Home Minister Araga Jnanendra : ತೀರ್ಥಹಳ್ಳಿಯ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಗಲಾಟೆ ಪ್ರಕರಣ ಸಂಬಂಧ ನಿನ್ನೆ ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಯಾರೋ ಬಾರ್ ನಲ್ಲಿ ಕುಳಿತು ಹೊಡೆದಾಟ ಮಾಡಿಕೊಂಡಿದಕ್ಕೆ ರಾಜಕೀಯ ಬಣ್ಣ ಕೊಟ್ಟರೆ, ಇದನ್ನ ಎಲ್ಲಿಗೆ ತೆಗೆದು ಕೊಂಡು ಹೋಗುವುದು ಹೇಳಿ ಎಂದು ವ್ಯಂಗ್ಯವಾಡಿದ್ಧಾರೆ. ಈ ರೀತಿ ರಾಜಕಾರಣ ಮಾಡಿದರೆ ಹೇಸಿಗೆ ಎನಿಸುತ್ತದೆ ಎಂದ ಆರಗ ಜ್ಞಾನೇಂದ್ರ ಯಾರೋ ಹೊಡ್ಕೊಂಡಿದ್ದಾರೆ.
*ಯುವತಿ ಮೇಲೆ ಲೈಂಗಿಕ ದೌರ್ಜನ್ಯ! ತೀರ್ಥಹಳ್ಳಿ ಯುವಕನಿಗೆ 10 ವರ್ಷ ಶಿಕ್ಷೆ ,57 ಸಾವಿರ ದಂಡ*
ಎಣ್ಣೇ ಏಟಿನಲ್ಲಿ ಹೊಡೆದಾಡಿದವರಿಗೆ ಪಕ್ಷ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ನವರು, ಬಿಜೆಪಿಯವರು ಯಾವ ಪಕ್ಷದವರು ಅಲ್ಲದಿರುವುವವರು ಸಹ ಇದ್ದಾರೆ, ಹೊಡ್ಕೊತ್ತಾರೆ. ಎಣ್ಣೆ ಮಂಪರ್ನಲ್ಲಿ ಹೊಡ್ಕೊಳ್ಳೋರಿಗೆ ಪಕ್ಷ, ಜಾತಿ, ಧರ್ಮ ಎಲ್ಲಿ ಬರುತ್ತದೆ. ಇದನ್ನೆಲ್ಲಾ ರಾತ್ರಿ ಹಗಲು ಅಲ್ಲಿ ಅಡ್ಡಮಲಗಿ ಪ್ರತಿಭಟಿಸೋದು ಬಹಳ ಚೀಪ್ ಮಟ್ಟಕ್ಕೆ ಬರುತ್ತದೆ ಎಂದು ವ್ಯಂಗ್ಯವಾಡಿದರು. ಇತ್ತೀಚೆಗೆ ಮಾಳೂರಿನಲ್ಲಿ ಮರಳು ಕದ್ದು ಕೊಂಡು ಹೋಗುತ್ತಿರುವವರ ಪರವಾಗಿ ಪ್ರತಿಭಟನೆ ನಡೆಸಿದರು. ಇದನ್ನೆಲ್ಲಾ ನೋಡಿದರೆ ಅವರು ಯಾವ ಮಟ್ಟದ್ದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ ಅದರ ಬಗ್ಗೆ ಏನು ಹೇಳೋದಕ್ಕೆ ಆಗಲ್ಲ ಎಂದು ತಿಳಿಸಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
