ವಾರ್ಡ್​ ವಿಸಿಟ್ ವೇಳೆ ಸಿಟ್ಟಾದ ಶಾಸಕ ಚನ್ನಬಸಪ್ಪ! ಇಷ್ಟಕ್ಕೂ ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಜನರ ಸಮಸ್ಯೆಯನ್ನು ಆಲಿಸುವ ಸಲುವಾಗಿಯೇ ವಾಟ್ಸ್ಯಾಪ್ ನಂಬರ್​ವೊಂದನ್ನ ಕ್ರಿಯೆಟ್ ಮಾಡಿ ಅದರ ಮೂಲಕ ಅಹವಾಲು ಸಲ್ಲಿಕೆಗೆ ವ್ಯವಸ್ಥೆ ಮಾಡಿದ್ದರು. ಅದರಿಂದ ಎಷ್ಟು ಉಪಯೋಗ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಖುದ್ದಾಗಿ ಶಾಸಕರು ನಗರದ ಹಲವೆಡೆ ಓಡಾಡಿ, ಆಗಬೇಕಿರುವ ಸಮಸ್ಯೆಗಳು ಹಾಗೂ ಆಗದಿರುವ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿ, ಸ್ಥಳದಲ್ಲಿಯೇ ಪರಿಹಾರ ನೀಡುತ್ತಿದ್ದಾರೆ. 

ಇದೇ ರೀತಿಯಲ್ಲಿ ಶಿವಮೊಗ್ಗ ಸಿಟಿಯ ಐದನೇ ವಾರ್ಡ್​ನಲ್ಲಿ ಸ್ಥಳೀಯರು ಕಂಪ್ಲೆಂಟ್ ಮಾಡಿದ್ದರಿಂದ ಶಾಸಕರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಮೇಯರ್​ ಶಿವಕುಮಾರ್​ರವರ ವಾರ್ಡ್​ನಲ್ಲಿಯೇ ಸ್ವಚ್ಚತೆ ಮರೆಯಾಗಿತ್ತು. ಗಲೀಜು ನೀರಿನ ನಡುವೆ ಕುಡಿಯುವ ನೀರು ಹಿಡಿಯಬೇಕು ಸಾರ್, ನಾವೇ ಚರಂಡಿ ಕ್ಲೀನ್​ ಮಾಡಿಕೊಳ್ಳಬೇಕು, ನೂರು ರೂಪಾಯಿ ಕೊಟ್ಟರಷ್ಟೆ ಕ್ಲೀನ್ ಮಾಡುತ್ತಾರೆ ಎಂದು ಮಹಿಳೆಯರು ಶಾಸಕರ ಬಳಿಯಲ್ಲಿ ದೂರು ಹೇಳಿದರು. 

ಎಲ್ಲವನ್ನು ಸಮಾಧಾನದಿಂದ ಕೇಳಿದ ಶಾಸಕರು ನಡೆದುಕೊಂಡು ಏರಿಯಾದಲ್ಲಿ ಮುಂದಕ್ಕೆ ಬರುತ್ತಿದ್ದಾಗ, ಹಿಂದಿನಿಂದ ವ್ಯಕ್ತಿಯೊಬ್ಬರು ಆಡಿದ ಮಾತು ಚನ್ನಬಸಪ್ಪರನ್ನು ಕೆರಳಿಸಿತು. ಆ ಪದವನ್ನು ಬಳಸಬೇಡಿ ಎಂದು ಶಾಸಕರು ಸಿಟ್ಟಾಗಿಯೇ ಹೇಳಿದರು. ಈ ವೇಳೆಯಲ್ಲಿ ಸ್ಥಳೀಯ ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು

ಮೂಲಭೂತ ಸಮಸ್ಯೆಗಳನ್ನು ಆಲಿಸಲು ಬಂದ ಶಾಸಕರಿಗೆ ಹಿಂಬದಿಯಲ್ಲಿ ಬರುತ್ತಿದ್ದ ವ್ಯಕ್ತಿಯು ಅಂದ ಪದವು ಶಾಸಕರನ್ನ ಸಿಟ್ಟಾಗಿಸಿತ್ತು. ಹೀಗಾಗಿ ಆತನಿಗೆ ಸ್ಥಳದಲ್ಲಿಯೇ ಶಾಸಕರು ಕ್ಲಾಸ್ ತೆಗೆದುಕೊಂಡರು. ಬಳಿಕ ರಾಜಕಾರಣ ಮಾಡಬೇಡಿ, ಸಮಸ್ಯೆಗೆ ಪರಿಹಾರ ಹುಡುಕಿ, ಅನಾವಶ್ಯಕ ಮಾತುಗಳು ಬೇಡ ಎಂದು ಶಾಸಕರು ತಿಳಿಸಿದರು. ಅಲ್ಲದೆ ವಾರ್ಡ್​ನ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಹುಡುಕುವುದಾಗಿ ತಿಳಿಸಿದರು.


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor