Sagar Cricketer Virat ಸಾಗರ : ಸ್ಥಳೀಯ ಕ್ರಿಕೆಟ್ ಕ್ಲಬ್ ಆಫ್ ಸಾಗರ್ ತಂಡದ ಪ್ರತಿಭಾವಂತ ಕ್ರಿಕೆಟಿಗ ವಿರಾಟ್ ಆರ್. ಗಣ್ಯ ಅವರು, ಪ್ರತಿಷ್ಠಿತ 19 ವರ್ಷದೊಳಗಿನವರ (U-19) ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಶಿವಮೊಗ್ಗ : ವಾಹನ ಮಾಲೀಕನಿಗೆ ಬಿತ್ತು ನೋಡಿ ಬರೋಬ್ಬರಿ 12,500 ರೂ ದಂಡ
ವಿರಾಟ್ ಆರ್. ಗಣ್ಯ ಅವರು ಪೊಲೀಸ್ ಇಲಾಖೆಯ ಉದ್ಯೋಗಿ ರಾಘವೇಂದ್ರ ಎಂ. ಮತ್ತು ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಪವಿತ್ರಾ ಎನ್. ದಂಪತಿಯ ಸುಪುತ್ರರಾಗಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಆಶ್ರಯದಲ್ಲಿ ನಡೆಯುವ ಶಿವಮೊಗ್ಗ ವಲಯದ ಪ್ರಥಮ ಡಿವಿಷನ್ ಲೀಗ್‌ನಲ್ಲಿ ಹಾಸನದ ವೀನಸ್ ಕ್ರಿಕೆಟ್ ಕ್ಲಬ್‌ನ ಪರವಾಗಿ ಆಡುತ್ತಿದ್ದಾರೆ. ವಿರಾಟ್ ಅವರ ಈ ಉತ್ತಮ ಸಾಧನೆಯು ಜಿಲ್ಲೆಯ ಯುವ ಕ್ರಿಕೆಟ್ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದೆ.
Sagar Cricketer Virat


