Tyavarekoppa 13-11-25 ರ ಮದ್ಯಾಹ್ನ ಬನ್ನೇರುಘಟ್ಟ ಜೈವಿಕ ಉಧ್ಯಾನವನದಲ್ಲಿ ಬಸ್ ನಲ್ಲಿದ್ದ ಪ್ರವಾಸಿ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಬೆನ್ನಲ್ಲೆ ರಾಜ್ಯಾದ್ಯಂತ ಇರುವ ಸಫಾರಿ ಝೂಗಳು ಎಷ್ಟು ಸುರಕ್ಷಿತ ಎಂಬ ಅನುಮಾನಗಳು ಮೂಡತೊಡಗಿದೆ. ಅದರಲ್ಲೂ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮವು ಪ್ರವಾಸಿಗರ ಹಿತದೃಷ್ಟಿಯಿಂದ ಎಷ್ಟು ಸುರಕ್ಷಿತ ಎಂಬ ಬಗ್ಗೆ ಮಲೆನಾಡು ಟುಡೆ ನಡೆಸಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ದೆಹಲಿಯ ಝೂ ನಲ್ಲಿ ಹುಲಿ ವಿದ್ಯಾರ್ಥಿಯನ್ನು ಕೊಂದ ಘಟನೆ. 20 ವರ್ಷಗಳ ಹಿಂದೆಯೇ ತ್ಯಾವರೆಕೊಪ್ಪ ಸಿಂಹಧಾಮದಲ್ಲೂ ನಡೆದಿತ್ತು. 2014 ರಲ್ಲಿ ದೆಹಲಿಯ ಮೃಗಾಲಯದಲ್ಲಿ ಆಕಸ್ಮಿಕವಾಗಿ ಹುಲಿ ಆವರಣದೊಳಗೆ ಬಿದ್ದ ವಿದ್ಯಾರ್ಥಿಯನ್ನು ಬಿಳಿಹುಲಿ ಕೊಂದಿರುವ ಘಟನೆ ದೇಶದ್ಯಂತ ಚರ್ಚೆಗೆ ಗ್ರಾಸವಾಗಿತ್ತು.ದೆಹಲಿಯಲ್ಲಿ ಇಂತಹ ದುರ್ಘಟನೆ ಇಂದು ನಡೆದಿದ್ದರೆ, 20 ವರ್ಷದ ಹಿಂದೆಯೇ ಶಿವಮೊಗ್ಗ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಹುಲಿ ಆವರಣದೊಳಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ.ಆದು ಬೇರ್ಯಾರು ಅಲ್ಲ. ಪ್ರತಿದಿನ ಹುಲಿ ಲಾಲನೆ ಪಾಲನೆ ಮಾಡಿಕೊಂಡು ಟೈಗರ್ ಕೇಜ್ ಕಾಯುತ್ತಿದ್ದ ಗೇಟ್ ಕೀಪರ್ ,ತ್ಯಾಜವಳ್ಳಿಯ ಮಲ್ಲಿಕಪ್ಪ. ಪ್ರತಿಕ್ಷಣ ಎಚ್ಚರದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಪ್ಪ ಅಂದು ಸಂಜೆ ಹುಲಿ ಮತ್ತು ಜಿಂಕೆ ಆವರಣದ ಮದ್ಯದ ಗೇಟ್ ಕ್ಲೋಸ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಹುಲಿಯ ಆವರಣಗೊಳಗೆ ಬಿದ್ದಿದ್ದರು ಅಷ್ಟೆ.