KARNATAKA NEWS/ ONLINE / Malenadu today/ Aug 26, 2023 SHIVAMOGGA NEWS
ಪ್ರತಿಸಲವೂ ಆನ್ಲೈನ್ನಲ್ಲಿ ಬರುವ ಆಮೀಷಗಳನ್ನು ನಂಬಿ ಕ್ಲಿಕ್ ಮಾಡಬೇಡಿ ಎಂದು ಹೇಳುತ್ತಲೇ ಇರುತ್ತೇವೆ. ಆದಾಗ್ಯು ನಂಬಿ ಮೋಸಹೋಗುವವರ ಸಂಖ್ಯೆ ಸೈಬರ್ ಪೊಲೀಸ್ ಸ್ಟೇಷನ್ನಲ್ಲಿ ಜಾಸ್ತಿಯಾಗುತ್ತಲೇ ಇದೆ.
7 ಲಕ್ಷ ಗುಳುಂ
10 ಸಾವಿರ ಕೊಟ್ಟು ಏಳು ಲಕ್ಷ ಹಣವನ್ನು ಆನ್ಲೈನ್ನಲ್ಲಿ ಲೂಟಿ ಮಾಡಿದ ಪ್ರಕರಣವೊಂದು ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್ (CEN Police Station Shimoga) ನಲ್ಲಿ ದಾಖಲಾಗಿದೆ. ಪ್ರಕರಣದಲ್ಲಿ ವರ್ಕ್ ಫ್ರಾಮ್ ಹೋಮ್ (Work from home scam) ಹೆಸರಿನಲ್ಲಿ ನಂಬಿದ ಗ್ರಾಹಕನಿಗೆ ಮೋಸ ಮಾಡಿದ್ದಾರೆ.
ಏನಿದು ಪ್ರಕರಣ ?
ಶಿವಮೊಗ್ಗದ ನಿವಾಸಿಯೊಬ್ಬರು ವರ್ಕ್ ಫ್ರಾಮ್ ಹೋಮ್ ಆಫರ್ಗಾಗಿ ಹುಡುಕಾಡುತ್ತಿದ್ರು, ಅದೇ ಟೈಂನಲ್ಲಿ ಅವರ ಟೆಲಿಗ್ರಾಮ್ಗೆ ಅಕೌಂಟ್ಗೆ ಮೆಸೇಜ್ ವೊಂದು ಬಂದಿದೆ. MARRIOT Bonvoy
ಕಂಪನಿಯ ಹೆಸರಿನಲ್ಲಿ ಬಂದ ಮೆಸೇಜ್ ನೋಡಿ , ನಿವಾಸಿ ಕ್ಲಿಕ್ ಮಾಡಿದ್ಧಾರೆ. ಕ್ಲಿಕ್ ಮಾಡಿ ಅದರ ಪೂರ್ವಪರ ವಿಚಾರಿಸಿ ಲಾಗಿನ್ ರಿಜಿಸ್ಟರ್ ಆಗುತ್ತಲೇ, ದೂರುದಾರರ ಅಕೌಂಟ್ಗೆ 10 ಸಾವಿರ ರೂಪಾಯಿ ಬಂದಿದೆ. ಅಲ್ಲದೆ ಒಂದರೆಡು ದಿನಗಳಲ್ಲಿ ಹೆಚ್ಚುವರಿಯಾಗಿ ಸಾವಿರ ರೂಪಾಯಿ ಲಾಭ ಕೂಡ ಅಕೌಂಟ್ಗೆ ಬಂದಿದೆ. ಇದನ್ನ ನಂಬಿದ ಗ್ರಾಹಕರು, ಅದರಲ್ಲಿ ಇನ್ವೆಸ್ಟ್ ಮಾಡತೊಡಗಿದ್ಧಾರೆ. ಹಂತಹಂತವಾಗಿ ಸರಿಸುಮಾರು ಏಳು ಲಕ್ಷದವರೆಗೂ ಇನ್ವೆಸ್ಟ್ ಮಾಡಿದ್ದಾರೆ. ಯಾವಾದ ಅಮೌಂಟ್ ದೊಡ್ಡದಾಗುತ್ತಾ ಬಂತೋ, ಆ ಕಡೆಯಿಂದ ರಿಪ್ಲೆ ಬಂದ್ ಆಗಿದೆ. ಇದನ್ನ ನೋಡಿ ಅನುಮಾನಗೊಂಡು ವಿಚಾರಿಸಿದಾಗ ತಮಗೆ ಮೋಸವಾಗಿದೆ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ ತಕ್ಷಣವೇ ಸೈಬರ್ ಪೊಲೀಸರಿಗೆ ನೊಂದ ಗ್ರಾಹಕರು ದೂರು ನೀಡಿದ್ದಾರೆ.
ಇಂತಹ ಮೋಸಗಳಿಗೆ ಜನರು ಬಲಿಯಾಗದಿರಲಿ ಎಂಬ ಕಾರಣಕ್ಕೇನೇ ಶಿವಮೊಗ್ಗ ಪೊಲೀಸರು ಆಗಾಗ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುತ್ತಲೇ ಇದ್ದಾರೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆಷ್ಟೆ ಶಿವಮೊಗ್ಗದ @112shivamogga ಖಾತೆಯಲ್ಲಿ ಸೋಶಿಯಲ್ ಮೀಡಿಯಾಗಳನ್ನು ಹೇಗೆ ನಿರ್ವಹಿಸಬೇಕು ಎಂದು ಪೋಸ್ಟ್ ವೊಂದನ್ನ ಹಾಕಿದ್ದಾರೆ.
— 112shivamogga (@112shivamogga) August 25, 2023
ಇನ್ನಷ್ಟು ಸುದ್ದಿಗಳು
ಗಾಂಧೀಜಿ ಪ್ರತಿಮೆ ಧ್ವಂಸ! ಆರೋಪಿಗಳ ಪತ್ತೆಗೆ ಮೂರು ಟೀಂ! ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?ಉದ್ಯೋಗಕ್ಕಾಗಿ ಹುಡಕಾಡ್ತಿದ್ದೀರಾ?
ಇಲ್ಲಿದೆ ಅವಕಾಶ! ವಿದ್ಯಾರ್ಹತೆ ಎಸ್ಎಸ್ಎಲ್ಸಿ-ಪದವಿ! ಪೂರ್ತಿ ವಿವರ ಇಲ್ಲಿದೆ
ಬಾಂಬ್ ಇನ್ ದಿ ಸಿಟಿ ಗೇಮ್ ಆಡ್ತಿರಾ! ಮಹಿಳೆಯರಿಗೆ ಮಾತ್ರ ಅವಕಾಶ! ಪುರುಷರಿಗೂ ಇದೆ