ಸ್ಟೇಷನ್​ ಗೇಟ್​ ಬಳಿಯೇ ವಿಷ ಕುಡಿದ ಯುವತಿ! ದಾಖಲಾಯ್ತು ಸುಮುಟೋ ಕೇಸ್

Malenadu Today

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS

ಸ್ಟೇಷನ್ ಬಳಿಯಲ್ಲಿಯೇ ಯುವತಿಯೊಬ್ಬಳು ವಿಷ ಕುಡಿದ ಪ್ರಕರಣವೊಂದು 10 ದಿನಗಳ ನಂತರ ಬೆಳಕಿಗೆ ಬಂದಿದ್ದು, ಈ ಸಂಬಂಧ ಸುಮುಟೋ ಕೇಸ್ ದಾಖಲಾಗುವುದರೊಂದಿಗೆ ಬೆಳಕಿಗೆ ಬಂದಿದೆ. 

ಏನಿದು ಘಟನೆ

ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ಕಳೆದ 15 ರಂದು ಯುವತಿಯೊಬ್ಬಳು ಪೊಲೀಸರಿಗೆ ತನಗೊಬ್ಬ ಯುವಕ ಮೋಸ ಮಾಡಿದ್ದು, ಆತನನ್ನು ಕರೆದು ಮದುವೆಗೆ ಒಪ್ಪಿಸಿ ಎಂದು ದೂರುಕೊಟ್ಟಿದ್ದಳು. ಈ ದೂರಿನನ್ವಯ ಪೊಲೀಸರು ಮರುದಿನ ಪೊಲೀಸರು ಎರಡು ಕಡೆಯವರನ್ನು ವಿಚಾರಣೆಗೆ ಕರೆದಿದ್ಧಾರೆ. ಈ ಮಧ್ಯೆ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವಾಗಲೇ ಯುವತಿ ಹಾಗೂ ಆಕೆ ದೂರಿದ್ದ ಯುವಕ ಸ್ಟೇಷನ್​ನಿಂದ ಹೊರಕ್ಕೆ ನಡೆದಿದ್ಧಾರೆ, ಆನಂತರ ಕೆಲವೇ ಹೊತ್ತಿನಲ್ಲಿ ಯುವತಿ ಸ್ಟೇಷನ್ ಗೇಟ್ ಬಳಿ ವಿಷ ಕುಡಿದಿದ್ಧಾಳೆ. ತಕ್ಷಣ ಆಕೆಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಸದ್ಯ ಇದೇ ವಿಚಾರವಾಗಿ ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು ಸುಮುಟೋ ಕೇಸ್ ದಾಖಲಿಸಿಕೊಂಡಿದ್ದಾರೆ.  


ಇನ್ನಷ್ಟು ಸುದ್ದಿಗಳು


 

Share This Article