ಅಲ್ಲೆ ಇದ್ದ,ಹುಲಿ ಮಲ್ಲಿಕಪ್ಪನ ಮೇಲೆರೆಗಿ ಕೊಂದು ಹಾಕಿತ್ತು.ಇದಾದ ನಂತರ ತ್ಯಾವರೆಕೊಪ್ಪ ಹುಲಿಸಿಂಹ ಧಾಮ ಎಷ್ಟು ಸುರಕ್ಷಿತ ಎಂಬ ಚರ್ಚೆಗಳು ರಾಜ್ಯ ಹಾಗು ದೇಶದ್ಯಾಂತ ನಡೆದಿತ್ತು.ರಾಷ್ಟ್ರೀಯ ಮಾದ್ಯಮಗಳು ಇದನ್ನು ದೊಡ್ಡ ಸುದ್ದಿಯನ್ನಾಗಿ ಪ್ರಕಟಿಸಿದ್ದವು.ಅಂದು ಎಚ್ಚೆತ್ತು ಕೊಂಡ ಸರ್ಕಾರ ಸಫಾರಿಗಳ ಅಪ್ ಗ್ರೇಡ್ ಗೆ ಹೆಚ್ಚಿನ ಒತ್ತು ನೀಡಿತು.ಕೇವಲ 7 ರಿಂದ 8 ಅಡಿ ಎತ್ತರವಿದ್ದ ತಂತಿ ಬೇಲಿಯನ್ನು 21 ಅಡಿಗಳವರೆಗೆ ಎತ್ತರಿಸುಂತೆ ಸಲಹೆ ನೀಡಿತು.ಅಂತೆಯೆ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲೂ ವನ್ಯಪ್ರಾಣಿಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಹೊಸ ತಂತಿ ಬೇಲಿ ಆವರಣವನ್ನು ನಿರ್ಮಿಸಲಾಯಿತು.ಹಳೆ ಆವರಣದಲ್ಲಿದ್ದ,ಹುಲಿ ಸಿಂಹಗಳನ್ನು ಹೊಸ ಆವರಣದೊಳಗೆ ಬಿಡಲಾಯಿತು.ತ್ಯಾವರೆಕೊಪ್ಪ ಹುಲಿಸಿಂಹಧಾಮ ಪ್ರವಾಸಿಗರ ಹಿತದೃಷ್ಟಿಯಿಂದ
Tyavarekoppa ಕೆಸರುಮಯವಾಗುವ ಸಫಾರಿ ರಸ್ತೆ.ವಾಹನ ಕೆಟ್ಟು ನಿಂತರೆ ದೇವರೇ ಗತಿ.
ಮಳೆಗಾಲದಲ್ಲಿ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಲೈಯನ್ ಟೈಗರ್ ಸಫಾರಿಗೆ ವಾಹನದಲ್ಲಿ ತೆರಳುವ ಪ್ರಯಾಣಿಕರು ಎಷ್ಟು ಸೇಪ್ ಅನ್ನೋ ಆತಂಕ ಎದುರಾಗುತ್ತದೆ.ಮಳೆಗಾಲದಲ್ಲಿ ಸಫಾರಿಯ ರಸ್ತೆಗಳು ಕೆಸರು ಗದ್ದೆಗಳಾಗಿರುತ್ತದೆ.ಕೆಸರಿನ ರಸ್ತೆಯಲ್ಲಿ ಹರಸಾಹಸ ಮಾಡಿಕೊಂಡು ವಾಹನ ಚಲಾಯಿಸುವ ಚಾಲಕ ಅಂದಾಜಿನ ಮೇಲೆಯೆ ಸಾಗು ಹಾಕುತ್ತಾನೆ.ಅಕಸ್ಮಾತ್ ವಾಹನ ಕೆಟ್ಟು ಹೋದರೆ ದೇವರೇ ಗತಿ.ಯಾಕೆಂದರೆ ಟೈಗರ್ ಮತ್ತು ಹುಲಿ ಆವರಣದೊಳಗೆ ವಾಹನವಿರುತ್ತದೆ ಎಂಬುದು ಗಂಭೀರ ವಿಚಾರ. ಸಿಬ್ಬಂದಿಗಳು ವಾಹನದಿಂದ ಕೆಳಗಿಳಿದು ದೂಕುವ ಸ್ಥಿತಿಯಲ್ಲಂತೂ ಇರುವುದಿಲ್ಲ.ಚಾಲಕ ವಾಚರ್ ಗಳು ಮೊಂಡು ಧೈರ್ಯ ಪ್ರದರ್ಶಿಸಲು ಹೋಗುವುದಿಲ್ಲ. ಇಂತಹ ಸಂದರ್ಬದಲ್ಲಿ ಕುತೂಹಲಕ್ಕಾಗಿ ಸಿಬ್ಬಂದಿ ಕಣ್ತಪ್ಪಿಸಿ,ಪ್ರವಾಸಿಗರಲ್ಲಿ ಯಾರಾದ್ರು,ವಾಹನದಿಂದ ಕೆಳಗಿಳಿದರೆ ದೇವರೇ ಗತಿ.ಅವರಿಗೆ ನಾವಿರುವುದು ಹುಲಿ ಅಥವಾ ಸಿಂಹದ ಬೋನಿನಲ್ಲಿ ಅನ್ನೋ ಅಳಕು ಆತಂಕ ಕೂಡ ಇರೋದಿಲ್ಲ.ಪ್ರವಾಸದ ಮೋಜಿನಲ್ಲಿರುವ ಜನರಿಗೆ ಉತ್ಸಹದ ಚಿಲುಮೆ ಯಾವಾಗ್ಲು ಚಿಮ್ಮುತ್ತಲೇ ಇರುತ್ತೆ.

ಹಲವು ಸಂದರ್ಭಗಳಲ್ಲಿ ಮಳೆಗಾಲದಲ್ಲಿ ಸಫಾರಿ ಒಳಗೆ ವಾಹನಗಳು ಕೆಟ್ಟು ನಿಂತ ಉದಾಹರಣೆಗಳಿವೆ. ಇಂತಹ ಸಂದರ್ಭದಲ್ಲಿ ವಾಹನ ಚಾಲಕರು, ಸಪಾರಿಯ ಕೇಂದ್ರ ಕಛೇರಿಗೆ ವೈರ್ ಲೆಸ್ ಮೂಲಕ ಮಾಹಿತಿ ನೀಡುತ್ತಾರೆ.ನಂತರ ಜೀಪಿನಲ್ಲಿ ಬರುವ ಇತರೆ ಸಿಬ್ಬಂದಿಗಳು ಆವರಣಗೊಳಗಿನ ಹುಲಿ ಅಥವಾ ಸಿಂಹಗಳನ್ನು ಬೋನಿಗೆ ಮೊದಲು ಅಟ್ಟುತ್ತಾರೆ.ನಂತರ ವಾಹನವನ್ನು ತಳ್ಳಿ ಮುಂದೆ ಸಾಗು ಹಾಕುತ್ತಾರೆ.ಇದು ಪ್ರತಿ ಮಳೆಗಾಲದಲ್ಲಿ ಆಗ್ಗಾಗ್ಗೆ ಸಪಾರಿ ರಸ್ತೆಯಲ್ಲಿ ಕಂಡು ಬರುತ್ತಿದ ಸಾಮಾನ್ಯ ದೃಷ್ಯವಾಗಿತ್ತು. ಸಪಾರಿಯ ಮಣ್ಣಿನ ರಸ್ತೆಗೆ ಸ್ವಲ್ಪ ಕಾಯಕಲ್ಪ ಮಾಡಿದರೂ,ವಾಹನಗಳು ಸುಗಮವಾಗಿ ಸಾಗಬಹುದಾಗಿದೆ. ರಸ್ತೆಯನ್ನು ಸಂಪೂರ್ಣವಾಗಿ ಸರಿಪಡಿಸದಿದ್ದರೆ ಅನಾಹುತಗಳು ತಪ್ಪಿದ್ದಲ್ಲ. ಫೋರ್ ವೀಲ್ ಡ್ರೈವ್ ವಾಹನಗಳನ್ನು ಬಳಸಿದರೆ ಒಳಿತು ಎಂಬ ಅಭಿಪ್ರಾಯ ಪ್ರಾಣಿ ಪ್ರೀಯರಿಂದ ವ್ಯಕ್ತವಾಗಿತ್ತು.
Tyavarekoppa ಹೈಟೆಕ್ ಆಗಿರುವ ಲಯನ್ ಸಫಾರಿ
ಪ್ರಸ್ಥುತ ತ್ಯಾವರೆ ಹುಲಿಸಿಂಹಧಾಮ ದೇಶದಲ್ಲಿಯೇ ಪ್ರತಿಷ್ಠಿತ ಸಿಂಹಧಾಮವಾಗಿ ರೂಪುಗೊಂಡಿದೆ. 3D ಎಫೆಕ್ಟ್ ನಲ್ಲಿ ವನ್ಯಪ್ರಾಣಿಗಳನ್ನು ನೋಡುವಂತ ಅತ್ಯಾಧುನಿಕ ತಂತ್ರಜ್ಞಾನ ಸಫಾರಿ ಹೊಂದಿದೆಯ. ಬಿಳಿ ಹುಲಿ ಮತ್ತು ಸಿಂಹಗಳು ಹೊಸ ಅತಿಥಿಗಳಾಗಿ ಆಗಮಿಸಿದೆ. ಇನ್ನು ಹುಲಿ ಮತ್ತು ಸಿಂಹಗಳಿರುವ ಕೇಜುಗಳು (ಆವರಣ) ಎಷ್ಟುಸುರಕ್ಷಿತ ಎಂಬ ಪ್ರಶ್ನೆ ಮೂಡುತ್ತದೆ.ಹೌದು ಹುಲಿಸಿಂಹಗಳು ಮುಕ್ತವಾಗಿ ಸಂಚರಿಸಲು ನಿರ್ಮಿಸಿರುವ ತಂತಿ ಬೇಲಿ ಪ್ರವಾಸಿಗರು ಹಾಗು ಸಿಬ್ಬಂದಿಗಳ ಹಿತದೃಷ್ಟಿಯಿಂದ ಅಷ್ಟೊಂದು ಸುರಕ್ಷಿತವಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.ಹೆವಿ ಗೇಜ್ ತಂತಿ ಅಳವಡಿಸಿದ್ದರೂ,ತಂತಿಯನ್ನು ತುಂಡರಿಸಬಹುದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಮಳೆ ಚಳಿಗೆ ಈಗಾಗಲೇ ಹಲವು ಭಾಗಗಳಲ್ಲಿ ತಂತಿ ಬೇಲಿ ತುಕ್ಕು ಹಿಡಿದು ಹೋಗಿದೆ.ಇಂತಹ ಜಾಗಗಳಲ್ಲಿ ಹುಲಿ ಇಲ್ಲವೇ ಸಿಂಹ ಶಕ್ತಿ ಪ್ರದರ್ಶಿಸಿದರೂ,ಆವರಣದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ.ಹೀಗಾಗಿ ಈಗಿರುವ ತಂತಿಬೇಲಿ ಸ್ಥಳಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಭಂಧಿಸಬೇಕಿದೆ.

ಹೇಳಿಕೇಳಿ ತ್ಯಾವರೆಕೊಪ್ಪ ಹುಸಿಸಿಂಹಧಾಮ ಇರುವುದು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದುಕೊಂಡು.ಬಿ.ಹೆಚ್ ರಸ್ತೆಯ ಪಕ್ಕದಲ್ಲಿರುವ ತ್ಯಾವರೆಕೊಪ್ಪ ಹುಲಿಸಿಂಹದಾಮದ ಎಂಡ್ ಪಾಯಿಂಟ್ ಶೆಟ್ಟಿಹಳ್ಳಿ ಕಾಡಿಗೆ ಹೊಂದಿಕೊಂಡಿದೆ.ಹೀಗಾಗಿ ಹುಲಿಸಿಂಹದ ಆವರಣ ಕಾಡಂಚಿನಲ್ಲಿರುವುದರಿಂದ ಹೊರಗೆ ಭದ್ರತೆ ದೃಷ್ಟಿಯಿಂದ ಯಾವುದೇ ಗೋಡೆ ಇಲ್ಲವೇ ಬೇಲಿ ನಿರ್ಮಿಸಿಲ್ಲ.ರಾತ್ರಿವೇಳೆ ಶೆಟ್ಟಿಹಳ್ಳಿ ಕಾಡಿನ ವನ್ಯಪ್ರಾಣಿಗಳು ಮುಕ್ತವಾಗಿ ಸಪಾರಿ ಒಳಪ್ರವೇಶಿಸಬಹುದಾಗಿದೆ.ಈ ಕಾಡು ಪ್ರಾಣಿಗಳು ಸಪಾರಿ ಕಾಡಿನಲ್ಲಿ ಬೀಡು ಬಿಟ್ಟು,ಬೆಳಗಿನ ವೇಳೆಯಲ್ಲಿ ಸಿಬ್ಬಂದಿಗಳಿಗೆ ಇಲ್ಲವೇ ಪ್ರವಾಸಿಗರ ಮೇಲೆ ದಾಳಿ ಮಾಡಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
Tyavarekoppa ಇತ್ತೀಚಿನ ವರ್ಷಗಳಲ್ಲಿ ತ್ಯಾವರೆಕೊಪ್ಪ ಹುಲಿಸಿಂಹಧಾಮ ಸಾಕಷ್ಟು ಅಭಿವೃದ್ಧಿಯಾಗಿದೆ ನಿಜ.ಹುಲಿಸಿಂಹದ ಆವರಣದ ಅವ್ಯವಸ್ಥೆ ಹೊರತು ಪಡಿಸಿದರೆ.ಉಳಿದ ವನ್ಯಪ್ರಾಣಿಗಳಿರುವ ಕೇಜ್ ಗಳು ಹೆಚ್ಚಿನ ಸುರಕ್ಷತೆ ಹೊಂದಿದೆ.ಆದರೆ ಸಫಾರಿಯಲ್ಲಿ ಸಿಬ್ಬಂದಿಗಳು ಮತ್ತು ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಇನ್ನಷ್ಟು ಮಾರ್ಪಾಡುಗಳು ತುರ್ತಾಗಿ ಆಗಬೇಕಿದೆ. ಈ ಹಿಂದಿದ್ದ ಸಫಾರಿಯ ನಿರ್ದೇಶಕ ಮುಕುಂದ್ ಚಂದ್ ಹಾಗು ಹಾಲಿ ನಿರ್ದೇಶಕ ಡಿಸಿಎಫ್ ಅಮರಾಕ್ಷರ್ , ತ್ಯಾವರೆಕೊಪ್ಪ ಹುಲಿಸಿಂಹಧಾಮದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಎಲ್ಲಾ ಸುರಕ್ಷಿತವಾಗಿದ್ದು, ಪ್ರವಾಸಿಗರಿಂದಲೇ ಏನಾದ್ರು ಎಡವಟ್ಟುಗಳಾದರೂ, ಅದರ ಜವಬ್ದಾರಿ ನಿರ್ವಹಣೆ ಹೊಣೆಯನ್ನು ಆಯಾ ಸಫಾರಿಯ ಅಧಿಕಾರಿ ಸಿಬ್ಬಂದಿಗಳೇ ಹೊರಬೇಕು ಎಂಬುದು ಮಾತ್ರ ವಿಪರ್ಯಾಸ.
Tyavarekoppa Lion and Tiger Safari Safety


