KARNATAKA NEWS/ ONLINE / Malenadu today/ Aug 6, 2023 SHIVAMOGGA NEWS
ಬಸ್ ಒಂದು ನಿಮಿಷ ಲೇಟ್ ಆಗಿದ್ದಕ್ಕೆ ಫೈಟ್!
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬಸ್ ಸ್ಟ್ಯಾಂಡ್ ಬಳಿಯಲ್ಲಿ ಬಸ್ ಒಂದು ನಿಮಿಷ ಲೇಟಾಗಿ ಬಂದ ವಿಚಾರಕ್ಕೆ ಬಸ್ ಏಜೆಂಟ್ ಹಾಗೂ ಡ್ರೈವರ್ ನಡುವೆ ಜಗಳವಾಗಿದ್ದು, ಈ ವಿಚಾರ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಆಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಒಂದನೇ ತಾರೀಖು ಈ ಘಟನೆ ನಡೆದಿದ್ದು, ಖಾಸಗಿ ಬಸ್ವೊಂದು ಕೋಣಂದೂರು ಬಸ್ ಸ್ಟ್ಯಾಂಡ್ಗೆ ಒಂದು ನಿಮಿಷ ತಡವಾಗಿ ಬಂತು ಎಂಬ ಕಾರಣಕ್ಕೆ ಇನ್ನೊಂದು ಬಸ್ನ ಎಜೆಂಟ್ ಹಾಗೂ ಡ್ರೈವರ್ ಜಗಳವಾಡಿದ್ಧಾರೆ. ಇದೇ ವಿಚಾರದಲ್ಲಿ ಡ್ರೈವರ್ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸರು ವಿಚಾರಣೆ ನಡೆಸ್ತಿದ್ಧಾರೆ.
ಬಸ್ ಡ್ರೈವರ್ ಕಂಡೆಕ್ಟರ್ ನಡುವೆ ಹಲ್ಲೆ!
ಇನ್ನೂ ಇತ್ತ ಲಾಂಗ್ ಡ್ರೈವಿಂಗ್ನಲ್ಲಿ ಬಸ್ ಓಡಿಸುವ ವಿಚಾರಕ್ಕೆ ಬಸ್ ಡ್ರೈವರ್ ಹಾಗೂ ಕಂಡಕ್ಟೆರ್ ನಡುವೆ ಜಗಳವಾಗಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಡಿಪೋದಲ್ಲಿ ಶಿವಮೊಗ್ಗದಿಂದ ಕೊಯಮತ್ತೂರಿಗೆ ಹೋಗುವ ಬಸ್ನ ಸಿಬ್ಬಂದಿ ನಡುವೆ ಜಗಳವಾಗಿದೆ. ಲಾಂಗ್ ರೂಟ್ ಗಾಡಿಗಳಿಗೆ ಡ್ರೈವರ್ ಜೊತೆ ಡ್ರೈವರ್ ಕಂ ಕಂಡೆಕ್ಟರ್ ಆದವರನ್ನ ಕಳುಹಿಸಲಾಗುತ್ತದೆ. ಇದೆ ರೀತಿಯಲ್ಲಿ ಕೊಯಮತ್ತೂರ್ ಬಸ್ಗೆ ವ್ಯವಸ್ಥೆ ಮಾಡಲಾಗಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಡ್ರೈವರ್ ಮೇಲೆ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನಷ್ಟು ಸುದ್ದಿಗಳು
ತಾಯಿ ಜಗನ್ಮಾತೆ ಈ ಸುಂದರನ ಸರ್ವಾಂಗ ಸುಂದರನಾಗಿ ಮಾಡುವಳೇ!? ವೈರಲ್ ಆಯ್ತು ಹರಕೆ!
ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?
