800 year old bhootappana temple theft / 800 ವರ್ಷದ ಹಳೆಯ ದೇಗುಲದಲ್ಲಿ ಕಳ್ಳತನ

Malenadu Today

800 year old bhootappana temple theft shivamogga / 800 ವರ್ಷಗಳ ಇತಿಹಾಸದ ಭೂತಪ್ಪನ ದೇವಾಲಯದಲ್ಲಿ ವಿಗ್ರಹ ಹಾಗೂ ಹುಂಡಿ ಹಣ ಕಳ್ಳತನ

Bhadravati news today / ಶಿವಮೊಗ್ಗ ಜಿಲ್ಲೆ, ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹಳೆ ನಗರದಲ್ಲಿರುವ ಸುಮಾರು 800 ವರ್ಷಗಳ ಇತಿಹಾಸ ಪ್ರಸಿದ್ಧ ಭೂತಪ್ಪನ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳ್ಳರು ದೇವಸ್ಥಾನದ ಬೀಗ ಮುರಿದು, ಗ್ರಿಲ್ ಕತ್ತರಿಸಿ ಒಳನುಗ್ಗಿ, ಅಲ್ಲಿ ಇರಿಸಲಾಗಿದ್ದ ಗಣಪತಿ ವಿಗ್ರಹ ಮತ್ತು ಶನಿದೇವರ ವಿಗ್ರಹಗಳ ಜೊತೆಗೆ ಮೂರು ವರ್ಷಗಳಿಂದ ಎಣಿಕೆ ಮಾಡದೆ ಬಿಟ್ಟಿದ್ದ  ಹುಂಡಿ ಹಣವನ್ನು ದೋಚಿದ್ದಾರೆ. ಈ ಕಳ್ಳತನದ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು,ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.  ಪ್ರಕರಣ ಸಂಬಂಧ ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭೂತಪ್ಪನ ದೇವಸ್ಥಾನ, 

Share This Article