ಶಿವಮೊಗ್ಗದಲ್ಲಿ ಹೆಚ್ಚುತ್ತಿದೆ ನಾಪತ್ತೆ ಪ್ರಕರಣ! ಮಿಸ್ಸಿಂಗ್​ ಕೇಸ್​ಗಳಿಗೆ ಪುಂಡರ ಹಾವಳಿಯು ಕಾರಣನಾ? ಸೈಟ್ ಹಾಕುವ ಅಡ್ಡಗಳಿಗೆ ಬೀಳಬೇಕಿದೆ ಬ್ರೇಕ್​!

KARNATAKA NEWS/ ONLINE / Malenadu today/ May 29, 2023 SHIVAMOGGA NEWS

ಶಿವಮೊಗ್ಗ/ ಜಿಲ್ಲೆಯಲ್ಲಿ ಬೇಸಿಗೆ ರಜೆ ಸಂದರ್ಭದಲ್ಲಿ ಯುವಕ ಯುವತಿಯರು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲಿಯು ವಿಶೇಷವಾಗಿ ಅಪ್ರಾಪ್ತ ಯುವತಿಯರು ನಾಪತ್ತೆಯಾಗುತ್ತಿದ್ದು, ಅವರ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳು ವಿಶೇಷ ಆಸಕ್ತಿ ವಹಿಸುವ ಅಗತ್ಯವಿದೆ.  

ವಾರಕ್ಕೆ ನಾಲ್ಕು ಕೇಸ್ 

ಕಳೆದೊಂದು ವಾರದಲ್ಲಿ ಜಿಲ್ಲೆಯ ವಿವಿಧ ಸ್ಟೇಷನ್​ಗಳಲ್ಲಿ ನಾಲ್ಕಕ್ಕೂ ಅಧಿಕ ಮಿಸ್ಸಿಂಗ್ ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತರ ನಾಪತ್ತೆ ಪ್ರಕರಣದಲ್ಲಿ ಎಷ್ಟು ಗಂಭೀರತೆಯನ್ನು ವಹಿಸಬೇಕು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತಿದೆ. ಆದಾಗ್ಯು ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರವುದು ಕುಟುಂಬಸ್ಥರ ನೋವಿಗೆ ಕಾರಣವಾಗುತ್ತಿದೆ. 

ಅಪ್ತಾಪ್ತ ಪ್ರೇಮ್​ ಕಹಾನಿ! 

ಕಂಪ್ಯೂಟರ್ ಕ್ಲಾಸ್​ಗೆ ಹೋಗುತ್ತೇನೆ ಎಂದು ಹೋಗಿದ್ದ ಯುವತಿ ನಾಪತ್ತೆ! ಅಂಗಡಿ ಹೋಗುತ್ತೇನೆ ಎಂದು ಹೋದವಳು ಕಾಣೆ! ಸ್ನೇಹಿತೆಯೆ ಮನೆಗೆ ಹೋದವಳು, ಪೇಟೆಗೆ ಹೋಗಿ ಬರುತ್ತೇನೆ ಎಂದು ಹೋದವಳು! ಮೊಬೈಲ್​ನಲ್ಲಿ ಮಾತನಾಡುತ್ತಾ ಹೋದವಳು ಹೀಗೇ ಹಲವು ಪ್ರಕರಣಗಳು ಅಪ್ತಾಪ್ತರು ನಾಪತ್ತೆಯಾಗುತ್ತಿದ್ಧಾರೆ. ಈ ಪೈಕಿ ಅಪ್ರಾಪ್ತ ಪ್ರೇಮ್​ ಕಹಾನಿಗಳು ಹೆಚ್ಚಿರುತ್ತದೆ. 

ಬೇಸಿಗೆರಜೆಯಲ್ಲಿಯೇ ಜಾಸ್ತಿ ಪ್ರಕರಣ

ಶಾಲೆ, ಕಾಲೇಜುಗಳು ಮುಗಿದು ರಿಸಲ್ಟ್​ ಬರುವುದನ್ನೆ ಕಾಯುವ ಮನಸ್ಸುಗಳು ಇದ್ದಕ್ಕಿದ್ದ ಹಾಗೆ ಮಿಸ್ಸಿಂಗ್ ಆಗಿರುತ್ತವೆ. ಎಸ್​ಎಸ್​ಎಲ್​​ಸಿ, ಪಿಯುಸಿ ರಿಸಲ್ಟ್ ಹೊರಬಿದ್ದ ನಂತರ, ಇಂತಹ ಘಟನೆಗಳು ಜಾಸ್ತಿಯಾಗಿ ಕೇಳಿಬರುತ್ತವೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು. ವಿಶೇಷ ಅಂದತೆ, ಇಂತಹ ಅಪ್ರಾಪ್ತ ಪ್ರೇಮ್​  ಕಹಾನಿಗಳನ್ನ ಪೊಲೀಸರು ಬಹುಬೇಗ ಟ್ರೇಸ್ ಮಾಡುತ್ತಾರೆ. ಆದರೆ ಈ ಪೈಕಿ ಬಹುತೇಕ ಪ್ರಕರಣಗಳಲ್ಲಿ ವಂಚನೆ ಹೆಚ್ಚಿರುತ್ತದೆ. ಈ ಬಗ್ಗೆ ಹದಿಹರೆಯದವರು ಎಚ್ಚರವಹಿಸಬೇಕಷ್ಟೆ ಅಲ್ಲದೆ, ಪೋಷಕರು ಸಹ ಚೂರು ಜಾಸ್ತಿಯೇ ಜಾಗ್ರತೆ ವಹಿಸಬೇಕು! 

