Sagar Shivamogga Ripponpet thirthahalli news 21 ಶಿವಮೊಗ್ಗ, malenadu today news : August 21 2025 : ಓದುಗರೆ ಮಲೆನಾಡು ಟುಡೆಯ ಇವತ್ತಿನ ಚಟ್‌ಪಟ್ ಸುದ್ದಿಗಳು: ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ಮಾಹಿತಿ ನಿಮ್ಮ ಮುಂದೆ
ಇದನ್ನು ಸಹ ಓದಿ : ನಿಮಗಿದು ಗೊತ್ತಾ! ಹೀಗೂ ಬಾಡಿ ಬಿಲ್ಡ್ ಮಾಡಬಹುದು! ಮೈಂಡ್ ಫ್ರೆಶ್ ಮಾಡ್ಕೋಬಹುದು! https://malenadutoday.com/health-tips-by-malenadu-today/
ಸಾಲಬಾಧೆಯಿಂದ ಲಾರಿ ಮಾಲೀಕ ಆತ್ಮಹತ್ಯೆ/Sagar Shivamogga Ripponpet thirthahalli news 21
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮೇಗರವಳ್ಳಿ ಗ್ರಾಮದಲ್ಲಿ ಲಾರಿ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಭಾಧೆಯಿಂದ 42 ವರುಷದ ಮಂಜುನಾಥ್ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಒಂದು ತಿಂಗಳಿನಲ್ಲಿ ಲಾರಿ ಮಾಲೀಕರ ಸಾವಾಗಿರುವುದು ಇದು ಎರಡನೇ ಪ್ರಕರಣವಾಗಿದೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಬಸ್ ಡಿಕ್ಕಿ: ಕಟ್ಟಡ ಕಾರ್ಮಿಕ ಸಾವು
ಶಿಕಾರಿಪುರ ಪಟ್ಟಣದ ಚಾನಲ್ ಬಳಿ ಬಸ್ವೊಂದು ಡಿಕ್ಕಿಯಾದ ಪರಿಣಾಮ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಶಿವಾಜಿರಾವ್ (49) ಮೃತರು. ಕಟ್ಟಡ ಕಾರ್ಮಿಕರಾಗಿದ್ದ ಇವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇವರಿಗೆ ಬಸ್ ಡಿಕ್ಕಿಯಾಗಿದೆ. ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಸಹ ಚಿಕಿತ್ಸೆ ಫಲನೀಡಲಿಲ್ಲ.

ಬಾವಿಗೆ ಬಿದ್ದು ಯುವಕ ಸಾವು
ರಿಪ್ಪನ್‌ಪೇಟೆ ಸಮೀಪದ ನವಟೂರು ಗ್ರಾಮದಲ್ಲಿ 30 ವರ್ಷದ ಯುವಕನೊಬ್ಬ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಆನಂದ್ ಮೃತ ಯುವಕ. ಈ ಘಟನೆ ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಇನ್ನಷ್ಟೆ ಗೊತ್ತಾಗಬೇಕಿದೆ. ಯುವಕನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದ್ದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಆನ್‌ಲೈನ್ ವಂಚನೆ
ಬೈಕ್ ಲೋನ್ ಇನ್ಸ್ಟಾಲ್ಮೆಂಟ್ ಬಾಕಿ ಇದೆ ಎಂದು ವಂಚಿಸಿದ ಘಟನೆಯೊಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯೊಬ್ಬರಿಗೆ ಈ ರೀತಿಯಲ್ಲಿ ₹27,900 ವಂಚಿಸಲಾಗಿದೆ. ಲೋನ್ ಕ್ಲಿಯರೆನ್ಸ್ ಹೆಸರಲ್ಲಿ ವಂಚಿಸಿರುವ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..