ದೇವರ ಪೂಜೆಗೆ ಹಣ್ಣು ಕಾಯಿ ತೆಗೆದುಕೊಂಡು ಹೊಗುತ್ತಿದ್ದ ಮಹಿಳೆಗೆ ಕರೆಂಟ್ ಶಾಕ್! ಬೇಲಿ ತಂತಿಯಲ್ಲಿ ಅಡಗಿದ್ದ ಜವರಾಯ

Malenadu Today

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ವಿದ್ಯುತ್ ಅವಗಢ ಸಂಭವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ತೀರ್ಥಹಳ್ಳಿ ತಾಲ್ಲೂಕು ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.   ಅಡಕೆ ತೋಟದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಸುಮಿತ್ರಮ್ಮ (72) ಮೃತದುರ್ದೈವಿ. 

ಅವರಿಗೆ ಇಬ್ಬರು ಪುತ್ರರು, ಮತ್ತು ಪುತ್ರಿ ಇದ್ದಾರೆ. ಮಂಗಳವಾರ ತೋಟಕ್ಕೆ ಹೋಗಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಕೋಣಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ದಿನಗಳ ಹಿಂದೆಯಷ್ಟೆ ಕಗ್ಗುಂಡಿಗೆ ಬಂದಿದ್ದ ಮಹಿಳೆ ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಕ್ಕಳ ಜೊತೆಗೆ ವಾಸವಾಗಿದ್ದರು.  

ಸೋಮವಾರದ ರಾತ್ರಿ ಮಳೆಬಿದ್ದ ಪರಿಣಾಮ ವಿದ್ಯುತ್ ತಂತಿ ಕಟ್ ಆಗಿತ್ತು. ವಿದ್ಯುತ್ ತಂತಿ ತುಂಬಾ ಹಳೆಯದಾದ ಪರಿಣಾಮ ಲೈನ್ ಕಟ್ ಆಗಿರಬಹುದು ಎಂದು ಹೇಳಲಾಗುತ್ತಿದೆ.

ನಿನ್ನೆ ಮಂಗಳವಾರ ಬೆಳಗ್ಗೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಡುವುವಾಗ ಗೇಟ್ ಮುಟ್ಟಿದಾಗ .ವಿದ್ಯುತ್ ಶಾಕ್ ಹೊಡೆದಿದೆ. ಶಾಕ್ ಹೊಡೆಯುತ್ತಿದ್ದಂತೆ ರಕ್ಷಿಸಲು ಬಂದ  ಮಕ್ಕಳಿಗೂ  ವಿದ್ಯುತ್ ತಗಲಿದೆ.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article