KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’

ಇತ್ತೀಚೆಗೆ ಕಾಂಗ್ರೆಸ್ನ ಸೌಗಂಧಿಕಾ ರಘುನಾಥ್ ಬಿಜೆಪಿಯ ಚಕ್ರವರ್ತಿ ಸೂಲಿಬೆಲೆ ಫೇಸ್ಬುಕ್ ಅಕೌಂಟ್ನಲ್ಲಿ ಬರೆದ ಕಾಮೆಂಟ್ವೊಂದಕ್ಕೆ ಪ್ರತಿಯಾಗಿ ದೂರು ನೀಡಿದ್ದರು. ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾದ ದೂರಿನ ಸಂಬಂಧ ಚಕ್ರವರ್ತಿ ಸೂಲಿಬೆಲೆಯವರ ವಿಚಾರಣೆಯು ನಡೆದಿತ್ತು.
ಇದೀಗ ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ (Shimoga CEN Police Station) ಇನ್ನೊಂದು ದೂರು ದಾಖಲಾಗಿದ್ದು, ಈ ಸಲ ಶಿವಮೊಗ್ಗ ಹೈಕ್ಲು ಎಂಬ ಹೆಸರಿನ ಟ್ವಿಟ್ಟರ್ ಹಾಗೂ ಕಿರಿಕ್ ಸಂಗ್ಲಿ ಹೆಸರಿನ ಟ್ವಿಟ್ಟರ್ ಖಾತೆಯ ವಿರುದ್ಧ ರಾಕೇಶ್ ಎಂಬವರು ದೂರು ನೀಡಿದ್ದಾರೆ.
ಬಸವರಾಜ ರಾಯರೆಡ್ಡಿಯವರು ಸಿದ್ದರಾಮಯ್ಯರವರನ್ನು ಈ ದೇಶದ ಬೆಸ್ಟ್ ಸಿಎಂ ಎಂದು ಕರೆದಿದ್ದರು. ಈ ಸಂಬಂಧ ಖಾಸಗಿ ಚಾನಲ್ವೊಂದು ಪ್ರಕಟಿಸಿದ್ದ ಟ್ವೀಟ್ ಹಾಗೂ ರೈತರ ಮುಖಂಡರಿಂದ ಸನ್ಮಾನ ಸ್ವೀಕರಿಸಿದ ಪೋಟೋವೊಂದಕ್ಕೆ ಹಾಕಿ ಕಾಮೆಂಟ್ ಮತ್ತು ಪೋಸ್ಟ್ನಲ್ಲಿ ಬಳಸಿದ ಬಾಷೆ ವಿರುದ್ದ ದೂರು ನೀಡಲಾಗಿದೆ.
ವರ್ಗಗಳ ನಡುವೆ ಉದ್ದೇಶ ಪೂರ್ವಕವಾಗಿ ಪ ಪ್ರಚೋಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ, ವದಂತಿಯನ್ನು ಹರಡಿರುವವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಂಪ್ಲೆಂಟ್ನಲ್ಲಿ ಮನವಿ ಮಾಡಲಾಗಿದ್ದು, ಈ ಸಂಬಂಧ IPC 1860 (U/s-505(1)(C),153) ಅಡಿಯಲ್ಲಿ ಕೇಸ್ ದಾಖಲಾಗಿದೆ
ಇನ್ನಷ್ಟು ಸುದ್ದಿಗಳು
