ಹೊಸನಗರದಲ್ಲಿ ಪಿಎಲ್​ಡಿ ಬ್ಯಾಂಕ್​ನಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕಬಾಬ್ ಗಣೇಶ್! ಹಳೆಯ ಕಳ್ಳತನದ ಕೇಸ್​ಗಳ ಬಗ್ಗೆ ಪೊಲೀಸರಿಗೆ ಶುರುವಾಯ್ತು ಅನುಮಾನ!

Malenadu Today

ಶಿವಮೊಗ್ಗ ಜಿಲ್ಲೆ ಹೊಸನಗರ( hosanagara) ತಾಲ್ಲೂಕಿನ ಪಟ್ಟಣ ಭಾಗದಲ್ಲಿ ಆಗಾಗ ಕಳ್ಳತನದ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದರ ನಡುವೆ ಇವತ್ತು ಬೆಳಗ್ಗಿನ ಜಾವ ಚೌಡಮ್ಮ ರಸ್ತೆಯ ಬಳಿಯಲ್ಲಿ ಪಿಎಲ್​ಡಿ ಬ್ಯಾಂಕ್​ನಲ್ಲಿ (pld bank) ಕಳ್ಳತನಕ್ಕೆ ಯತ್ನ ನಡೆಯುತ್ತಿತ್ತು.  ಸ್ಥಳಿಯೊರೊಬ್ಬರ ಸಮಯಪ್ರಜ್ಞೆಯಿಂದಾಗಿ ಕಳ್ಳ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ಧಾನೆ. 

JDS: ಪ್ರಧಾನಿ ನರೇಂದ್ರ ಮೋದಿ ಆಗಮನದ ವೇಳೆ VISL ಗಾಗಿ ಉಗ್ರ ಹೋರಾಟ! ಜೆಡಿಎಸ್​ ವರಿಷ್ಟ ಹೆಚ್​​.ಡಿ. ಕುಮಾರ ಸ್ವಾಮಿ ಕೊಟ್ಟ ಕರೆಯೇನು!?

ನಡೆದಿದ್ದೇನು? 

ಹೊಸನಗರ ಪಿಎಲ್​ಡಿ ಬ್ಯಾಂಕ್​ನ ಭೀಗ ಒಡೆದು ವ್ಯಕ್ತಿಯೊಬ್ಬ ಒಳಕ್ಕೆ ನುಗ್ಗಿದ್ದ, ಈ ವೇಳೇ ಅಲ್ಲಿಯೇ ಇದ್ದ ವಾಚ್​​ಮನ್​ ಒಬ್ಬರು ಏನೋ ಸದ್ದಾಗಿದ್ದನ್ನ ಗಮನಿಸಿದ್ದಾರೆ. ಅಲ್ಲದೆ ಅನುಮಾನಗೊಂಡು ಪರಿಶೀಲಿಸಿದ್ಧಾರೆ. ಈ ವೇಳೆ ಭೀಗ ಮುರಿದು ಬ್ಯಾಂಕ್​ನ ಒಳಕ್ಕೆ ಯಾರೋ ಹೋಗಿದ್ದು ಗೊತ್ತಾಗಿದೆ. ತಕ್ಷಣ ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರಿಗೆ ಕರೆ ಮಾಡಿದ್ದ ಅವರು, ಕಳ್ಳನನ್ನು ಸ್ಥಳದಲ್ಲಿಯೇ ಹಿಡಿದಿದ್ದಾರೆ 

Malenadu Today

ಸಿಕ್ಕಿಬಿದ್ದ ಕಬಾಬ್ ಗಣೇಶ್

ಇನ್ನೂ ಸ್ಥಳೀಯರು ಕಳ್ಳನನ್ನು ಹಿಡಿದ ಬೆನ್ನಲ್ಲೆ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ಧಾರೆ. ಬೆಳಗಿನ ಜಾವ ನಡೆದ ಈ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಆರೋಪಿ ಕೂಡ ಹೊಸನಗರದವನೇ ಆಗಿದ್ದ. ಸ್ಥಳೀಯವಾಗಿ ಕಬಾಬ್​ ಅಂಗಡಿ ನಡೆಸ್ತಿದ್ದ ಗಣೇಶ್​ ಎಂಬಾತನೇ ಕೃತ್ಯವೆಸಗಿದ್ದ. ಈ ಮೊದಲು ಕಬಾಬ್ ಅಂಗಡಿ ನಡೆಸ್ತಿದ್ದ ಗಣೇಶ ಬಳಿಕ ಬೆಂಗಳೂರಿಗೆ ಹೋಗಿದ್ದನಂತೆ. ಆತನನ್ನ ಕಬಾಬ್ ಗಣೇಶ ಎಂದೇ ಕರೆಯಲಾಗುತ್ತಿತ್ತಂತೆ. ಈ ಮಧ್ಯೆ ಬೆಂಗಳೂರಿನಿಂದ ವಾಪಸ್ ಬಂದಿದ್ದ ಈತ, ಪಿಎಲ್​ಡಿ ಬ್ಯಾಂಕ್​ನಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

SHIVAMOGGA AIRPORT ನಲ್ಲಿ ಉದ್ಯೋಗವಕಾಶದ ಬಗ್ಗೆ ಸಂಸದ ಬಿ.ವೈ ರಾಘವೇಂದ್ರರವರು ನೀಡಿದ ಸ್ಪಷ್ಟನೆ ಏನು!? ಇಲ್ಲಿದೆ ವಿವರ

ಹಿಂದಿನ ಕಳ್ಳತನಗಳ ಬಗ್ಗೆ ತನಿಖೆ

ಇನ್ನೂ ಹೊಸನಗರದಲ್ಲಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಸದ್ಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಹಿಂದಿನ ಕಳ್ಳತನ ಪ್ರಕರಣಗಳಿಗೂ ಸದ್ಯ ವಶಕ್ಕೆ ಪಡೆಯಲಾಗಿರುವ ಆರೋಪಿಗೂ ಏನಾದರೂ ಸಂಬಂಧವಿದೆಯೇ ಎಂದು ವಿಚಾರಣೆ ನಡೆಸ್ತಿದ್ಧಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article