operation Slaughter / ಮಾವಿನ ತೋಟದಲ್ಲಿ 47 ಜಾನುವಾರು ರಕ್ಷಣೆ !ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
operatoperation Slaughterion Slaughter
operation Slaughter

operation Slaughter | shivamogga news  ಶಿರಾಳಕೊಪ್ಪದಲ್ಲಿ 47 ಜಾನುವಾರುಗಳ ರಕ್ಷಣೆ

ಶಿರಾಳಕೊಪ್ಪ: ಸಮೀಪದ ಮಂಚಿಕೊಪ್ಪದ ಹಕ್ಕೊಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಇರಿಸಿದ್ದ  47 ಜಾನುವಾರುಗಳನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ರಕ್ಷಿಸಿದ್ದು, ಅವುಗಳನ್ನು ಗೋಶಾಲೆಗೆ ಬಿಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ, ಹಕ್ಕೊಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮಾವಿನ ತೋಟದಲ್ಲಿ ವಧೆಗಾಗಿ  ಕೂಡಿಟ್ಟಿದ್ದ  2 ಎಮ್ಮೆಗಳು ಸೇರಿದಂತೆ 47ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ಪಿಎಸ್‌ಐ ಪ್ರಶಾಂತ್ ಮತ್ತು ಅವರ ತಂಡ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ,   ಸುಮಾರು 250 ಕೆ.ಜಿ. ಜಾನುವಾರು ಮಾಂಸ, ಒಂದು ಓಮ್ನಿ ಮತ್ತು ಒಂದು ಅಶೋಕ್ ಲೇಲ್ಯಾಂಡ್ ವಾಹನ, ಎರಡು ಬೈಕ್‌ಗಳು, ಹಾಗೂ  ಚಾಕು, ಕತ್ತಿ ಮತ್ತು ತಕ್ಕಡಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್ ಅವರೊಂದಿಗೆ ಸಿಬ್ಬಂದಿಗಳಾದ ಕಾರ್ತಿಕ್, ಬಂಗಾರಪ್ಪ, ಶಿವಶಂಕರ್ ಬಾರ್ಕಿ, ಪ್ರದೀಪ್, ಶಿವಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Cattle Rescue | Shiralakoppa Police Operation | Illegal Cattle Transport | Gaushala Rescue | Karnataka Police News

ಶಿರಾಳಕೊಪ್ಪ, ಜಾನುವಾರು, ರಕ್ಷಣೆ, ಪೊಲೀಸ್, ಅಕ್ರಮ, ದಾಳಿ, ಹಕ್ಕೊಳ್ಳಿ, ಮಾಂಸ, ವಾಹನ, ಪಿಎಸ್‌ಐ, ಪ್ರಶಾಂತ್, ಗೋಶಾಲೆ, ಕರ್ನಾಟಕ, ಶಿವಮೊಗ್ಗ, ಸುದ್ದಿ, ಕಾರ್ಯಾಚರಣೆ, ವಧೆ, ಕಳ್ಳಸಾಗಣೆ , Shiralakoppa, Cattle, Rescue, Police, Illegal, Raid, Hakkolli, Meat, Vehicle, PSI, Prashanth, Gaushala, Karnataka, Shivamogga, News, Operation, Slaughter, Smuggling ,

operation Slaughter

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor