ಮೆಗ್ಗಾನ್​ ಆಸ್ಪತ್ರೆಯಲ್ಲಿಯೇ ಲೋಕಾಯುಕ್ತ ಪೊಲೀಸರ ಸೀಕ್ರೆಟ್ ಟ್ರ್ಯಾಪ್! ಸಿಕ್ಕಿಬಿದ್ದವರು ಯಾರು ಗೊತ್ತಾ!?

ajjimane ganesh

ಶಿವಮೊಗ್ಗ, malenadu today news : ಲಂಚ.. ಲಂಚ..ಲಂಚ .. ಯಾವ ಮಟ್ಟಿಗೆ ಎಂದರೆ, ವಿಕಲಚೇತನ ವ್ಯಕ್ತಿಗೆ ಪ್ರಮಾಣ ಪತ್ರ ಕೊಡೋದಕ್ಕೆ ಲಂಚ ಕೇಳಿದ್ದ ಕ್ಲರ್ಕ್​ ಒಬ್ಬ ಇದೀಗ ಲೋಕಾಯುಕ ಪೊಲೀಸರ ಬಲೆಗೆ ಬಿದ್ದಿದೆ.  ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ಆಡಳಿತ ವಿಭಾಗದ ಕ್ಲರ್ಕ್ ಸದ್ಯ ಲೋಕಾಯುಕ್ತರ ಅತಿಥಿಯಾಗಿದ್ದಾರೆ.  ₹1,500 ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತರ ಕೈಯಲ್ಲಿ ಟ್ರ್ಯಾಪ್ ಆಗಿದ್ದಾರೆ. 

ಲೋಕಾಯುಕ್ತ ಪೊಲೀಸ್ ಪ್ರಕರಣ

ಸಾಗರ ತಾಲ್ಲೂಕಿನ ಅಂದಾಸುರ ಗ್ರಾಮದ ನಾಗರಾಜ ಕೆ. ಎಂಬುವವರು ತಮ್ಮ 8 ವರ್ಷದ ಅಂಗವಿಕಲ  ಮಗಳ ಪ್ರಮಾಣಪತ್ರ ಮಾಡಿಸಲು ಮುಂದಾಗಿದ್ದರು. ಓದಲು ಹಾಗೂ ಸರ್ಕಾರಿ ಸೌಲಭ್ಯಕ್ಕಾಗಿ ಪ್ರಮಾಣಪತ್ರ ಅಗತ್ಯವಾಗಿತ್ತು. ಆದರೆ,  ಕ್ಲರ್ಕ್ ನೀಲಕಂಠೇಗೌಡ ಅವರು ದುಡ್ಡು ಕೊಡದೆ ಪ್ರಮಾಣ ಪತ್ರ ನೀಡಲು ಒಪ್ಪಿರಲಿಲ್ಲ. ಈ ನಡುವೆ ಕ್ಲರ್ಕ್​ ದುಡ್ಡು ಕೇಳಿದ್ದನ್ನ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ನಾಗರಾಜ್​ , ಆನಂತರ ಲೋಕಾಯುಕ್ತ ಇಲಾಖೆಗೆ ದೂರು ನೀಡಿದ್ದರು. ತಕ್ಷಣವೇ ಪ್ರಕರಣ ದಾಖಲಿಸಿ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಯನ್ನು ಟ್ರ್ಯಾಪ್ ಮಾಡಿದ್ದಾರೆ.  

- Advertisement -
A clerk at McGann Hospital was arrested by Lokayukta  Shivamogga is Malnad Regional Health Hub july 24 Unidentified Body Found in Shivamogga: Police Seek Public Help
Unidentified Body Found in Shivamogga: Police Seek Public Help

ಇಂದು ಮಧ್ಯಾಹ್ನ 3:30ಕ್ಕೆ ಮೆಗ್ಗಾನ್ ಆಸ್ಪತ್ರೆಯ ಆಡಳಿತ ಕಚೇರಿಯಲ್ಲಿ ಕ್ಲರ್ಕ್​ ನೀಲಕಂಠೆಗೌಡ ನಾಗರಾಜ್​ ಬಳಿ ದುಡ್ಡು ಪಡೆಯುತ್ತಿದ್ದಾಗ, ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದ್ಯ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. 

A clerk at McGann Hospital was arrested by Lokayukta 

Lokayukta Shivamogga, McGann Hospital Shivamogga,  ಲೋಕಾಯುಕ್ತ ಶಿವಮೊಗ್ಗ, ಲಂಚ ಪ್ರಕರಣ, #Corruption, #Bribe, #McGannHospital, #AntiCorruption

car decor

Share This Article