಗೂ ಅಲ್ಲಿಂದ ಶಿವಮೊಗ್ಗಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನಷ್ಟು ಸುದ್ದಿಗಳು
