KARNATAKA NEWS/ ONLINE / Malenadu today/ Sep 14, 2023 SHIVAMOGGA NEWS
ಶಿವಮೊಗ್ಗ ಪೊಲೀಸರು ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಿನ್ನೆಲೆ ಕೈಗೊಳ್ಳುತ್ತಿರುವ ಭದ್ರತಾ ವ್ಯವಸ್ಥೆಯ ಸಿದ್ದತೆಗೆ ಪೂರಕವಾಗಿ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗದ ರೌಡಿಗಳ ಮನೆ ಬಾಗಿಲಿಗೆ ಹೋಗಿ ವಾರ್ನಿಂಗ್ ಕೊಟ್ಟಿದ್ದ ಎಸ್ಪಿ ಮಿಥುನ್ ಕುಮಾರ್, ಇದೀಗ ರೌಡಿ ಪರೇಡ್ ನಡೆಸಿದ್ದಾರೆ.
ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ 13-09-2023 ರಂದು ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ರೌಡಿ ಪರೇಡ್ ನಡೆಸಲಾಯ್ತು
ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಸುರೇಶ್ ಎಂ, ಪೊಲೀಸ್ ಉಪಾಧಿಕ್ಷಕರು ಶಿವಮೊಗ್ಗ ಬಿ ಉಪ ವಿಭಾಗರವರು ಮತ್ತು ಭದ್ರಾವತಿ ಉಪ ವಿಭಾಗದಲ್ಲಿ ನಾಗರಾಜ್, ಪೊಲೀಸ್ ಉಪಾಧಿಕ್ಷಕರವರು ಹಾಗೂ ಸಾಗರ ಉಪ ವಿಭಾಗದಲ್ಲಿ ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ್, ಪೊಲೀಸ್ ಉಪಾಧಿಕ್ಷಕರವರು ಮತ್ತು ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಈ ಪರೇಡ್ ನಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ನಗರದಲ್ಲಿ 144 ಜನ ರೌಡಿ ಆಸಾಮಿಗಳು, ಭದ್ರಾವತಿಯಲ್ಲಿ 79 ಜನ ರೌಡಿ ಆಸಾಮಿಗಳು ಮತ್ತು ಸಾಗರದಲ್ಲಿ 40 ಜನ ರೌಡಿ ಆಸಾಮಿಗಳು ಸೇರಿ ಒಟ್ಟು 263 ಜನ ರೌಡಿ ಆಸಾಮಿಗಳು ಪರೇಡ್ನಲ್ಲಿ ಹಾಜರಿದ್ದರು
ರೌಡಿ ಪರೇಡ್ ನಲ್ಲಿ ಹಾಜರಿದ್ದ ರೌಡಿ ಆಸಾಮಿಗಳ ಹಾಲೀ ವಿಳಾಸ, ಆದಾಯದ ಮೂಲ ಮತ್ತು ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಅಪಾರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆಯೂ ಸಹಾ ಪರಿಶಿಲನೆ ನಡೆಸಿದ ಪೊಲೀಸರು, ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮತ್ತು ಕೋಮು ಸೌಹಾರ್ದತೆಗೆ ದಕ್ಕೆತರುವಂತಹ / ಶಾಂತಿಗೆ ಭಂಗವನ್ನುಂಟು ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಚಿಸಿದರು.
ಹಾಗೊಂದು ವೇಳೆ ಯಾವುದಾದರೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದಲ್ಲಿ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ರೌಡಿ ಪರೇಡ್ ನಡೆಸಿ, ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನ ಬಾಹಿರ ಚಟುವಟಿಕೆ ನಡೆಸದಂತೆ ವಾರ್ನಿಂಗ್ ನೀಡಿದ್ರು #shivamogga pic.twitter.com/fEwHDjFjtb
— malenadutoday.com (@CMalenadutoday) September 14, 2023
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ
