Lokayukta Raid in Shivamogga Anganwadis and School Shivamogga news : ಶಿವಮೊಗ್ಗ ಜಿಲ್ಲೆಯ ಆಯನೂರು ಮತ್ತು ಕುಂಸಿ ಪ್ರದೇಶಗಳಲ್ಲಿ ನಿನ್ನೆ ದಿನ ಲೋಕಾಯುಕ್ತ ಪೊಲೀಸರು 8 ಅಂಗನವಾಡಿ ಕೇಂದ್ರಗಳು ಮತ್ತು 1 ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ವಿಸಿಟ್ ನೀಡಿದರು.
ಎರಡು ತಂಡಗಳಾಗಿ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಲ್ಲಿನ ಅಕ್ರಮ ಮತ್ತು ಅವ್ಯವಸ್ಥೆಗಳನ್ನು ಪತ್ತೆ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಚ್. ಮಂಜುನಾಥ್ ಚೌಧರಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ್ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ನೇತೃತ್ವದ ತಂಡಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಕಾರ್ಯಾಚರಣೆಯಲ್ಲಿ
Lokayukta Raid in Shivamogga
ಅಂಗನವಾಡಿ ಕೇಂದ್ರಗಳಲ್ಲಿ ದಾಸ್ತಾನು ಕೊಠಡಿಗಳು ಸ್ವಚ್ಛತೆ ಇಲ್ಲದಿರುವುದು, ಆಹಾರ ಪ್ಯಾಕೆಟ್‌ಗಳ ಮೇಲೆ ಉತ್ಪಾದನಾ ದಿನಾಂಕ ಮತ್ತು ಅವಧಿ ಮೀರಿದ ದಿನಾಂಕಗಳನ್ನು ನಮೂದಿಸದಿರುವುದು ಕಂಡುಬಂದಿದೆ. ಅಲ್ಲದೆ, ಕೆಲವು ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದನ್ನು ಪತ್ತೆ ಮಾಡಿದ್ದಾರೆ.

ಈ ನಡುವೆ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಅವಧಿ ಮೀರಿದ ರಾಗಿ ಹಿಟ್ಟನ್ನು ಮಕ್ಕಳಿಗೆ ಬಳಸುತ್ತಿರುವುದು ಪತ್ತೆ ಹಚ್ಚಿದ್ದಾರೆ.ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡ ಅಧಿಕಾರಿಗಳು ಪತ್ತೆಯಾಗಿದೆ. ಈ ಗಂಭೀರ ಲೋಪಕ್ಕೆ ಸಂಬಂಧಿಸಿದಂತೆ ವಾರದೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ
Shivamogga Lokayukta raid, Anganwadi irregularities, school corruption, expired food, Ayanur, Kumsi, Kohalli Pete school, Lokayukta police, food quality, Karnataka news. ಶಿವಮೊಗ್ಗ ಲೋಕಾಯುಕ್ತ ದಾಳಿ, ಅಂಗನವಾಡಿ ಅವ್ಯವಸ್ಥೆ, ಶಾಲಾ ಅಕ್ರಮ, ಅವಧಿ ಮೀರಿದ ಆಹಾರ, ಆಯನೂರು, ಕುಂಸಿ, ಕೊಹಳ್ಳಿ ಪೇಟೆ ಶಾಲೆ, ಲೋಕಾಯುಕ್ತ ಪೊಲೀಸರು, ಆಹಾರ ಗುಣಮಟ್ಟ, ಕರ್ನಾಟಕ ಸುದ್ದಿ.
Lokayukta Raid in Shivamogga Anganwadis and School /ಲೋಕಾಯುಕ್ತ ದಾಳಿ: ಶಿವಮೊಗ್ಗದ ಅಂಗನವಾಡಿ, ಶಾಲೆಯಲ್ಲಿ ಅವ್ಯವಸ್ಥೆ ಪತ್ತೆ /