ಅಧಿಕಾರಿಗಳಿಗೆ ಆರಗ ಶಾಕ್! ಹುಲಿಕಲ್​ನಲ್ಲಿ ಅಧಿಕಾರಿಯ ಮಾನವೀಯತೆ! ಆಶ್ರಯ ಮನೆ ಬದ್ಲು ಚರ್ಚ್​ ಕಟ್ಟಿದ್ರು! ಮೂಡಿಗೆರೆಯಲ್ಲಿ ಮೂವರು ನೀರು ಪಾಲು!

Malenadu Today

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS 

ಮಾನವೀಯತೆ ಮರೆದ ಅರಣ್ಯ ಇಲಾಖೆ. 

ಕರಾವಳಿ ಸಂಪರ್ಕದ ಹುಲಿಕಲ್ ಘಾಟ್ ರಸ್ತೆಯಲ್ಲಿ ಸಂಭವಿಸಿದ ಲಾರಿ ಅಪಘಾತದಲ್ಲಿ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡು ಪಜ್ಞೆ ತಪ್ಪಿ ಬಿದ್ದಿದ್ದ. ಈ ವೇಳೇ ಇದನ್ನ ಗಮನಿಸಿದ  ಸಿದ್ದಾಪುರ ವನ್ಯಜೀವಿ ವಲಯದ ಅರಣ್ಯಾಧಿಕಾರಿ ತಮ್ಮ ಇಲಾಖಾ ವಾಹನದಲ್ಲಿ ಗಾಯಾಳುವನ್ನ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಚಾಲಕನ ಚೇತರಿಸಿಕೊಳ್ಳುತ್ತಿದ್ದು, ಇಲಾಖಾ ಅಧಿಕಾರಿಗಳ ಮಾನವೀಯತೆಗೆ ಕುಟುಂಬ ಧನ್ಯವಾದ ತಿಳಿಸಿದೆ. 

ಸರ್ವೆ ಅಧಿಕಾರಿಗಳಿಗೆ ಆರಗಜ್ಞಾನೇಂದ್ರ ಶಾಕ್​ 

ಕೆಲದಿನಗಳಿಂದ ಸರ್ಕಾರಿ ಕಚೇರಿಗಳಿಗೆ ದಿಢೀರ್​ ಭೇಟಿ ನೀಡುತ್ತಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರವರು ನಿನ್ನೆ ಶನಿವಾರ ಸಂಜೆ ಸರ್ವೇ ಇಲಾಖೆಗೆ ಭೇಟಿ ನೀಡಿದರು. ಅಲ್ಲಿ ಖುದ್ಧಾಗಿ ರೈತರು ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ವೇಳೆ ಅಕ್ರಮ ಭೂ ಮಂಜೂರಾತಿಗೆ ಸರ್ವೇ ಕಚೇರಿಯಲ್ಲಿ ಸಹಕರಿಸಿದ್ದಾರೆ ಎನ್ನುವ ದೂರು ಕೇಳಿಬಂದಿತು. ತಕ್ಷಣವೇ ಸಿಟ್ಟಾದ ಶಾಸಕರು ಸರ್ವೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Malenadu Today

ಮನೆ ಕಟ್ಟಿ ಎಂದರೆ, ಚರ್ಚ್​ ಕಟ್ಟಿದ್ರು

ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ನೀಡಿದ ಜಾಗದಲ್ಲಿ ಅಕ್ರಮವಾಗಿ ಚರ್ಚ್​ ನಿಮಿಸಿದ ಬಗ್ಗೆ ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ ಗ್ರಾಮದಲ್ಲಿ ದೂರು ಕೇಳಿಬಂದಿದೆ. ಸ್ಥಳೀಯರೊಬ್ಬರ ಆಶ್ರಯ ನಿವೇಶನವನ್ನು ಖರೀದಿ ಮಾಡಿ ಚರ್ಚ್​ ನಿರ್ಮಿಸಲಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ತಳೀಯರು ಗ್ರಾಮಪಂಚಾಯಿತಿಗೆ ದೂರು ನೀಡಿದ್ದಾರೆ. 

Malenadu Today

ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲು

ಚಿಕ್ಕಮಗಳೂರಿನ ಹ್ಯಾಂಡ್ ಪೋಸ್ಟ್​ ಬಳಿಯಲ್ಲಿ ಕೆರೆಯ ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ಧಾರೆ.  ಒಟ್ಟು ಮೂವರು ಬಾಲಕರು ಮೀನು ಹಿಡಿಯಲು ತೆರಳಿದ್ರು. ನೀರಿಗೆ ಹೇಗೆ ಬಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಒಬ್ಬ ಬಾಲಕ ನೀರಿನಲ್ಲಿ ಈಜಿ ದಡ ಸೇರಿದ್ಧಾನೆ. ಇನ್ನಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.  

Malenadu Today

ನೀರಿನ ಗುಂಡಿಗೆ ಬಿದ್ದು ಬಾಲಕ ಸಾವು

ಇನ್ನೊಂದೆಡೆ ಮೂಡಿಗೆರೆ ತಾಲ್ಲೂಕಿನ ಜನ್ನಾಪುರದಲ್ಲಿ ಆಟವಾಡ್ತಿದ್ದ ಬಾಲಕ  ಇಂಗು ಗುಂಡಿಗೆ ಬಿದ್ದು   ಮೃತಪಟ್ಟಿದ್ಧಾನೆ.  ಅಶರ್ ಡಿ ಗುನ್ನಾ (8) ಮೃತ ಬಾಲಕ.  ಶಾಲೆ ನಿರ್ಮಾಣಕ್ಕೆ ನೀರಿಗಾಗಿ ಇಂಗು ಗುಂಡಿ ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.   

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article