ಎಲ್ಲವೂ ಲವ್ವಿ ಡವ್ವಿಯಲ್ಲ!

ಇನ್ನೂ ಪ್ರತಿಯೊಂದು ಪ್ರಕರಣವನ್ನು ಪ್ರೀತಿ ಪ್ರೇಮ ಪ್ರಣಯ ಎಂದೇ ನೋಡುವುದು ಕಾಮಾಲೆ ಕಣ್ಣಾಗುತ್ತದೆ. ಜಿಲ್ಲೆಯಲ್ಲಿ ಕೆಲವೊಂದು ಮಿಸ್ಸಿಂಗ್​ಗಳು ಬೇರೆಯದ್ದೇ ರೂಪ ಪಡೆದುಕೊಂಡಿದ್ದಿದ್ದೆ. ಹ್ಯೂಮನ್​ ಟ್ರಾಫಿಕಿಂಗ್​ ಬಗ್ಗೆ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ತನ್ನ ಡೆತ್​ನೋಟ್​ನಲ್ಲಿ ಅಲವತ್ತುಕೊಂಡಿದ್ದ. ಆದರೆ ಪ್ರಭಾವಳಿಯಲ್ಲಿ ಆ ಪ್ರಕರಣ ಎಷ್ಟರಮಟ್ಟಿಗೆ ನ್ಯಾಯ ಪಡೆದುಕೊಂಡಿತ್ತು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ 

ಹೆಚ್ಚಿದ ಪುಂಡರ ಹಾವಳಿ! 

ವಿಶೇಷವಾಗಿ ಶಿವಮೊಗ್ಗ ಸಿಟಿಯಲ್ಲಿ ವಿವಿಧ ಆಸ್ಪತ್ರೆಗಳ ಬಳಿಯಲ್ಲಿ ಪುಂಡರ ಗುಂಪುಗಳು ಹೊಂಚು ಹಾಕಿ ಕಾಯುತ್ತಿರುತ್ತವೆ. ದಿನಕ್ಕೊಂದು ಬೈಕ್​ನಲ್ಲಿ ಬರುವ ಯುವಕರು , ಆಯಾ ಆಸ್ಪತ್ರೆಗಳಿಗೆ ಬರುವ ವಿದ್ಯಾರ್ಥಿನಿಯರನ್ನ ಟಾರ್ಗೆಟ್ ಮಾಡಿಕೊಂಡು ನಿಂತಿರುತ್ತಾರೆ. ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳಿಸಿಕೊಳ್ಳುವ ಗ್ಯಾಂಗ್​ಗಳು ಇವಾಗಿದ್ದು, ಅವರ ಒಳ ಉದ್ದೇಶಗಳು ಏನೂ ಸಹ ಆಗಿರುವ ಅಪಾಯ ಇರುತ್ತದೆ.

ಇನ್ನೂ ಬಸ್​ಸ್ಟ್ಯಾಂಡ್​ಗಳಲ್ಲಿ ವಿದ್ಯಾರ್ಥಿನಿಯರು ಬಂದು ಹೋಗುವ ಬಸ್​ಗಳನ್ನ ಕಾಯುವ ಗುಂಪುಗಳು ಸಹ ಅಪಾಯಕಾರಿ. ಇಂತಹ ಪುಂಡರಿಂದಲೇ ಹಿಂದೊಮ್ಮೆ ಮಥುರಾ ಪ್ಯಾರಡೈಸ್​ ಬಳಿಯಲ್ಲಿ ಸ್ಟ್ರೀಟ್​ ಪೈಟ್​ ನಡೆದಿತ್ತು.

ಇತ್ತ ಪ್ರತಿಷ್ಟಿತ ಕಾಲೇಜುಗಳ ಬಳಿಯಲ್ಲಿ ಡ್ರಾಪ್​ ಕೊಡಲು ಚಿತ್ರವಿಚಿತ್ರ ಬೈಕ್​ಗಳಲ್ಲಿ ಬಂದು ನಿಲ್ಲುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹೀಗೆ ಯುವತಿಯರನ್ನೆ ಟಾರ್ಗೆಟ್ ಮಾಡಿಕೊಂಡು ದಿನಕಳೆಯುವ ಪುಂಡರಿಂದಲೇ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ.  ಇಂತಹ ಸ್ಥಳಗಳಿಗೆ ಬೀಟ್ ಪೊಲೀಸರು ಸರಿಯಾದ ಸಮಯದಲ್ಲಿ ಎಂಟ್ರಿ ಕೊಡುವುದರಿಂದ ಇಂತಹ ಪುಂಡರ ಹಾವಳಿ ತಪ್ಪಿಸಬಹುದು!  ಮುಖ್ಯವಾಗಿ ಆಸ್ಪತ್ರೆಗಳ ಬಳಿ ಇರುವ , ಸರ್ಕಲ್​ಗಳು, ಕನ್ಸರ್​ವೆನ್ಸಿ, ಬಸ್​ಸ್ಟ್ಯಾಂಡ್​ಗಳ ಬಳಿ ಗುಂಪು ಸೇರುವ ಪ್ರದೇಶಗಳು,  ಹೆಚ್ಚಿನ ಗಮನ ಪೊಲೀಸರು ನೀಡಿದರೇ ಉತ್ತಮ! 

ಪೂರ್ತಿ ಸುದ್ದಿ: ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!

 

Leave a Comment