ಜಗಳ ಬಿಡಿಸಿದವನಿಗೆ ಬಿತ್ತು ಮಚ್ಚಿನೇಟು! ಕಾರಲ್ಲಿ ಟೂಲ್ಸ್​ ಹಾಕಿಕೊಂಡು ಬಂದು ಅಟೆಂಪ್ಟ್​!

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 : ಜಗಳ ಬಿಡಿಸಲು ಹೋದ ವ್ಯಕ್ತಿಗೆ ಲಾಂಗಿನೇಟು ಬಿದ್ದ ಪ್ರಕರಣವೊಂದು ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯಲ್ಲಿ ಎಲ್​& ಓ ನಿರ್ವಹಣೆಯ ಬಗ್ಗೆ ಸಾಕಷ್ಟು ಕುಹುಕಗಳಿರುವೆ. ಇದರ ನಡುವೆ ಇಂತಹದ್ದೊಂದು ಘಟನೆ ನಡೆದಿದೆ. ಕಳೆದ 23 ನೇ ತಾರೀಖು ನಡೆದ ಘಟನೆಯ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ 2. Act & Section: THE BHARATIYA NYAYA SANHITA (BNS), 2023 (U / s – 126(2), 352, 115(2), 118(1), 109(1), 351(2), 190) ಅಡಿಯಲ್ಲಿ ಕೇಸ್ ಸಹ ದಾಖಲಾಗಿದೆ. ನಡೆದ ಘಟನೆಯನ್ನು ಗಮನಿಸುವುದಾದರೆ, ಇಲ್ಲಿನ ನಿವಾಸಿ, ಕೃತಿಕಾ ಎಂಬವರು ಹೆಬ್ಬಂಡಿ ಸರ್ಕಲ್​ನಲ್ಲಿ ಬರುತ್ತಿದ್ದಾಗ, ಅವರ ಪರಿಚಯಸ್ಥನ ಜೊತೆಗೆ ಯಾರೋ ಇನ್ನೊಬ್ಬರು ಜಗಳ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಹಾಗಾಗಿ ಸ್ಥಳಕ್ಕೆ ಹೋಗಿ ವಿಚಾರಿಸಿದ್ದಾರೆ ಅಲ್ಲದೆ ಮಾತನಾಡಿ ಜಗಳ ಬಿಡಿಸಿದ್ದಾರೆ. ಈ ಮಧ್ಯೆ ಅಲ್ಲಿಂದ ತೆರಳಿದ ಆನಂದ ಎಂಬಾತ, ತಕ್ಷಣವೇ ಕಾರೊಂದರಲ್ಲಿ ಹುಡುಗರನ್ನ ಹಾಗೂ ಟೂಲ್ಸ್ ಹಾಕಿಕೊಂಡು ಸ್ಥಳಕ್ಕೆ ಬಂದಿದ್ದಾನೆ. ಇತ್ತ ದೂರುದಾರರು ತಮ್ಮ ಪರಿಚಯಸ್ಥರನ್ನ ಉಪಚರಿಸಿ ಜಗಳದ ವಿಚಾರ ಏನು ತಿಳಿಯುತ್ತಿರುವಾಗಲೇ ಸ್ಥಳಕ್ಕೆ ಬಂದ ಆರೋಪಿಗಳು ಕಾರಿನಿಂದ ಇಳಿದವರೆ, ಜಗಳ ಬಿಡಿಸಿದ್ದ ಆನಂದ ಮೈಮೇಲೆ ಎರಗಿದ್ದಾರೆ. ಈ ವೇಳೆ ಆರೋಪಿ ದರ್ಶನ್ ಎಂಬಾತ ಆನಂದನ ಜೊತೆಗೆ ಸೇರಿ ನಮ್ ಹುಡ್ಗನಿಗೆ ಏಕೆ ಆವಾಜ್ ಹಾಕಿದೆ ಎಂದು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಗಲಾಟೆಯಲ್ಲಿ ದೂರುದಾರರಿಗೆ ಗಾಯವಾಗಿದ್ದು, ಅವರನ್ನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರು ಹಾಸ್ಪಿಟಲ್ ಸ್ಟೇಟ್​ಮೆಂಟ್ ಆಧರಿಸಿ ಎಫ್​ಐಆರ್ ಮಾಡಿದ್ದಾರೆ. 

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

- Advertisement -

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Man Attacked with Machete Bhadravathi

Share This Article
Leave a Comment

Leave a Reply

Your email address will not be published. Required fields are marked *