KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’
ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದಲ್ಲಿ ಗಣಪತಿ ವಿಸರ್ಜನೆ ವೇಳೆ ನಿನ್ನೆ ಸಣ್ಣಪುಟ್ಟ ಘಟನೆಯೊಂದು ನಡೆದಿದ್ದು, ರಾತ್ರಿಯೇ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿಕೊಟ್ಟು ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಿದ್ದಾರೆ.
ಇಲ್ಲಿನ ಕೇಸರಿ ಪಡೆಯ ಗಣಪತಿ ವಿಸರ್ಜನೆಯ ಮೆರವಣಿಗೆ ಟ್ಯಾಂಕ್ ಮೊಹಲ್ಲಾದಲ್ಲಿ ನಡೆಯುತ್ತಿತ್ತು. ಈ ವೇಳೇ ಅಲ್ಲಿಯ ಮಸೀದಿ ಬಳಿಯಲ್ಲಿ ಮೆರವಣಿಗೆ ಸಾಗಿ ಬಂದಿದೆ.
ಅದೇ ಸಂದರ್ಭದಲ್ಲಿ ಪೇಪರ್ ಚೂರುಗಳು ಒಮ್ಮೆಲೆ ಹಾರುವ ಪಟಾಕಿಯೊಂದನ್ನ ಹೊಡೆಯಲಾಗಿದೆ. ಈ ಪೇಪರ್ ಪಟಾಕಿಯನ್ನು ಹೊಡೆದಿದ್ದಕ್ಕೆ ಅಲ್ಲಿದ್ದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಪರಸ್ಪರ ಮಾತಿನ ಚಕಮಕಿ ನಡೆದಿದೆ.
ಇನ್ನೂ ಸ್ಥಳದಲ್ಲಿ ವಿಚಾರ ಮಾತಿನ ಚಕಮಕಿಗೆ ತಿರುಗಿದ ಬೆನ್ನಲ್ಲೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ಬಂದು ಸನ್ನಿವೇಶವನ್ನು ಕಂಟ್ರೋಲ್ಗೆ ತೆಗೆದುಕೊಂಡಿದ್ದಾರೆ.
ಕೆಎಸ್ಆರ್ಪಿ ಹಾಗೂ ಹೆಚ್ಚುವರಿ ಭದ್ರತಾ ಸಿಬ್ಬಂದಿ ಜೊತೆಗೆ ಎಸ್ಪಿ ಮಿಥುನ್ ಕುಮಾರ್ ಕೂಡ ಸ್ಥಳಕ್ಕೆ ಬಂದು ಪರಿಸ್ತಿತಿಯನ್ನು ನಿಯಂತ್ರಿಸಿದ್ದಾರೆ. ಗಣಪತಿ ಮೆರವಣಿಗೆಯನ್ನು ಮುಂದಕ್ಕೆ ಸಾಗಿಸಿದಷ್ಟೆ ಅಲ್ಲದೆ ಇನ್ನೊಂದು ಕೋಮಿನವರ ದೂರುಗಳನ್ನು ಆಲಿಸಿದ್ದಾರೆ.
ಇನ್ನೂ ರಾತ್ರಿಯಾಗಿದ್ದರಿಂದ ಪೊಲೀಸ್ ಬಂದೋಬಸ್ತ್ ಮೂಲಕ ಸ್ಥಳದಲ್ಲಿ ಜಮಾಯಿಸಿದ್ದವರನ್ನ ಮನೆಗೆ ಹೋಗುವಂತೆ ಸೂಚಿಸಲಾಯ್ತು. ಸದ್ಯ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆ.
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?