ಸಣ್ಣ ಗಣಪತಿಗಳ ವಿಸರ್ಜನಾ ಮೆರವಣೆಗೆ ಮೇಲೂ ಶಿವಮೊಗ್ಗ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ! ಕಾರಣ?

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS  

ಸಣ್ಣ ಗಣಪತಿಗಳ ವಿಸರ್ಜನಾ ಮೆರವಣೆಗೆ ಮೇಲೂ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ. ಹಬ್ಬದ ಆರಂಭದಿಂದಲೇ ನಗರದಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿದ್ರೆ, ಕ್ರಿಮಿನಲ್ ಗಳಿಗೆ ಭಯ ಇರುತ್ತೆ   

ಶಿವಮೊಗ್ಗದಲ್ಲಿ ಎಲ್ಲವೂ ಸೂಕ್ಷ್ಮ

ನಿಜ, ಮತೀಯವಾಗಿ ಅತ್ಯಂತ ಸೂಕ್ಷ್ಮ ಜಿಲ್ಲೆಯೆಂದು ಗುರುತಿಸಿಕೊಂಡಿರುವ ಶಿವಮೊಗ್ಗದಲ್ಲಿ ಯಾವ ಸಂದರ್ಭದಲ್ಲಿ ಯಾವ ಕಾರಣಕ್ಕೆ ಗಲಾಟೆಗಳು ನಡೆಯುತ್ತವೆ ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಇತಿಹಾಸದಲ್ಲಿ ನಡೆದು ಹೋದ ಘಟನಾವಳಿಗಳು ಇದಕ್ಕೆ ಸಾಕ್ಷಿಯಾಗಿದೆ. ಈ ಸಂಘರ್ಷದಲ್ಲಿ ಇದುವರೆಗೂ ಹಲವರು ಜೀವ ತೆತ್ತಿದ್ದಾರೆ. ಯಾವುದೋ ಸೇಡು,ಯಾದ್ದೋ ಮೇಲಿನ ದ್ವೇಷ  ತೀರಿಸಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳು ಸಂಘರ್ಷದ ವಾತಾವರಣದ ತಂದಿಡುವ ಅವಕಾಶಕ್ಕಾಗಿ ಕಾಯುತ್ತಿರುತ್ತವೆ. 

ಇತ್ತಿಚ್ಚಿನ ವರ್ಷಗಳಲ್ಲಿ ಪೊಲೀಸರ ಜಾಣ ನಡೆ ಇಂತಹ ಕುಕೃತ್ಯಗಳಿಗೆ ಬ್ರೇಕ್ ಹಾಕಿದೆ. ಕಳೆದ ವರ್ಷ ಹರ್ಷ ಕೊಲೆಯಾದ ಸಂದರ್ಭದಲ್ಲಿ ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಪೊಲೀಸರಿಗೆ ಬಿಗ್ ಟಾಸ್ಕ್ ಆಗಿತ್ತು. ಆದರೆ ಹಿಂದು ಸಮುದಾಯ  ಯಾವುದೇ ಅಹಿತರ ಘಟನೆಗೆ ಅವಕಾಶ ನೀಡದೆ, ಮೆರವಣಿಗೆಯನ್ನು  ಹಬ್ಬದ ರೀತಿಯಲ್ಲಿ ಕೊಂಡೊಯ್ದಿತ್ತು. 

 

ಈ ವರ್ಷ ಮತ್ತೆ ಗಣೇಶ ಹಬ್ಬ ಎದುರಾಗಿದೆ. ಮಾತ್ರವಲ್ಲದೆ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ದಿನವೇ ಈದ್ ಮಿಲಾದ್ ಮೆರವಣಿಗೆಯು ಒಂದೇ ದಿನ ಬಂದಿದೆ. ಇದು ಪೊಲೀಸರಿಗೆ ಹಿಂದಿಗಿಂತಲೂ ದೊಡ್ಡ ಸವಾಲಾಗಿದೆ. ಈಗಾಗಲೇ ಎಸ್ಪಿ ಮಿಥುನ್ ಕುಮಾರ್ ಎರಡು ಕೋಮಿನ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ಹಬ್ಬವನ್ನು ಸಂಭ್ರಮದ ರೀತಿಯಲ್ಲಿ ಆಚರಿಸಲು ಮನವಿ ಮಾಡಿದ್ದಾರೆ ಅದಕ್ಕೆ ಎರಡು ಕೋಮಿನ ಮುಖಂಡರು ಒಪ್ಪಿದ್ದಾರೆ. ಈಗಿನಿಂದಲೇ ಹಗಲು ರಾತ್ರಿ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ.

ಸಣ್ಣಪುಟ್ಟ ಗಣಪತಿ ವಿಸರ್ಜನಾ ಮೆರವಣಿಗೆಗೂ ಬೇಕು ಹೆಚ್ಚಿನ ಪೊಲೀಸ್ ಭದ್ರತೆ

ಶಿವಮೊಗ್ಗದಲ್ಲಿ ಕೇವಲ ಹಿಂದು ಮಹಾ ಸಭಾ ವಿಸರ್ಜನಾ ಮೆರವಣಿಗೆಯಲ್ಲಿ ಮಾತ್ರ ಕೋಮುಗಲಭೆಗಳಾಗಿಲ್ಲ.  ಸಣ್ಣ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲೂ ಗಲಾಟೆಗಳಾಗಿ ಶಿವಮೊಗ್ಗದಲ್ಲಿ ಸೆಕ್ಷನ್ ಕರ್ಫ್ಯೂಗಳು ಜಾರಿಯಾದ ಉದಾಹರಣೆಗಳಿವೆ.  ಸಣ್ಣ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಒಂದು ಪೊಲೀಸ್ ಒಂದು ಹೋಮ್ ಗಾರ್ಡ್ ಹಾಕಿದ್ರೂ ಕೂಡ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇದ್ದರೆ ಕ್ರಿಮಿನಲ್ ಗಳು ಕೂಡ ಏನು ಮಾಡಲು ಯೋಚಿಸಬೇಕಾಗುತ್ತದೆ.

ಹಳೆ ಶಿವಮೊಗ್ಗ ಭಾಗದಲ್ಲಿ ಪ್ರತಿಷ್ಛಾಪಿಸಲ್ಪಡುವ ಸಣ್ಣ ಗಣಪತಿಯ ವಿಸರ್ಜನೆಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ. ಗಣಪತಿ ಹಬ್ಬದ ಪ್ರಾರಂಭದ ದಿನದಿಂದಲೇ ನಗರದಲ್ಲಿ ಪೊಲೀಸರು ಜನರ ಕಣ್ಣಿಗೆ ಕಾಣುವಂತಿದ್ದರೆ, ಕ್ರಿಮಿನಲ್ ಗಳಿಗೆ ಭಯ ಇರುತ್ತೆ. ಎಂಬ ಅಬಿಪ್ರಾಯ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ಇನ್ನಷ್ಟು ಸುದ್ದಿಗಳು 


 

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು