KARNATAKA NEWS/ ONLINE / Malenadu today/ Oct 9, 2023 SHIVAMOGGA NEWS
ಶಿವಮೊಗ್ಗದ ಆಯನೂರು ಸಮೀಪ ಮೂರು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರಿಗೆ ಗಾಯಗಳಾಗಿವೆ.
ಇವತ್ತು ಬೆಳಗ್ಗೆ ವೀರಣ್ಣನ ಬೆನವಳ್ಳಿ ಸಮೀಪ ಈ ಘಟನೆ ಸಂಭವಿಸಿದೆ. ಆಯನೂರು ಕಡೆಯಿಂದ ಶಿವಮೊಗ್ಗ ಕಡೆ ಬೈಕ್ವೊಂದು ಬರುತ್ತಿತ್ತು. ಅದೇ ಸಂದರ್ಭದಲ್ಲಿ ಶಿವಮೊಗ್ಗದ ಕಡೆಯಿಂದ ಎರಡು ಬೈಕ್ಗಳು ಆಯನೂರು ಕಡೆಗೆ ಹೋಗುತ್ತಿತ್ತು. ಈ ಮಧ್ಯೆ ಒಂದು ಬೈಕ್ ಸವಾರ ಟರ್ನ್ ತೆಗೆದುಕೊಂಡಿದ್ದಾನೆ ಎನ್ನಲಾಗಿದ್ದು, ಹಿಂದಿನಿಂದ ಬರುತ್ತಿದ್ದ ಬೈಕ್ ಮುಂದಿನ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಆಯನೂರು ಕಡೆಯಿಂದ ಬರುತ್ತಿದ್ದ ಬೈಕ್ ಎದುರು ಆಕ್ಸಿಡೆಂಟ್ ಆದ ಬೈಕ್ಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ನಲ್ಲಿದ್ದ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ. ಇನ್ನೂ ಆಯನೂರು ಕಡೆಯಿಂದ ಬರುತ್ತಿದ್ದ ಬೈಕ್ ಸವಾರನಿಗೂ ಗಾಯವಾಗಿದೆ.
ವಿಷಯ ತಿಳಿಯುತ್ತಲೇ ಸ್ಥಳದಲಿದ್ದವರು ಆ್ಯಂಬುಲೆನ್ಸ್ಗೆ ಕರೆ ಮಾಡಿ ಮೂವರನ್ನ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಸದ್ಯ ಮೂವರು ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾರೆ . ಆಯನೂರು ಉಪಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಬಂಧ ಪೊಲೀಸರು ಮಹಜರು ನಡೆಸಿದ್ದಾರೆ.
ಇನ್ನಷ್ಟು ಸುದ್ದಿಗಳು
