KARNATAKA NEWS/ ONLINE / Malenadu today/ Apr 27, 2023 GOOGLE NEWS
ತೀರ್ಥಹಳ್ಳಿ/ಶಿವಮೊಗ್ಗ/ ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಆಕೆ ಅಸ್ವಸ್ಥಗೊಂಡಾಗ ಎತ್ತಿಕೊಂಡು ಬಂದು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮಲಗಿಸಿ ಗಂಡ ಎಸ್ಕೇಪ್ ಆಗಿದ್ದಾನೆ.
ನಿನ್ನೆ ಈ ಘಟನೆ ನಡೆದಿದೆ. ಸದ್ಯ ಹೆಂಡ್ತಿಗೆ ಹೊಡೆದ ಗಂಡನನ್ನ ತೀರ್ಥಹಳ್ಳಿ ಪೊಲೀಸರು ಕರೆದುಕೊಂಡು ಬಂದು ಸ್ಟೇಷನ್ನಲ್ಲಿ ಕೂರಿಸಿದ್ದಾರೆ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ನಡೆದಿದ್ದೇನು?
ಮುರುಳಿ ಎಂಬಾತ ಬೆಂಗಳೂರು ಮೂಲದವನು.ತೀರ್ಥಹಳ್ಳಿಯ ಮೇಗರವಳ್ಳಿ ಹತ್ರ ಸಿಗುವ ಕೈನಲ್ಲಿ ಎಂಬಲ್ಲಿ ವಾಸವಿದ್ದ. ಇಲ್ಲೆ ಮದುವೆಯಾಗಿ ಕೆಲಸ ಮಾಡಿಕೊಂಡಿದ್ದ ಈತ, ನಿನ್ನೆ ತನ್ನ ಹೆಂಡತಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ಧಾನೆ.
ಪರಿಣಾಮ ಈತನ ಪತ್ನಿ ಅಸ್ವಸ್ಥಗೊಂಡಿದ್ಧಾಳೆ. ಭಯ ಬಿದ್ದ ಗಂಡ, ಆಕೆಯನ್ನು ಎರಡು ಕೈಯಲ್ಲಿ ಎತ್ತಿಕೊಂಡು ಸರ್ಕಾರಿ ಆಸ್ಪತ್ರೆಗೆ ಓಡಿ ಬಂದಿದ್ಧಾನೆ. ಅಲ್ಲಿಗೆ ಆಕೆಗೆ ಟ್ರೀಟ್ಮೆಂಟ್ ನೀಡುವಂತೆ ಹೇಳಿ ಎಸ್ಕೇಪ್ ಆಗಿದ್ದಾನೆ.
ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದು,ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಮುರುಳಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ಧಾರೆ.
