ಶಿವಮೊಗ್ಗ: ಇಂದು ನಗರದ ಹಲವು ಭಾಗಗಳಲ್ಲಿ 8 ಗಂಟೆ ವಿದ್ಯುತ್ ಕಡಿತ – ಮೆಸ್ಕಾಂ ಪ್ರಕಟಣೆ /Shivamogga: 8 hour power cut in many parts of the city today – MESCOM announcement
ಶಿವಮೊಗ್ಗ, ಜೂನ್ 24, 2025 (ಮಲೆನಾಡು ಟುಡೆ ಸುದ್ದಿ ಸಂಸ್ಥೆ): ಶಿವಮೊಗ್ಗ ನಗರದ ಎಂಆರ್‌ಎಸ್‌ನ 110/11 ಕೆವಿ ವಿ.ವಿ. ಕೇಂದ್ರದಲ್ಲಿ ಮೆಸ್ಕಾಂ ಶಿವಮೊಗ್ಗ ವಿಭಾಗ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆ ಇವತ್ತು ಅಂದರೆ ಜೂನ್ 24ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಇರೋದಿಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್, ವೆಂಕಟೇಶ ನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂಆರ್‌ಎಸ್ ವಾಟರ್ ಸಪ್ಲೈ, ಎಂಆರ್‌ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್.
ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳ ಸುತ್ತಮುತ್ತ: ಬಿ.ಹೆಚ್.ರಸ್ತೆ (ಗಾಯಿತ್ರ ಕಲ್ಯಾಣ ಮಂದಿರದಿಂದ ಅಮೀರ್ ಅಹಮದ್ ವೃತ್ತದವರೆಗೆ), ನೆಹರು ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಪಾರ್ಕ್ ಬಡಾವಣೆ, ಸರ್.ಎಂ.ವಿ ರಸ್ತೆ (ವೀರಭದ್ರೇಶ್ವರ ಚಿತ್ರಮಂದಿರದಿಂದ ಮಹಾವೀರ ವೃತ್ತದವರೆಗೆ).

8 hour power cut in many parts of the city
ಬಾಲರಾಜ್ ಅರಸ್ ರಸ್ತೆ (ಮಹಾವೀರ ವೃತ್ತದಿಂದ ಗೋಪಿವೃತ್ತದವರೆಗೆ), ಗಾಂಧಿ \ಪಾರ್ಕ್, ಲೂರ್ದು ನಗರ, ಕಾನ್ವೆಂಟ್ ರಸ್ತೆ, ಬಾಪೂಜಿ ನಗರ, ಚರ್ಚ್ ಕಾಂಪೌಂಡ್, ಟಿಜಿಎನ್ ಬಡಾವಣೆ, ಜೋಸೆಫ್ ನಗರ, ಟ್ಯಾಂಕ್ ಬೌಂಡ್ ರಸ್ತೆ, ಕುವೆಂಪು ರಂಗಮಂದಿರ ಮತ್ತು ಮಹಾನಗರ ಪಾಲಿಕೆ ಕಚೇರಿ ಸುತ್ತಮುತ್ತ, ಮೀನಾಕ್ಷಿ ಭವನ, ಶಂಕರಮಠ ರಸ್ತೆ, ಹಳೆ ಹೊನ್ನಾಳಿ ರಸ್ತೆ, ಬಾಲರಾಜ್ ರಸ್ತೆ.
ಮೆಹದಿ ನಗರ, ಬಾಪೂಜಿ ನಗರ, ಬಸವನಗುಡಿ ವಿನಾಯಕ ಪಾರ್ಕ್, ವಿನಾಯಕ ನಗರ, ಅಮೀರ್‌ಅಹಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಬಂಡ್ ರಸ್ತೆ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಕಚೇರಿ, ಆರ್‌ಟಿಓ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
8 hour power cut
