ತುಂಡಾಗಿ ಬಿದ್ದಿತ್ತು ಕರೆಂಟ್ ಲೈನ್​ | ಪತ್ನಿಯನ್ನ ರಕ್ಷಿಸುವ ವೇಳೆ, ವಿದ್ಯುತ್​ ಸ್ಪರ್ಶಿಸಿ ಪತಿ ಸಾವು/ ಹೊಸನಗರದಲ್ಲೊಂದು ದುರಂತ ಘಟನೆ

Malenadu Today

ರಿಪ್ಪನ್​ ಪೇಟೆ  ವರದಿ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಲ್ಲಿನ ಚಿಕ್ಕಜೇನಿ ಸಮೀಪದ ನಂಜವಳ್ಳಿಯಲ್ಲಿ ವಿದ್ಯುತ್ ಅವಘಡವೊಂದು ಸಂಭವಿಸಿದೆ. ಘಟನೆಯಲ್ಲಿ ವಿದ್ಯುತ್​ ಶಾಕ್​ನಿಂದ ಓರ್ವರು ಮೃತಪಟ್ಟಿದ್ದಾರೆ. ಇವತ್ತು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. 

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಒಡ್ಡಿನಬೈಲು ನಿವಾಸಿ ಶೇಷಗಿರಿಯವರು ಘಟನೆಯಲ್ಲಿ ಮೃತರಾಗಿದ್ದಾರೆ. ಇವರು ನಂಜವಳ್ಳಿಯಲ್ಲಿ ವಾಸಮಾಡುತ್ತಿದ್ದರು. ಇವತ್ತು ಬೆಳಗ್ಗೆ ಶೇಷಗಿರಿಯವರ ಪತ್ನಿ ಹೂವು ಕೀಳಲು ತೆರಳಿದ್ದರು. ಈ ವೇಳೆ ಅವರಿಗೆ ಕರೆಂಟ್ ಹೊಡೆದಂತಾಗಿ ಕೂಗಿಕೊಂಡಿದ್ದಾರೆ. ಅವರನ್ನು ರಕ್ಷಿಸುವ ಭರದಲ್ಲಿ ಬಂದ ಶೇಷಗಿರಿಯವರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ಧಾರೆ. ಇದರಿಂದಾಗಿ ಕರೆಂಟ್ ಶಾಕ್ ಹೊಡೆದು ಅಲ್ಲಿಯೇ ಸಾವನ್ನಪ್ಪಿದ್ದಾರೆ. 

ಇದನ್ನು ಸಹ ಓದಿ : ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು

ಇವತ್ತು ಬೆಳಗ್ಗೆ ಶೇಷಗಿರಿಯವರ ಮನೆ ಮುಂದೆ ಹೋಗಿದ್ದ ಎಲ್​ಟಿ ಲೈನ್​ ವೊಂದು ತುಂಡಾಗಿ ಕೆಳಕ್ಕೆ ಬಿದ್ದಿತ್ತು. ಇದನ್ನು ನೋಡಿದ ಶೇಷಗಿರಿಯವರು ಬೆಳಗ್ಗೆಯೇ ಮೆಸ್ಕಾಂ ಸಿಬ್ಬಂದಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಸಿಬ್ಬಂದಿಯವರು ಸ್ಥಳಕ್ಕೆ ಬಂದಿರಲಿಲ್ಲ. ಇದರ ನಡುವೆ, ಶೇಷಗಿರಿಯವರ ಪತ್ನಿಯು ಹೂವು ಕೀಳಲು ಬಂದಿದ್ಧಾರೆ. ಆಗ ಅವರಿಗೆ ವಿದ್ಯುತ್ ಸ್ಪರ್ಶವಾಗಿದೆ. ಅವರು ಕೂಗಿಕೊಂಡಿದ್ದನ್ನ ನೋಡಿದ ಶೇಷಗಿರಿಯವರು ಮನೆಯೊಳಗಿನಿಂದ ಬಂದು ಪತ್ನಿಯ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ, ಅವರು ಗೊತ್ತಾಗದೆ ವಿದ್ಯುತ್ ತಂತಿಯನ್ನು ತುಳಿದಿದ್ಧಾರೆ. 

ಇದನ್ನು ಸಹ ಓದಿ : ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಇವತ್ತು ಮಳೆ ಇನ್ನೂಜೋರು

ಚಪ್ಪಲಿ ಹಾಕದೇ ಬರಿಗಾಲಿನಲ್ಲಿ ವಿದ್ಯುತ್ ತಂತಿ ಮೆಟ್ಟಿದ್ದರಿಂದ ವಿದ್ಯುತ್ ಪ್ರವಹಿಸಿ ಶೇಷಗಿರಿಯವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಇವರ ಸಾವಿಗೆ ಮೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಸ್ತಳೀಯರು ಮಾಡುತ್ತಿದ್ದಾರೆ. 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link

Share This Article